• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇನ್ನೂ ಒಂದು ವಾರ ಶಿವಕುಮಾರ ಶ್ರೀಗಳಿಗೆ ಐಸಿಯುನಲ್ಲಿ ಚಿಕಿತ್ಸೆ

|

ಚೆನ್ನೈ, ಡಿಸೆಂಬರ್ 17 : 'ಶಿವಕುಮಾರ ಸ್ವಾಮೀಜಿಗಳು ಚೇತರಿಸಿಕೊಳ್ಳುತ್ತಿದ್ದಾರೆ. ನ್ಯೂಟ್ರೀಷನ್‌ಗಳನ್ನು ನೀಡಲಾಗುತ್ತಿದ್ದು, ಇನ್ನೂ ಒಂದು ವಾರಗಳ ಕಾಲ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ' ಎಂದು ಚೆನ್ನೈನ ರೇಲಾ ಆಸ್ಪತ್ರೆಯ ಡಾ.ಪರಮೇಶ್ವರ್ ಹೇಳಿದ್ದಾರೆ.

ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ ವೈದ್ಯರು, 'ಶ್ರೀಗಳು ಶಸ್ತ್ರ ಚಿಕಿತ್ಸೆ ಬಳಿಕ ಉತ್ತಮ ರೀತಿಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ರಕ್ತನಾಳಗಳ ಮೂಲಕವೇ ನ್ಯೂಟ್ರೀಷನ್‌ಗಳನ್ನು ನೀಡಲಾಗುತ್ತಿದೆ' ಎಂದರು.

ಶಿವಕುಮಾರ ಶ್ರೀಗಳ ಆರೋಗ್ಯ ವಿಚಾರಿಸಿದ ಎಚ್.ಡಿ.ಕುಮಾರಸ್ವಾಮಿ

'ಇನ್ನೂ ಒಂದು ವಾರಗಳ ಕಾಲ ಐಸಿಯುನಲ್ಲಿಯೇ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀಗಳಿಗೆ ಯಾವುದೇ ಸೋಂಕು ತಗಲದಂತೆ ನೋಡಿಕೊಳ್ಳಲು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀಗಳು ಆರೋಗ್ಯವಾಗಿದ್ದಾರೆ' ಎಂದು ವೈದ್ಯರು ತಿಳಿಸಿದರು.

ನಾಲ್ಕು ತಾಸಿನ ಶಸ್ತ್ರಚಿಕಿತ್ಸೆ ತಡೆದುಕೊಂಡ ಸಿದ್ದಗಂಗಾ ಶ್ರೀಗಳು

'ಶ್ರೀಗಳಿಗೆ ಪ್ರೋಟೀನ್ ಮತ್ತು ನ್ಯೂಟ್ರೀಷಿಯನ್ ಕೊರತೆ ಇದೆ. ಸರಿಯಾದ ಪ್ರಮಾಣದಲ್ಲಿ ನ್ಯೂಟ್ರೀಷಿಯನ್ ನೀಡಲಾಗುತ್ತಿದೆ. ಶ್ರೀಗಳ ಎಲ್ಲರ ಜೊತೆಯೂ ಚೆನ್ನಾಗಿ ಮಾತನಾಡುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ' ಎಂದು ವೈದ್ಯರು ಸ್ಪಷ್ಟನೆ ನೀಡಿದರು.

ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ, ಡಿ.12ಕ್ಕೆ ವಾರ್ಡ್‌ಗೆ ಶಿಫ್ಟ್‌

English summary
Tumakuru Siddaganga Mutt Shivakumar Swamiji (111) to stay in Rela hospital Chennai for one week. Doctor will continue treatment in ICU.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X