ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಪ್ಪು ಕತ್ತಿ ಹಿಡಿಯಲು ಹೊರಟ ರಜನಿಗೆ ಚುಚ್ಚಿದ್ದು ಯಾರು?

By Mahesh
|
Google Oneindia Kannada News

ಚೆನ್ನೈ, ಸೆ.15: 'ಮೈಸೂರು ಹುಲಿ' ಟಿಪ್ಪು ಸುಲ್ತಾನ್ ಪಾತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ನಟಿಸುತ್ತಾರೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಅನೇಕ ಕಡೆಗಳಿಂದ ವಿರೋಧದ ಮಾತುಗಳು ಕೇಳಿ ಬಂದಿವೆ. ಮುಖ್ಯವಾಗಿ ಕತ್ತಿ ಝಳಪಿಸಲು ಸಿದ್ಧವಾದ ರಜನಿಗೆ ಬಿಜೆಪಿ ಎಚ್ಚರಿಕೆ ನೀಡಿದೆ.

ಹೇಗಾದರೂ ಮಾಡಿ ರಜನಿಕಾಂತ್ ರನ್ನು ಬಿಜೆಪಿಗೆ ಸೇರಿಸಿಕೊಳ್ಳಬೇಕು ಎಂದು ಇನ್ನಿಲ್ಲದ್ದಂತೆ ಪ್ರಯತ್ನಪಟ್ಟು ಸೋತ ತಮಿಳುನಾಡಿನ ಬಿಜೆಪಿ ಘಟಕ ಈಗ ರಜನಿಕಾಂತ್ ವಿರುದ್ಧ ತಿರುಗಿ ಬಿದ್ದಿದೆ. ರಜನಿ ಅವರು ಟಿಪ್ಪು ಸುಲ್ತಾನ್ ಪಾತ್ರವನ್ನು ಒಪ್ಪಿಕೊಳ್ಳಬಾರದು, ಟಿಪ್ಪು-ತಮಿಳುನಾಡು ವಿರೋಧಿಯಾಗಿದ್ದ, ತಮಿಳು ದ್ವೇಷಿಯಾಗಿದ್ದ ಎಂದು ರಜನಿಗೆ ಕಿವಿಮಾತು ಹೇಳಿದೆ. ['ರಾಜಕೀಯಕ್ಕೆ ರಜನಿಕಾಂತ್ ಬರುವುದು ಬೇಡ']

ಬಿಜೆಪಿಗೆ ಹಿಂದೂ ಮುನ್ನಾನಿ, ಹಿಂದೂ ಮಕ್ಕಳ್ ಕಚ್ಚಿ ಮುಂತಾದ ಸಂಘಟನೆಗಳ ಬೆಂಬಲ ಸಿಕ್ಕಿದೆ. ಕೆಲ ಸಂಘಟನೆಗಳ ವಾರಾಂತ್ಯದಲ್ಲಿ ಪ್ರತಿಭಟನೆ ಕೂಡಾ ನಡೆಸಿವೆ. ಇತ್ತ ಕರ್ನಾಟಕದಲ್ಲೂ ಟಿಪ್ಪು ಕನ್ನಡ ವಿರೋಧಿ ಈ ಚಿತ್ರ ಸೆಟ್ಟೇರಬಾರದು ಎಂಬ ಕೂಗು ಸಾಮಾಜಿಕ ಜಾಲ ತಾಣಗಳಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿದೆ. [ಟಿಪ್ಪು ಸುಲ್ತಾನ್ ವಿವಿ ರಾಜ್ಯದಲ್ಲೆಲ್ಲೂ ಸ್ಥಾಪಿಸುವಂತಿಲ್ಲ]

ಕರ್ನಾಟಕದ ರಾಜಕಾರಣಿ ಕಮ್ ನಿರ್ಮಾಪಕ ಅಶೋಕ್ ಖೇಣಿ ಅವರು ಭಾರಿ ಬಂಡವಾಳ ಹೂಡಿಕೆ ಮಾಡಲಿದ್ದು, ಟಿಪ್ಪು ಸುಲ್ತಾನ್ ಕುರಿತ ಚಿತ್ರದಲ್ಲಿ ರಜನಿಕಾಂತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಂದ ಕೂಡಲೇ ಹಿಂದೂ ಸಂಘಟನೆಗಳು ಜಾಗೃತಗೊಂಡಿವೆ.

'ಇಷ್ಟಕ್ಕೂ ಚಿತ್ರದ ಸ್ಕ್ರಿಪ್ಟ್ ಕೂಡಾ ತಯಾರಾಗಿಲ್ಲ. ಇತಿಹಾಸಕಾರರು, ಸಂಶೋಧಕರ ನೆರವು ಪಡೆದು ಸ್ಕ್ರಿಪ್ಟ್ ತಯಾರಿಸಿ ರಜನಿ ಅವರನ್ನು ಭೇಟಿ ಮಾಡಲಾಗುವುದು" ಎಂದು ಖೇಣಿ ಹೇಳಿದ್ದಾರೆ. ಯಾರು? ಯಾರು ಏನು ಹೇಳಿದ್ದಾರೆ ಮುಂದೆ ಓದಿ...

ಟಿಪ್ಪು ಒಬ್ಬ ಕ್ರೂರ ಆರಸ

ಟಿಪ್ಪು ಒಬ್ಬ ಕ್ರೂರ ಆರಸ

ಟಿಪ್ಪು ಸುಲ್ತಾನ್ ಹಿಂದೂಗಳನ್ನು ಕೊಂದ ಕೊಲೆಪಾತಕಿ. ಆತನ ಆಡಳಿತದಲ್ಲಿ ದ್ವೇಷ ರಾಜಕಾರಣವೇ ತುಂಬಿತ್ತು. ಹಿಂದೂಗಳ ದುಃಸ್ಥಿತಿಗೆ ಟಿಪ್ಪು ಕಾರಣ, ಇಂಥ ಸುಲ್ತಾನನ ಪಾತ್ರದಲ್ಲಿ ರಜನಿ ಏನಾದರೂ ನಟಿಸಿದರೆ ಇತಿಹಾಸವೇ ಬದಲಾಗಲಿದೆ. ರಜನಿಗೆ ಬಹುದೊಡ್ಡ ಹಿಂಬಾಲಕರಿದ್ದು, ಅವರಿಗೆ ಕೆಟ್ಟ ಸಂದೇಶ ನೀಡಿದ್ದಂತಾಗುತ್ತದೆ ಎಂದು ಬಿಜೆಪಿ ನಾಯಕ ಎಲ್ ಗಣೇಶನ್ ಅವರು ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ಹಿಂದೂ ಮಕ್ಕಳ್ ಕಚ್ಚಿ ಪ್ರತಿಕ್ರಿಯೆ

ಹಿಂದೂ ಮಕ್ಕಳ್ ಕಚ್ಚಿ ಪ್ರತಿಕ್ರಿಯೆ

ಹಿಂದೂ ಮಕ್ಕಳ್ ಕಚ್ಚಿ ಸೆಂಥಿಲ್ ಕುಮಾರ್ ಪ್ರತಿಕ್ರಿಯಿಸಿ, ಟಿಪ್ಪು ಸುಲ್ತಾನ್ ತನ್ನ ಅವಧಿಯಲ್ಲಿ ದೇಶವನ್ನು ಲೂಟಿ ಮಾಡಿದ್ದಾನೆ. ರಜನಿಕಾಂತ್ ಬಗ್ಗೆ ಅವರ ಅಭಿಮಾನಿಗಳಿಗೆ, ನಾಡಿನ ಜನತೆಗೆ ಆಧಾತ್ಮ ನಾಯಕರ ಇಮೇಜ್ ಇದೆ, ಟಿಪ್ಪು ಪಾತ್ರ ಮಾಡಿ ಎಲ್ಲವನ್ನು ಕಳೆದುಕೊಳ್ಳುವುದೇಕೆ? ಎಂದು ಪ್ರಶ್ನಿಸಿದ್ದಾರೆ.

ಅಶೋಕ್ ಖೇಣಿ ಪ್ರತಿಕ್ರಿಯೆ

ಅಶೋಕ್ ಖೇಣಿ ಪ್ರತಿಕ್ರಿಯೆ

ಟಿಪ್ಪು ಅಂಥಾ ಕ್ರೂರಿಯಾಗಿದ್ದರೆ, ಟಿಪ್ಪು ಬಗ್ಗೆ ಮಕ್ಕಳಿಗೆ ಪಾಠ ಏಕೆ ಹೇಳಿಕೊಡಲಾಗುತ್ತದೆ. ಮೈಸೂರು ಹುಲಿ ಎಂದು ಏಕೆ ಕರೆಯಲಾಗುತ್ತದೆ. ಟಿಪ್ಪು ಬಗ್ಗೆ ಬ್ರಿಟಿಷರು ತಪ್ಪು ಮಾಹಿತಿ ಹರಡಿದ್ದರಿಂದ ಇತಿಹಾಸದ ಸತ್ಯಗಳು ಮುಚ್ಚಿಹೋಗಿವೆ. ಟಿಪ್ಪು ಬಗ್ಗೆ ಸಿನಿಮಾಕ್ಕೆ ವಿರೋಧ ಏಕೆ ವ್ಯಕ್ತಪಡಿಸುತ್ತಾರೋ ನನಗಂತೂ ಗೊತ್ತಿಲ್ಲ ಎಂದು ಶಾಸಕ ಕಮ್ ನಿರ್ಮಾಪಕ ಖೇಣಿ ಪ್ರತಿಕ್ರಿಯಿಸಿದ್ದಾರೆ.

ಟಿಪ್ಪು ಹಿಂದೂ ವಿರೋಧಿಯಲ್ಲ :ಖೇಣಿ

ಟಿಪ್ಪು ಹಿಂದೂ ವಿರೋಧಿಯಲ್ಲ :ಖೇಣಿ

ಟಿಪ್ಪು ತನ್ನ ಆಡಳಿತಾವಧಿಯಲ್ಲಿ ಅನೇಕ ಹಿಂದೂ ದೇಗುಲಗಳಿಗೆ, ಮಠಗಳಿಗೆ ಅನುದಾನ ನೀಡಿದ್ದರ ಬಗ್ಗೆ ಶಾಸನಗಳಿವೆ, ದಾಖಲೆಗಳಿವೆ. ಆತನನ್ನು ಹಿಂದೂ ವಿರೋಧಿ ಎಂದು ಹೇಗೆ ಕರೆಯುತ್ತೀರಿ? ರಜನಿಕಾಂತ್ ಅವರು ಇನ್ನೂ ಪಾತ್ರ ಮಾಡುತ್ತೇನೆ ಎಂದು ಒಪ್ಪಿಕೊಂಡಿಲ್ಲ. ಚಿತ್ರದ ಬಗ್ಗೆ ಮಾತುಕತೆ ನಡೆಯುತ್ತಿದೆ ಅಷ್ಟೇ ಎಂದು ಖೇಣಿ ಹೇಳಿದ್ದಾರೆ.

ಮಾಜಿ ಸಿಎಂ ಎಂಜಿ ರಾಮಚಂದ್ರನ್ ಲೇಖನ ಉಲ್ಲೇಖ

ಮಾಜಿ ಸಿಎಂ ಎಂಜಿ ರಾಮಚಂದ್ರನ್ ಲೇಖನ ಉಲ್ಲೇಖ

ಮಾಜಿ ಸಿಎಂ ಎಂಜಿ ರಾಮಚಂದ್ರನ್ ಲೇಖನ ಉಲ್ಲೇಖಿಸಿರುವ ಹಿಂದೂ ಮುನ್ನನಿ ಸಂಘಟನೆಯ ರಾಮಗೋಪಾಲನ್ ಅವರು ಮಾತನಾಡಿ, ಈ ಚಿತ್ರ ತಮಿಳರ ವಿರೋಧಿ ಚಿತ್ರವಾಗಲಿದೆ. ಎಂಜಿಆರ್ ಅವರ ಆತ್ಮಚರಿತ್ರೆಯಲ್ಲಿ ಟಿಪ್ಪು ದುರಾಡಳಿತದ ಬಗ್ಗೆ ಉಲ್ಲೇಖವಿದೆ. ಟಿಪ್ಪು ಕಾಟ ತಾಳಲಾರದೆ ಮೂಲ ನಿವಾಸಿಗಳು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ವಲಸೆ ಹೋಗಿ ಕಷ್ಟ ಅನುಭವಿಸಿದ ಕಥೆ ಇದೆ.

ಟಿಪ್ಪು ಸುಲ್ತಾನ್ ಸ್ಮಾರಕಕ್ಕೆ ತಮಿಳು ದಲಿತರ ವಿರೋಧ

ಟಿಪ್ಪು ಸುಲ್ತಾನ್ ಸ್ಮಾರಕಕ್ಕೆ ತಮಿಳು ದಲಿತರ ವಿರೋಧ

ಟಿಪ್ಪು ಸುಲ್ತಾನ್ ಅವರ ಸ್ಮಾರಕ ಸ್ಥಾಪನೆಗೆ ದಿಂಡಿಗಲ್ ನಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಪುದು ಕೊಡಂಗಿಪಟ್ಟಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರು ದಿಂಡಿಗಲ್ ಜಿಲ್ಲೆಯಲ್ಲಿ ಟಿಪ್ಪು ಸುಲ್ತಾನ್ ಹಾಗೂ ಹೈದರಾಲಿ ಅವರ ಮಣಿಮಂಡಲಂ(ಸ್ಮಾರಕ) ಸ್ಥಾಪನೆಗೆ ಆದೇಶಿಸಿದ್ದರು. [ವಿರೋಧ ಏಕೆ? ಇಲ್ಲಿ ಓದಿ]

English summary
BJP and some other hardline outfits in Tamil Nadu have warned superstar Rajnikant not to do a film based on the life of Tipu Sultan.It is being said that BJP finds Sultan a murderer and any attempt to glorify the ruler will be taken as an offence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X