Get Updates
Get notified of breaking news, exclusive insights, and must-see stories!

ರಜನಿಕಾಂತ್ ಒಬ್ಬ ಅನಕ್ಷರಸ್ಥ ಎಂದ ಸುಬ್ರಮಣಿಯನ್ ಸ್ವಾಮಿ

Recommended Video

      ರಜಿನಿಕಾಂತ್ ಒಬ್ಬ ಅನಕ್ಷರಸ್ಥ. ರಾಜಕೀಯಕ್ಕೆ ಅವರು ಅನರ್ಹ ಎಂದ ಸುಬ್ರಮಣಿಯನ್ ಸ್ವಾಮಿ | Oneindia Kannada

      ಚೆನ್ನೈ, ಮೇ 11: ಬಿಜೆಪಿ ಜೊತೆಗೆ ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಕೈಜೋಡಿಸುತ್ತಾರೆ ಎಂಬ ಚರ್ಚೆ ಹಳೆಯದು. ಇದೀಗ ಹೇಳಿಕೆ ನೀಡಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ರಜನೀಕಾಂತ್ ರನ್ನು ಓರ್ವ ಅನಕ್ಷರಸ್ಥ ಎಂದು ಕರೆದಿದ್ದಾರೆ. ಅವರ ಜೊತೆಗಿನ ಮೈತ್ರಿ ದುರಂತ ಎಂದು ಬಣ್ಣಿಸಿದ್ದಾರೆ.

      "ಈ ವ್ಯಕ್ತಿ ಅನಕ್ಷರಸ್ಥ. ನಟರು ದೊಡ್ಡ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದ್ದ ದಿನಗಳು ಈಗಿಲ್ಲ. ಈ ಮೈತ್ರಿ ದುರಂತ," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

      ಬುಧವಾರ ರಜನೀಕಾಂತ್ ತಮ್ಮ ಪಕ್ಷದ ಚಾಲನೆ ಕಾರ್ಯಕ್ರಮ ಮತ್ತಷ್ಟು ಮುಂದಕ್ಕೆ ಹೋಗುವ ಮುನ್ಸೂಚನೆ ನೀಡಿದ್ದರು. ಆದರೆ ತಮ್ಮ ಪಕ್ಷಕ್ಕೆ ಚಾಲನೆ ನೀಡಿದ ನಂತರ ತಮಿಳುನಾಡಿಗೆ ಮತ್ತು ಅಲ್ಲಿನ ಜನರಿಗೆ ಒಳ್ಳೆಯ ದಿನಗಳನ್ನು ತರಲಿದೆ ಎಂದಿದ್ದರು.

      Rajnikanth is illiterate, alliance with him would be a disaster: Swamy

      ಹಲವು ವರ್ಷಗಳ ಅನುಮಾನ, ಬಿಸಿ ಬಿಸಿ ಚರ್ಚೆಯ ನಂತರ ಕಳೆದ ಡಿಸೆಂಬರ್ ನಲ್ಲಿ ತಾನು ಪಕ್ಷ ಸ್ಥಾಪನೆ ಮಾಡುತ್ತಿರುವುದಾಗಿ ರಜನಿಕಾಂತ್ ಬಹಿರಂಗವಾಗಿ ಘೋಷಿಸಿಕೊಂಡಿದ್ದರು. ಮತ್ತು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ 234 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವುದಾಗಿ ಹೇಳಿದ್ದರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+