ಹೊಸ ಚಾನೆಲ್ ಆರಂಭಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ ನಟ ರಜನೀಕಾಂತ್

ಚೆನ್ನೈ, ಡಿಸೆಂಬರ್ 21: ತಮಿಳು ನಟ ರಜನೀಕಾಂತ್ ಹೊಸ ಸುದ್ದಿ ವಾಹಿನಿ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ರಜನೀ ಘೋಷಣೆ ಮಾಡಿದ್ದರು. ತಮಿಳುನಾಡಿನಲ್ಲಿ 'ತಲೈವರ್' ಎಂದೇ ಕರೆಸಿಕೊಳ್ಳುವ ರಜನೀಕಾಂತ್ ತಾವು ಜನರನ್ನು ತಲುಪಲು ಸುದ್ದಿ ವಾಹಿನಿ ಆರಂಭಿಸಲಿದ್ದಾರೆ ಎಂಬುದು ಸದ್ಯದ ಚರ್ಚೆ.

ಸುದ್ದಿ ವಾಹಿನಿಯ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ತಮಿಳುನಾಡಿನಲ್ಲಿ ಪ್ರತಿ ರಾಜಕೀಯ ಪಕ್ಷಕ್ಕೂ ಒಂದೊಂದು ಸುದ್ದಿ ವಾಹಿನಿ ಇದ್ದು, ಅದಕ್ಕೆ ಹೊಸ ಸೇರ್ಪಡೆ ಇದಾಗಲಿದೆ. ಸದ್ಯಕ್ಕೆ ಮೂರು ಹೆಸರನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ರಜಿನಿ ಟಿವಿ, ಸೂಪರ್ ಸ್ಟಾರ್ ಟಿವಿ ಮತ್ತು ತಲೈವರ್ ಟಿವಿ ಈ ಮೂರರಲ್ಲಿ ಒಂದು ಹೆಸರು ಇಡಬಹುದು.

ಈ ಮೂರು ಹೆಸರುಗಳಿಗೆ ಟ್ರೇಡ್ ಮಾರ್ಕ್ ಪಡೆಯಲು ನಟ ರಜನೀಕಾಂತ್ ರಿಜಿಸ್ಟ್ರಾರ್ ಆಫ್ ಟ್ರೇಡ್ ಮಾರ್ಕ್ಸ್ ಗೆ ಪತ್ರ ಬರೆದಿದ್ದಾರೆ. ರಜನೀಕಾಂತ್ ಗೆ ಆಪ್ತರಾದ ವಿ.ಎಂ.ಸುಧಾಕರ್ ಅರ್ಜಿ ಹಾಕಿದ್ದಾರೆ.

Rajinikanth set to launch news channel in Tamil

"ನಾನು, ಆರ್.ರಜನೀಕಾಂತ್, ‌ಲೋಗೋ ಮೇಲೆ ನನ್ನ ಫೋಟೋ, ಹೆಸರು ಬಳಸಲು ಆಕ್ಷೇಪ ಇಲ್ಲ. ಈ ಅರ್ಜಿಯನ್ನು ಮುಂದಿನ ಹಂತದ ಪ್ರಕ್ರಿಯೆಗೆ ಪರಿಗಣಿಸಲು ರಿಜಿಸ್ಟ್ರಾರ್ ಗೆ ಮನವಿ ಮಾಡುತ್ತೇನೆ" ಎಂದು ಅರ್ಜಿಯಲ್ಲಿ ಹೇಳಿದ್ದಾರೆ.

ಒಂದು ಸುದ್ದಿ ವಾಹಿನಿಯ ಅಗತ್ಯವಿದೆ ಎನಿಸಿತು. ಏಕೆಂದರೆ ತಮಿಳುನಾಡಿನಲ್ಲಿ ಎಲ್ಲ ಪಕ್ಷಕ್ಕೂ ತನ್ನದೇ ಮುಖವಾಣಿ ಇದೆ. ಹೊಸ ಪಕ್ಷ ಆರಂಭಿಸುತ್ತಿದ್ದೇವೆ, ಇದು ಅಗತ್ಯ ಎನಿಸಿತು. ಅದಕ್ಕೂ ಹೆಚ್ಚಾಗಿ ಸೂಪರ್ ಸ್ಟಾರ್ (ರಜನೀಕಾಂತ್) ಸ್ವತಃ ಒಂದು ಬ್ರ್ಯಾಂಡ್ ಎಂದು ರಜನೀಕಾಂತ್ ಮಕ್ಕಳ್ ಮಂಡ್ರಮ್ ನ ಪದಾಧಿಕಾರಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+