ಕುತೂಹಲ ಕೆರಳಿಸಿದ ರಜನಿಕಾಂತ್ - ಕರುಣಾನಿಧಿ ಭೇಟಿ

Subscribe to Oneindia Kannada
ರಜನಿಕಾಂತ್ - ಕರುಣಾನಿಧಿ ಭೇಟಿ ಹಿಂದಿನ ಕಾರಣ ಏನು ? | Oneindia Kannada

ಚೆನ್ನೈ, ಜನವರಿ 3: ಇತ್ತೀಚೆಗಷ್ಟೆ ಪಕ್ಷ ಸ್ಥಾಪಿಸುವ ಘೋಷಣೆ ಮಾಡಿರುವ ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಇಂದು ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ.

ಬಿಜೆಪಿ ಸಹವಾಸ ರಜನಿ ಪಾಲಿನ 'ರಾಜಕೀಯ ಆತ್ಮಹತ್ಯೆ' ಯಾಕೆ?

ಈ ಸಂಬಂಧ ಪೋಯೆಸ್ ಗಾರ್ಡನ್ ನಿಂದ ಗೋಪಾಪುರಂಗೆ ಹೋಗುವ ದಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಡಿಎಂಕೆ ನಾಯಕ ಕರುಣಾನಿಧಿ ನನ್ನ ಸ್ನೇಹಿತರು. ಹಾಗಾಗಿ ಅವರನ್ನು ಗೌರವದಿಂದ ನಾನು ಭೇಟಿಯಾಗುತ್ತೇನೆ. ನಾನು ಅವರಿಗೆ ಹೊಸ ವರ್ಷದ ಶುಭಾಶಯ ಹೇಳಲು ಹೋಗುತ್ತಿದ್ದೇನೆ," ಎಂದು ಹೇಳಿದ್ದಾರೆ.

Rajinikanth met DMK chief Karunannidhi in his residence

ಇದೇ ವೇಳೆ ರಜನಿಕಾಂತ್ ಇತರ ರಾಜಕೀಯ ಪಕ್ಷದ ಮುಖಂಡರನ್ನು ಭೇಟಿಯಾಗಲು ತಾನು ಇನ್ನೂ ನಿರ್ಧರಿಸಿಲ್ಲ ಎಂದು ಹೇಳಿದ್ದಾರೆ.

ರಜನಿ ತಮಿಳುನಾಡು ರಾಜಕಾರಣದ ಚಹರೆಯನ್ನೇ ಬದಲಾಯಿಸಬಲ್ಲರೆ?

ತಮಿಳುನಾಡಿನಲ್ಲಿ ರಜನಿಕಾಂತ್ ರಾಜಕೀಯ ಪಕ್ಷ ಸ್ಥಾಪಿಸಿದರೆ ಕರುಣಾನಿಧಿಯವರ ಡಿಎಂಕೆ ಬದ್ಧ ಎದುರಾಳಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಹೀಗಿದ್ದೂ ಉಭಯ ನಾಯಕರು ಭೇಟಿಯಾಗುತ್ತಿರುವುದು ಕುತೂಹಲ ಮೂಡಿಸಿದೆ.

Rajinikanth met DMK chief Karunannidhi in his residence

ರಜನೀಕಾಂತ್ ಕರುಣಾನಿಧಿಯವರ ಜತೆ ಏನನ್ನು ಚರ್ಚಿಸಬಹುದು, ಭೇಟಿಯ ಉದ್ದೇಶ ಏನಾಗಿರಬಹುದು ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Actor turned Politician Rajinikanth met DMK chief M Karunanidhi at his residence in Chennai. Rajinikanth said that he is visiting Karunanidhi’s house to wish him for New year.
Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ