ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ ಸೌಂದರ್ಯಾ ರಜನಿಕಾಂತ್

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 23: ಸೂಪರ್‌ಸ್ಟಾರ್ ರಜನಿಕಾಂತ್ ಅವರ ಕಿರಿಯ ಪುತ್ರಿ ಸೌಂದರ್ಯಾ ರಜನಿಕಾಂತ್ ಅವರು ಶುಕ್ರವಾರ(ಡಿಸೆಂಬರ್ 23) ದಂದು ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ.

ಒಂದು ವರ್ಷದಿಂದ ಪತಿ ಅಶ್ವಿನ್ ರಾಮ್ ಕುಮಾರ್ ರಿಂದ ದೂರವಾಗಿದ್ದೇನೆ. ಈಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎಂದು ಸೌಂದರ್ಯ ರಜನಿಕಾಂತ್ ತಿಳಿಸಿದ್ದಾರೆ. [ಇನ್ಮುಂದೆ ನನ್ನ ಮಗನೇ ನನಗೆಲ್ಲ : ಸೌಂದರ್ಯ]

 Rajinikanth's daughter Soundarya files divorce petition in family court

2010ರಲ್ಲಿ ಉದ್ಯಮಿ ಅಶ್ವಿನ್ ರಾಮ್‌ಕುಮಾರ್‌ರನ್ನು ಮದುವೆಯಾಗಿರುವ ಸೌಂದರ್ಯ ಅವರಿಗೆ ಒಂದು ವರ್ಷ ವಯಸ್ಸಿನ ವೇದ್ ಕೃಷ್ಣ ಎಂಬ ಹೆಸರಿನ ಮಗನಿದ್ದಾನೆ. ಇನ್ಮುಂದೆ ನನ್ನ ಮಗನೇ ನನಗೆ ಸರ್ವಸ್ವ ಎಂದು ಸೌಂದರ್ಯ ಹೇಳಿಕೊಂಡಿದ್ದಾರೆ

ಕಾಲಿವುಡ್ ನ ಸೂಪರ್ ಸ್ಟಾರ್ ರಜನಿಕಾಂತ್ ಅವರ ಎರಡನೇ ಮಗಳು ಸೌಂದರ್ಯ ರಜನಿಕಾಂತ್ ಮತ್ತವರ ಪತಿ ಖ್ಯಾತ ಉದ್ಯಮಿ ಅಶ್ವಿನ್ ರಾಮ್ ಕುಮಾರ್ ಅವರು, ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯುತ್ತಿದ್ದಾರೆ. ಸೌಂದರ್ಯ ಅವರು ಗ್ರಾಫಿಕ್ ಡಿಸೈನರ್ ಹಾಗೂ ಚಿತ್ರ ನಿರ್ಮಾಪಕಿಯಾಗಿದ್ದಾರೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Superstar Rajinikanth's younger daughter Soundarya today filed a divorce petition in a family court here in Chennai today(December 23)
Please Wait while comments are loading...