ರಜನಿ ಎರಡನೇ ಮಗಳು ಸೌಂದರ್ಯಾ ವಿಚ್ಛೇದನದ ಸುದ್ದಿ ನಿಜವಾ?

Posted By:
Subscribe to Oneindia Kannada

ಚೆನ್ನೈ, ಸೆಪ್ಟೆಂಬರ್ 16: ಸೂಪರ್ ಸ್ಟಾರ್ ರಜನಿಕಾಂತ್ ಎರಡನೇ ಮಗಳು ಸೌಂದರ್ಯಾ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ರಜನಿಕಾಂತ್ ಮಗಳನ್ನು ಸಮಾಧಾನದಿಂದ ಇರುವಂತೆ ಹೇಳಿದರೂ ಪ್ರಯೋಜನ ಆಗ್ತಿಲ್ಲ ಎಂಬ ಸುದ್ದಿ ದಿಢೀರನೇ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಚರ್ಚೆ ಚಾಲ್ತಿಯಲ್ಲಿದೆ.

ಇದು ಕೇವಲ ವದಂತಿಯಷ್ಟೇ, ಡೈವೋರ್ಸ್ ಗೇನೂ ಅರ್ಜಿ ಹಾಕಿಲ್ಲ ಎನ್ನುತ್ತವೆ ವಿವಿಧ ಮೂಲಗಳು. ರಜನಿಕಾಂತ್ ಕುಟುಂಬ ವಲಯದಿಂದ ಮಾತ್ರ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಚೆನ್ನೈ ಮೂಲದ ಕೈಗಾರಿಕೋದ್ಯಮಿ ಅಶ್ವಿನ್ ಜೊತೆಗೆ 2010ರಲ್ಲಿ ಸೌಂದರ್ಯಾ ಮದುವೆಯಾಗಿತ್ತು.[ರಜನಿ ಸೋದರಳಿಯನ ಸಾಂಗ್ ಯೂಟ್ಯೂಬಿನಲ್ಲಿ ರಿಲೀಸ್]

Rajanikanth daughter Soundarya divorce rumours on social media

ಅದರೆ ಕೆಲ ಮೂಲಗಳ ಪ್ರಕಾರ ಈ ಜೋಡಿ ಡೈವೋರ್ಸ್ ಗಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿವೆ. ಇತ್ತೀಚೆಗೆ ಗಂಡ-ಹೆಂಡತಿ ಮಧ್ಯೆ ವಿರಸ ಏರ್ಪಟ್ಟಿತ್ತು. ಆ ಕಾರಣಕ್ಕೆ ಸಂಬಂಧ ಕೊನೆಗೊಳಿಸಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಅದಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಅಮೆರಿಕಾದಿಂದ ಮರಳಿದ ನಂತರ ಮಗಳ ಕುಟುಂಬ ಸರಿಪಡಿಸಲು ಕೆಲ ದಿನ ಮಗಳ ಜತೆಗೆ ಉಳಿದಿದ್ದರಂತೆ. ಅಶ್ವಿನ್ ಜತೆಗಿನ ಭಿನ್ನಾಭಿಪ್ರಾಯವನ್ನು ಮಾತುಕತೆ ಮೂಲಕ ಸರಿಪಡಿಸಿಕೊಳ್ಳುವಂತೆ ಕೂಡ ಸೂಚಿಸಿದ್ದರಂತೆ.[ಚಿತ್ರಗಳಲ್ಲಿ: ರಜನಿ ಕಬಾಲಿ ಹವಾ, ಸಂಸತ್ ಅಧಿವೇಶನ]

ಈ ಬಗ್ಗೆ ಅಶ್ವಿನ್ ರನ್ನು ಮಾಧ್ಯಮಗಳು ಪ್ರಶ್ನಿಸಿದಾಗ ಯಾವುದೇ ಉತ್ತರ ನೀಡಿಲ್ಲ. ಆ ಕಾರಣಕ್ಕೆ ಅನುಮಾನಕ್ಕೆ ರೆಕ್ಕೆ-ಪುಕ್ಕ ಬಂದಿದೆ. ಸೌಂದರ್ಯಾ ಗ್ರಾಫಿಕ್ ಡಿಸೈನರ್ ಆಗಿ ಗುರುತಿಸಿಕೊಂಡವರು. ರಜನಿಕಾಂತ್ ಅಭಿನಯದ ಕೊಚಾಡಿಯನ್ ಮೋಷನ್ ಕ್ಯಾಪ್ಚರ್ ಸಿನಿಮಾ ನಿರ್ದೇಶಿಸಿದ್ದರು. ಸೌಂದರ್ಯಾ ಹಾಗೂ ಅಶ್ವಿನ್ ದಂಪತಿಗೆ ಒಂದು ಗಂಡು ಮಗುವಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Tamil super star Rajanikanth younger dughter Soundarya ashwin applied for divorce, a rumour spreading on social media. But, Rajanikanth family have not confirmed the news.
Please Wait while comments are loading...