ಜಯಲಲಿತಾ ಸಾವಿನ ತನಿಖೆ ಆರಂಭವಾಗಿದೆ: ಪನ್ನೀರ್ ಸೆಲ್ವಂ

Posted By:
Subscribe to Oneindia Kannada

ಚೆನ್ನೈ, ಫೆಬ್ರವರಿ 12: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ತನಿಖೆಯನ್ನು ತಮ್ಮ ಸರ್ಕಾರ ಈಗಾಗಲೇ ಆರಂಭಿಸಿದೆ ಎಂದು ತಮಿಳುನಾಡಿನ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಚೆನ್ನೈನಲ್ಲಿ ಭಾನುವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಯಲಲಿತಾ ಅವರ ಸಾವಿನ ತನಿಖೆಯಾಗಬೇಕೆಂದು ಬಹಳಷ್ಟು ಅಭಿಮಾನಿಗಳು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ, ಅವರ ಸಾವಿನ ತನಿಖೆಯನ್ನು ಆರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Probe into Jayalalitha's death is initiated says Tamilnadu CM Panner Selvam

ಇದೇ ವೇಳೆ, ಅಮ್ಮ (ಜಯಲಲಿತಾ) ಅವರ ಸಾವಿನ ಬಗ್ಗೆ ತಮಗೂ ಅನುಮಾನಗಳಿದ್ದವು ಎಂದ ಅವರು, ಅಮ್ಮ ಆಸ್ಪತ್ರೆಯಲ್ಲಿದ್ದಾಗ ಅವರ ಸಂಬಂಧಿ ದೀಪಾ ಅವರನ್ನು ಭೇಟಿ ಮಾಡಲು ಯಾಕೆ ಬಿಡಲಿಲ್ಲ ಎಂಬುದು ಇಂದಿಗೂ ಅರ್ಥವಾಗದ ವಿಚಾರ ಎಂದರು.

ಇದೇ ವೇಳೆ, ಶಶಿಕಲಾ ವಿಚಾರದಲ್ಲಿ ಕಿಡಿಕಾರಿದ ಅವರು, ಕಳೆದ ಚುನಾವಣೆಯಲ್ಲಿ ಜನರು ಅಮ್ಮನ ಮುಖ ನೋಡಿ ಮತ ಹಾಕಿದ್ದಾರೆ ಎಂಬುದನ್ನು ತಮ್ಮ ಪಕ್ಷದ ಎಲ್ಲಾ ಎಂಎಲ್ಎಗಳಿಗೆ ಗೊತ್ತಿದೆ. ಹಾಗಾಗಿ, ಅಮ್ಮನ ಪಕ್ಷಕ್ಕೆ ಅನ್ಯಾಯವಾಗದಂತೆ ಅವರು ನೋಡಿಕೊಳ್ಳಲಿದ್ದಾರೆಂಬ ವಿಶ್ವಾಸ ವ್ಯಕ್ತಪಡಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tamilnadu CM Panner Selvam says, his government has initiated the probe into Jayalalitha's death.Speaking to the reporters in Chennai, on Sunday night he said.
Please Wait while comments are loading...