ಸೂಪರ್ ಸ್ಟಾರ್ ರಜನಿಕಾಂತ್ ಭೇಟಿಯಾದ ಪೂನಂ ಮಹಾಜನ್
ಚೆನ್ನೈ, ಆಗಸ್ಟ್ 7: ರಜನಿಕಾಂತ್ ರಾಜಕೀಯಕ್ಕೆ ಕಾಲಿಡಲಿದ್ದಾರೆ, ಅದರಲ್ಲೂ ಬಿಜೆಪಿಗೆ ಸೇರಲಿದ್ದಾರೆ ಎಂಬ ಅನುಮಾನಗಳ ಮಧ್ಯೆ ಬಿಜೆಪಿ ಯುವ ಮೋರ್ಚ ರಾಷ್ಟ್ರೀಯ ಅಧ್ಯಕ್ಷೆ ಪೂನಂ ಮಹಾಜನ್ ಸೂಪರ್ ಸ್ಟಾರ್ ರಜನಿಕಾಂತ್ ರನ್ನು ಭೇಟಿಯಾಗಿದ್ದಾರೆ.
ನಿನ್ನೆ ಚೆನ್ನೈನಲ್ಲಿರುವ ರಜನಿಕಾಂತ್ ನಿವಾಸದಲ್ಲಿ ಪ್ರಮೋದ್ ಮಹಾಜನ್ ಪುತ್ರಿ ಪೂನಂ ಮಹಾಜನ್ ರಜನೀಕಾಂತ್ ರನ್ನು ಭೇಟಿಯಾದರು.

ಎಂದಿನಂತೆ ಈ ಭೇಟಿ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಇದೊಂದು ಸಾಮಾನ್ಯ ಭೇಟಿ ಎಂದು ಬಿಜೆಪಿ ಸೂಪರ್ ಸ್ಟಾರ್ ಮತ್ತು ಪೂನಂ ಮಹಾಜನ್ ನಡುವಿನ ಭೇಟಿಗೆ ಪ್ರತಿಕ್ರಿಯೆ ನೀಡಿದೆ.













Click it and Unblock the Notifications