ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನಲ್ಲಿ ರೌಡಿಗಳಿಂದ ನಾಡಬಾಂಬ್ ದಾಳಿ: ಪೊಲೀಸ್ ಸಾವು

|
Google Oneindia Kannada News

ಚೆನ್ನೈ, ಆಗಸ್ಟ್ 18: ತಮಿಳುನಾಡಿನಲ್ಲಿ ನಾಡಬಾಂಬ್ ದಾಳಿ ನಡೆದಿದ್ದು, ಓರ್ವ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ. ಆಘಾತಕಾರಿ ಘಟನೆಯೊಂದರಲ್ಲಿ ತಮಿಳಿನ ತೂತ್ತುಕ್ಕುಡಿ ಜಿಲ್ಲೆಯ ದಕ್ಷಿಣ ಭಾಗದ ಮನಕ್ಕರೈ ಗ್ರಾಮದಲ್ಲಿ ನಾಡಬಾಂಬ್‍ ದಾಳಿ ನಡೆದಿತ್ತು.

ರೌಡಿ ಶೀಟರ್ ದೊರೈ ಮುತ್ತು ಇಲ್ಲಿನ ಮನಕಾರೈ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ಬಾಂಬ್ ಎಸೆದಿದ್ದು ಹಾಗೆ ಎಸೆಯುವ ವೇಳೆ ಅವನ ಕೈಗೆ ಗಾಯಗಳಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಲ್ಲಿನ ಪೊಲೀಸ್ ಪ್ರಧಾನ ಕಚೇರಿಗೆ ಬಂದಿರುವ ವರದಿಗಳಂತೆ, ಪೋಲೀಸ್ ಕಾನ್ಸ್ ಟೇಬಲ್‍ ಅನ್ನು ಸುಬ್ರಮಣ್ಯಂ ಎಂದು ಗುರುತಿಸಲಾಗಿದೆ.

ಬೈರುತ್ ಸ್ಫೋಟ: 113 ಮಂದಿ ಸಾವು, ಅದೆಷ್ಟೋ ಮಂದಿ ಪತ್ತೆಯಿಲ್ಲ!ಬೈರುತ್ ಸ್ಫೋಟ: 113 ಮಂದಿ ಸಾವು, ಅದೆಷ್ಟೋ ಮಂದಿ ಪತ್ತೆಯಿಲ್ಲ!

ಅಪರಾಧಿಯೊಬ್ಬನನ್ನು ಬಂಧಿಸಲು ಹೋದಾಗ ಪೋಲೀಸ್ ಮೇಲೆ ಅಪರಾಧಿ ನಾಡಬಾಂಬ್ ಎಸೆದಿದ್ದಾನೆ. ದಾಳಿಯಿಂದ ಪೊಲೀಸ್‍ ಸ್ಥಳದಲ್ಲೇ ಮೃತಟ್ಟಿದ್ದಾರೆ. ರೋಪಿ ಮುತ್ತು ನೆರೆಯ ತಿರುನೆಲ್ವೇಲಿಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Police Constable Killed In Country Bomb Attack In Tamil Nadu

ಎರಡು ಕೊಲೆ ಪ್ರಕರಣಗಳು ಮುತ್ತು ವಿರುದ್ಧ ಬಾಕಿ ಉಳಿದಿದ್ದು, ವಿಶೇಷ ತಂಡವು ಮಾಹಿತಿಯನ್ನು ಅನುಸರಿಸಿ ಪ್ರದೇಶಕ್ಕೆ ಆಗಮಿಸಿತ್ತು. ಪೊಲೀಸ್ ತಂಡಕ್ಕೆ ಎಸೆದ ಎರಡು ಬಾಂಬ್‌ಗಳಲ್ಲಿ, ಎರಡನೆಯದು ಸ್ಫೋಟಗೊಂಡು, ಕಾನ್‌ಸ್ಟೆಬಲ್‌ಗೆ ತಲೆಗೆ ಮಾರಣಾಂತಿಕವಾಗಿ ಗಾಯವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

English summary
A constable was killed when a history-sheeter allegedly hurled country bombs at a special police team that came to nab him here on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X