ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಸಿಯಿಂದ ವಿಷಾನಿಲ ಹೊರಸೂಸಿ ಒಂದೇ ಕುಟುಂಬದ ಮೂವರು ಸಾವು

|
Google Oneindia Kannada News

ಚೆನ್ನೈ, ಅಕ್ಟೋಬರ್ 2: ಏರ್ ಕಂಡೀಷನರ್ ನಿಂದ ಹೊರಬಂದ ವಿಷಾನಿಲ ಒಂದೇ ಕುಟುಂಬದ ಮೂವರನ್ನು ಬಲಿ ತೆಗೆದುಕೊಂಡಿದೆ. ಈ ಘಟನೆ ಕೊಯಂಬೀಡುವಿನ ತಿರುವಳ್ಳುವರ್ ನಗರದಲ್ಲಿ ಸೋಮವಾರ ಸಂಭವಿಸಿದೆ ಎಂದು ಪೊಲೀಸರು ಮಂಗಳವಾರದಂದು ಮಾಹಿತಿ ನೀಡಿದ್ದಾರೆ.

ಚಿತ್ರ ನಿರ್ದೇಶಕ ಮಣಿರತ್ನಂ ಕಚೇರಿ, ನಿವಾಸಕ್ಕೆ ಬಾಂಬ್ ಬೆದರಿಕೆಚಿತ್ರ ನಿರ್ದೇಶಕ ಮಣಿರತ್ನಂ ಕಚೇರಿ, ನಿವಾಸಕ್ಕೆ ಬಾಂಬ್ ಬೆದರಿಕೆ

ಮೂವತ್ತೈದು ವರ್ಷದ ಪುರುಷ, ಅವರ ಪತ್ನಿ ಹಾಗೂ ಮಗ ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಬಹಳ ಸಮಯ ಈ ಕುಟುಂಬ ಮನೆಯಿಂದ ಹೊರಗೆ ಬಾರದಿದ್ದಾಗ ನೆರೆ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

Air conditioner

ಈ ವರ್ಷದ ಮೇ ತಿಂಗಳಲ್ಲಿ ವಾಯವ್ಯ ದೆಹಲಿಯ ಆದರ್ಶ್ ನಗರ ಪ್ರದೇಶದಲ್ಲಿ ಏರ್ ಕಂಡೀಷನರ್ ಸ್ಫೋಟವಾಗಿ ಹತ್ತು ವರ್ಷದ ಬಾಲಕ ಹಾಗೂ ಆತನ ಸೋದರಿ ಮೃತಪಟ್ಟಿದ್ದರು. ಆ ಘಟನೆ ಸಂಭವಿಸಿದಾಗ ಅಜ್ಜಿಯೊಂದಿಗೆ ಈ ಮಕ್ಕಳು ಮನೆಯಲ್ಲಿದ್ದರು. ಪೋಷಕರು ಹೊರಗೆ ಹೋಗಿದ್ದರು. ಆ ಘಟನೆ ಸಂಭವಿಸಿದಾಗ ಅಜ್ಜಿ ಬದುಕಿಕೊಂಡಿದ್ದರು. ಆದರೆ ಬೆಂಕಿ ಅವಘಡದಲ್ಲಿ ಸಿಲುಕಿ ಮಕ್ಕಳು ಸಾವನ್ನಪ್ಪಿದ್ದರು.

English summary
Three members of a family died in Chennai on Monday after they inhaled poisonous gas that emanated from a malfunctioning air conditioner, the police said today. Their neighbours called the police after the family that included a 35-year-old man, his wife and son didn't come out for a long time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X