• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ; ಬೀದಿ ವ್ಯಾಪಾರಿ ಬಳಿ ತರಕಾರಿ ಖರೀದಿಸಿದ ನಿರ್ಮಲಾ ಸೀತಾರಾಮನ್!

|
Google Oneindia Kannada News

ಚೆನ್ನೈ, ಅ.09: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಸಂಜೆ ತಮಿಳುನಾಡಿನ ಚೆನ್ನೈನ ಮೈಲಾಪುರ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಸ್ಥಳೀಯ ನಿವಾಸಿಗಳು ಮತ್ತು ಬೀದಿ ವ್ಯಾಪಾರಿಗಳಿಗೆ ದೊಡ್ಡ ಆಶ್ಚರ್ಯವನ್ನುಂಟು ಮಾಡಿದೆ.

ಈ ವೇಳೆ ಸಚಿವೆ ನಿರ್ಮಲಾ ಸೀತಾರಾಮನ್, ಬೀದಿ ಬದಿ ತರಕಾರಿ ವ್ಯಾಪಾರಿಗಳ ಬಳಿ ತಾಜಾ ತರಕಾರಿಗಳನ್ನು ಖರೀದಿಸಿ, ವ್ಯಾಪಾರಿಗಳ ಜೊತೆಯಲ್ಲಿ ಮಾತುಕತೆ ನಡೆಸಿದ್ದಾರೆ.

ಡಾಲರ್ ಎದುರು ರೂಪಾಯಿ ಉತ್ತಮವಾಗಿದೆ: ನಿರ್ಮಲಾ ಸೀತಾರಾಮನ್‌ಡಾಲರ್ ಎದುರು ರೂಪಾಯಿ ಉತ್ತಮವಾಗಿದೆ: ನಿರ್ಮಲಾ ಸೀತಾರಾಮನ್‌

ಹಣಕಾಸು ಸಚಿವೆ ಕಚೇರಿ ಟ್ವಿಟ್ಟರ್‌ನಲ್ಲಿ ಹಾಕಿರುವ ವಿಡಿಯೋದಲ್ಲಿ, ಅವರು ತಾಜಾ ತರಕಾರಿಗಳನ್ನು ಆರಿಸುತ್ತಿರುವುದು, ಸಾರ್ವಜನಿಕರು ಮತ್ತು ಮಾರಾಟಗಾರರೊಂದಿಗೆ ಸಂವಹನ ನಡೆಸುತ್ತಿರುವುದನ್ನು ಕಾಣಬಹುದು.

ಚೆನ್ನೈಗೆ ಭೇಟಿ ನೀಡಿದಾಗ, ಅವರು ಮೈಲಾಪುರ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಖರೀದಿಸಿದ್ದಾರೆ.

''ಚೆನ್ನೈನಲ್ಲಿ ದಿನವಿಡೀ ಇದ್ದ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೈಲಾಪುರ ಮಾರುಕಟ್ಟೆಯಲ್ಲಿ ಮಾರಾಟಗಾರರು ಮತ್ತು ಸ್ಥಳೀಯ ನಿವಾಸಿಗಳೊಂದಿಗೆ ಸಂವಾದ ನಡೆಸಿ, ತರಕಾರಿಗಳನ್ನು ಖರೀದಿಸಿದರು'' ಎಂದು ಸಚಿವರ ಕಚೇರಿಯಿಂದ ಟ್ವೀಟ್ ಮಾಡಲಾಗಿದೆ.

ಅಂಬತ್ತೂರಿನ ಕಳ್ಳಿಕುಪ್ಪಂನಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ಬಹುಶಿಸ್ತೀಯ ಕೇಂದ್ರವಾದ 'ಆನಂದ ಕರುಣಾ ವಿದ್ಯಾಲಯ'ವನ್ನು ಉದ್ಘಾಟಿಸಲು ಸಚಿವೆ ಚೆನ್ನೈ ನಗರಕ್ಕೆ ಬಂದಿದ್ದರು.

Nirmala Sitharaman buys vegetables At Chennai market

ಆಟಿಸಂ, ಡಿಸ್ಲೆಕ್ಸಿಯಾ, ನಿಧಾನ ಕಲಿಕೆಯ ಅಸಾಮರ್ಥ್ಯದಂತಹ ಕಲಿಕೆಯ ತೊಂದರೆಗಳಿರುವ ಮಕ್ಕಳಿಗಾಗಿ ಆನಂದಂ ಲರ್ನಿಂಗ್ ಸೆಂಟರ್ ಅನ್ನು 2018 ರಲ್ಲಿ ಪ್ರಾರಂಭಿಸಲಾಗಿತ್ತು.

ನಿರ್ಮಲಾ ಸೀತಾರಾಮನ್
Know all about
ನಿರ್ಮಲಾ ಸೀತಾರಾಮನ್

English summary
Finance Minister Nirmala Sitharaman buys vegetables from Chennai market. watch video here. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X