ಮಹಾಬಲಿಪುರಂ ಬೀಚ್‌ನಲ್ಲಿ ಕಸ ಹೆಕ್ಕಿದ ಮೋದಿ: ವೈರಲ್ ವಿಡಿಯೋ
Recommended Video
ಚೆನ್ನೈ, ಅಕ್ಟೋಬರ್ 12: ತಮಿಳುನಾಡಿನ ಮಾಮಲ್ಲಪುರಂನಲ್ಲಿ (ಮಹಾಬಲಿಪುರಂ) ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಿಗ್ಗೆ ಬೀಚ್‌ನಲ್ಲಿ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಹೆಕ್ಕಿದರು.
ಸುಮಾರು ಅರ್ಧ ಗಂಟೆ ಕಾಲ ಬೀಚ್‌ನಲ್ಲಿ ಓಡಾಡಿ ಪ್ಲಾಸ್ಟಿಕ್ ಕಸಗಳನ್ನು ಆಯ್ದು ಚೀಲಕ್ಕೆ ತುಂಬಿದ ಪ್ರಧಾನಿ ಮೋದಿ ಅದರ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

'ಮಾಮಲ್ಲಪುರಂನ ಬೀಚ್‌ನಲ್ಲಿ ಬೆಳಿಗ್ಗೆ ಅಡ್ಡಾಡುತ್ತಾ ಕಸವನ್ನು ಹೆಕ್ಕಿದೆ. 30 ನಿಮಿಷಗಳವರೆಗೆ ಈ ಕೆಲಸ ಮಾಡಿದೆ. ಬಳಿಕ ನನ್ನ 'ಸಂಗ್ರಹ'ವನ್ನು ಹೋಟೆಲ್ ಸಿಬ್ಬಂದಿ ಜಯರಾಜ್‌ಗೆ ನೀಡಿದೆ. ನಮ್ಮ ಸಾರ್ವಜನಿಕ ಸ್ಥಳಗಳು ಸ್ವಚ್ಚ ಮತ್ತು ನಿರ್ಮಲವಾಗಿರುವಂತೆ ನಾವು ನೋಡಿಕೊಳ್ಳೋಣ. ನಾವು ಸದೃಢ ಮತ್ತು ಆರೋಗ್ಯವಂತರಾಗಿರುವಂತೆ ನೋಡಿಕೊಳ್ಳೋಣ' ಎಂದು ಮೋದಿ ವಿಡಿಯೋದ ಜತೆಗೆ ಮನವಿ ಮಾಡಿದ್ದಾರೆ.

ಇದಕ್ಕೂ ಮುನ್ನ ಮೋದಿ ಅವರು ಬೆಳಿಗ್ಗೆ ಬೀಚ್‌ನಲ್ಲಿ ವಿಹರಿಸುವ ಚಿತ್ರವನ್ನು ಹಂಚಿಕೊಂಡಿದ್ದರು. ಅಕ್ಟೋಬರ್ 2ರಿಂದ ದೇಶದೆಲ್ಲೆಡೆ ಓಡಾಡುತ್ತಾ ತ್ಯಾಜ್ಯ ಹೆಕ್ಕುವ ಚಟುವಟಿಕೆಗಳನ್ನು ಉತ್ತೇಜಿಸುವ ಸಲುವಾಗಿ ಜನರು ನಿರಂತರವಾಗಿ ಎರಡು ಕಿ.ಮೀ. ಓಟಗಳಲ್ಲಿ ಪಾಲ್ಗೊಳ್ಳುವಂತೆ ಮೋದಿ ಅವರು ಕರೆ ನೀಡಿದ್ದರು. ಬೆಳಗಿನ ಜಾಗಿಂಗ್ ಜತೆಗೆ ಕಸವನ್ನು ಹೆಕ್ಕುವ ಮೂಲಕ ಸ್ವಚ್ಚತೆಯ ಕಾರ್ಯದಲ್ಲಿ ಪಾಲ್ಗೊಳ್ಳುವುದು (ಪ್ಲಾಗಿಂಗ್) ಆರೋಗ್ಯ ಮತ್ತು ಸ್ವಚ್ಚತೆ ಎರಡಕ್ಕೂ ಸಹಕಾರಿ ಎಂದು ಮೋದಿ ಹೇಳಿದ್ದರು.
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.












Click it and Unblock the Notifications