ಚಾಣಕ್ಯನ ಭವಿಷ್ಯ: ಅಮೆರಿಕದ ಮುಂದಿನ ಅಧ್ಯಕ್ಷ ಹೆಸರು ಬಹಿರಂಗ

Posted By:
Subscribe to Oneindia Kannada

ಚೆನ್ನೈ, ನವೆಂಬರ್ 9: ಅಮೆರಿಕದ ಮುಂದಿನ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಅಧಿಕೃತ ಉತ್ತರ ಸಿಗಲು ಮುಂದಿನ ವರ್ಷದ ತನಕ ಕಾಯಬೇಕಿದೆ. ಆದರೆ, ಭಾರತದಲ್ಲಿ ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಮಂಗವೊಂದು ಉತ್ತರ ನೀಡಿದ ಬಳಿಕ ಈಗ ಚಾಣಕ್ಯ ಎಂಬ ಮೀನಿನ ಸರದಿ.

ವಿಶ್ವಕಪ್ ಫುಟ್ಬಾಲ್ ಪಂದ್ಯದ ವೇಳೆ ಪಂದ್ಯಗಳ ಫಲಿತಾಂಶವನ್ನು ಸರಿಯಾಗಿ ಊಹಿಸುವ ಮೂಲಕ ಜನಪ್ರಿಯಗೊಂಡ ಚಾಣಕ್ಯ ಎಂಬ ಮೀನು ಈಗ ಅಮೆರಿಕ ಅಧ್ಯಕ್ಷರನ್ನು ಆಯ್ಕೆ ಮಾಡಿದೆ. ಚಾಣಕ್ಯನ ಆಯ್ಕೆಯಂತೆ ರಿಪಬ್ಲಿಕ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆಲ್ಲಲಿದ್ದಾರೆ ಎಂದು ಹೇಳಿದೆ.

Meet Chanakya the fish Prediction For US Elections

ಮೀನು ಇರುವ ಅಕ್ವೇರಿಯಂನಲ್ಲಿ ರಿಪಬ್ಲಿಕ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರೆಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರ ಚಿತ್ರಗಳನ್ನು ಬಿಡಲಾಗಿತ್ತು. ಈ ಪೈಕಿ ಟ್ರಂಪ್ ಅವರ ಚಿತ್ರವನ್ನು ಮೀನು ಆಯ್ಕೆ ಮಾಡಿದೆ.

ವಿಶ್ವಕಪ್ ಫುಟ್ಬಾಲ್ ವೇಳೆ ಎಲ್ಲಾ 8 ಪಂದ್ಯಗಳ ಫಲಿತಾಂಶವನ್ನು ಸರಿಯಾಗಿ ಊಹಿಸಿದ್ದ ಚಾಣಕ್ಯ, ವಿಶ್ವಕಪ್ ಕ್ರಿಕೆಟ್ ವೇಳೆ ತಪ್ಪು ನಿರ್ಣಯ ನೀಡಿತ್ತು. ಭಾರತಕ್ಕೆ ವಿಶ್ವಕಪ್ ಸಿಗಲಿದೆ ಎಂದಿತ್ತು. ಆದರೆ, ಆಸ್ಟ್ರೇಲಿಯಾಕ್ಕೆ ಕಪ್ ಒಲಿದಿತ್ತು.

ಸೊಳ್ಳೆಗಳ ನಿಯಂತ್ರಣದ ಬಗ್ಗೆ ಜಾಗೃತಿ ಅಭಿಯಾನ ಹಮ್ಮಿಕೊಂಡಿರುವ ಹರಿಹರನ್ ಎಂಬುವವರು ಚಾಣಕ್ಯನ ಭವಿಷ್ಯ ಬಳಸಿಕೊಂಡು ಏಡ್ಸ್, ಪರಿಸರ ಜಾಗೃತಿ, ಬಾಲ ಕಾರ್ಮಿಕ ಪದ್ಧತಿ ವಿರೋಧಿ ಅಭಿಯಾನಗಳನ್ನು ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Donald Trump will win, predicts a political pundit in Chennai, Meet Chanakya the fish. It opted for the Republican candidate when pictures of the two rivals were introduced in two floats inside its aquarium.
Please Wait while comments are loading...