ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನಲ್ಲಿ ಮಳೆಯ ಅಬ್ಬರ, ಎರಡು ದಿನ ಮಳೆ ಮುಂದುವರಿಕೆ

|
Google Oneindia Kannada News

ಚೆನ್ನೈ, ಜನವರಿ 05: ತಮಿಳುನಾಡಿನಲ್ಲಿ ಮಳೆ ಅಬ್ಬರ ಶುರುವಾಗಿದೆ, ಮೀನಾಂಬಕಂ ಏರ್‌ಪೋರ್ಟ್ ಬಳಿ 6 ಗಂಟೆಗಳಲ್ಲಿ 105 ಮಿ.ಮೀನಷ್ಟು ಮಳೆ ಸುರಿದಿದೆ.

ರೆಡ್ ಹಿಲ್ ಜಲಾಶಯದ ಬಾಗಿಲನ್ನು ಮಧ್ಯಾಹ್ನ 1 ಗಂಟೆ ವೇಳೆಗೆ ತೆಗೆಯಲಾಯಿತು. ಡಬ್ಲ್ಯೂಆರ್‌ಡಿ ಮೊದಲು 500 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿತು. ಇನ್ನು ಚೆಂಬರಾಂಬಕಂ ಸರೋವರದ ಆಳ 24 ಅಡಿಗಳಷ್ಟಿದ್ದು, ಈಗ 23 ಅಡಿಗಳಷ್ಟು ನೀರು ಬಂದಿದೆ.

ಕರ್ನಾಟಕದಲ್ಲಿ ಮುಂದಿನ 4 ದಿನ ಭಾರಿ ಮಳೆ: ಯೆಲ್ಲೋ ಅಲರ್ಟ್ ಘೋಷಣೆಕರ್ನಾಟಕದಲ್ಲಿ ಮುಂದಿನ 4 ದಿನ ಭಾರಿ ಮಳೆ: ಯೆಲ್ಲೋ ಅಲರ್ಟ್ ಘೋಷಣೆ

ಆಡ್ಯಾರ್ ನದಿ 3 ಸಾವಿರ ಕ್ಯೂಸೆಕ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ರೆಡ್ ಹಿಲ್ ಸರೋವರ 21.20ಅಡಿಗಳಷ್ಟು ನೀರು ತುಂಬಿದೆ.

 Meenambakkam Record 105mm Rainfall In 6 Hours Heavy Rain Will Continue

ಮೀನಾಂಬಕ್ಕಂನಲ್ಲಿ 105 ಮಿ.ಮೀನಷ್ಟು ಮಳೆಯಾಗಿದೆ. ಗುರುವಾರದವರೆಗೆ ತಮಿಳುನಾಡಿನಾದ್ಯಂತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇನ್ನು ದೆಹಲಿ, ಹರ್ಯಾಣ, ಕರ್ನಾಟಕದ ಹಲವು ಪ್ರದೇಶಗಳಲ್ಲೂ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ, ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಮೋಡಕವಿದ ವಾತಾವರಣವಿದ್ದು, ಅಲ್ಲಲ್ಲಿ ಮಳೆಯಾಗಿದೆ.

ದೆಹಲಿಯಲ್ಲೂ ಕೂಡ ಸೋಮವಾರ ರಾತ್ರಿ ಭಾರಿ ಮಳೆಯಾಗಿದೆ. ಉತ್ತರ ಪ್ರದೇಶ, ಹರ್ಯಾಣ, ಮಧ್ಯಪ್ರದೇಶ, ರಾಜಸ್ಥಾನ,ಪಂಜಾಬ್‌ನಲ್ಲೂ ಮಳೆಯಾಗಲಿದೆ. ಹಿಮಾಚಲಪ್ರದೇಶ, ಶ್ರೀನಗರ, ಉತ್ತರಾಖಂಡದಲ್ಲಿ ಹಿಮಪಾತವಾಗುತ್ತಿದ್ದು, ವಾಹನಗಳ ಸಂಚಾರ ಅಸ್ತವ್ಯಸ್ಥಗೊಂಡಿದೆ. ವಿಮಾನಗಳ ಹಾರಾಟ ಸ್ಥಗಿತಗೊಂಡಿವೆ.

English summary
With rains continuing its downpour over the city, the shutters of Chembarambakkam and Red Hills reservoirs will be reopened after 1 pm on Tuesday to discharge minimal amounts of water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X