ತಮಿಳುನಾಡಿನಲ್ಲಿ ದೀಪಾವಳಿ ದಿನ ದುರಂತ, 8 ಮಂದಿ ಸಾವು
ಚೆನ್ನೈ, ಅಕ್ಟೋಬರ್ 20:ತಮಿಳುನಾಡು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಟಿಎನ್ ಎಸ್ ಟಿಸಿ)ಗೆ ಸೇರಿದ 8 ಮಂದಿ ಸಿಬ್ಬಂದಿ ಶುಕ್ರವಾರ ಮುಂಜಾನೆ ದುರ್ಮರಣ ಹೊಂದಿದ್ದಾರೆ.
ಸಾರಿಗೆ ಸಂಸ್ಥೆಗೆ ಸೇರಿದ ವರ್ಕ್ ಶಾಪ್ ನಲ್ಲಿ ಮಲಗಿದ್ದ ಡ್ರೈವರ್, ಕಂಡಕ್ಟರ್ ಇನ್ನಿತರ ಸಿಬ್ಬಂದಿ ಮೇಲೆ ಕಟ್ಟಡದ ಮೇಲ್ಛಾವಣಿ ಕುಸಿದಿರುವ ಘಟನೆ ನಾಗಪಟ್ಟಿನಮ್ ನ ಪೊರಯಾರ್ ಡಿಪೋ ವರ್ಕ್ ಶಾಪ್ ನಲ್ಲಿ ನಡೆದಿದೆ.

ಮೃತರೆಲ್ಲರೂ ಇದೇ ಡಿಪೋಗೆ ಸೇರಿದ ಬಸ್ ಚಾಲಕ ವರ್ಗ ಸಿಬ್ಬಂದಿಯಾಗಿದ್ದು, ಮೇಲ್ಛಾವಣಿ ಕುಸಿದಾಗ ಎಲ್ಲರೂ ನಿದ್ದೆಯಲ್ಲಿದ್ದರು. ಶುಕ್ರವಾರ ಮೊದಲ ಶಿಫ್ಟ್ ನಲ್ಲಿ ಕಾರ್ಯನಿರ್ವಹಿಸುವವರಾಗಿದ್ದರು. ಈ ದುರ್ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಕಾರೈಕಲ್ ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು 60 ವರ್ಷ ಹಳೆಯ ಕಟ್ಟಡ ಇದಾಗಿದ್ದು, ಇತ್ತೀಚೆಗೆ ಮಳೆಯಿಂದ ಶಿಥಿಲಗೊಂಡಿತ್ತು, ರಿಪೇರಿ ಕಾರ್ಯ ನಡೆದಿರಲಿಲ್ಲ ಎಂದು ಇತರೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.












Click it and Unblock the Notifications