ಪಳನಿಸ್ವಾಮಿ ಮುಖ್ಯಮಂತ್ರಿಯಾಗದಂತೆ ಕೊನೆಯ ಹಂತದ ಹೈಡ್ರಾಮ

ಎಡಪ್ಪಾಡಿ ಕೆ ಪಳನಿಸ್ವಾಮಿ ಮುಖ್ಯಮಂತ್ರಿಯಾಗದಂತೆ ತಡೆಯುವ ಕೊನೆಯ ಹಂತದ ಪ್ರಯತ್ನ ವಿಫಲವಾಗಿದೆ. ಪಳನಿಸ್ವಾಮಿ ಪ್ರಮಾಣವಚನಕ್ಕೆ ತಡೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದೆ.

ಚೆನ್ನೈ, ಫೆಬ್ರವರಿ 16: ಎಡಪ್ಪಾಡಿ ಕೆ ಪಳನಿಸ್ವಾಮಿ ಮುಖ್ಯಮಂತ್ರಿಯಾಗದಂತೆ ತಡೆಯುವ ಕೊನೆಯ ಹಂತದ ಪ್ರಯತ್ನ ವಿಫಲವಾಗಿದೆ. ಪಳನಿಸ್ವಾಮಿ ಪ್ರಮಾಣವಚನಕ್ಕೆ ತಡೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದೆ.

ದಿವಂಗತ ಜಯಾಲಲಿತಾ ಜತೆ ದೀರ್ಘ ಕಾಲ ಒಡನಾಟ ಹೊಂದಿದ್ದ ವಕೀಲೆ ಎನ್ ಜ್ಯೋತಿ ಈ ಅರ್ಜಿ ಸಲ್ಲಿಸಿದ್ದರು. ಒಂದು ಕಾಲದಲ್ಲಿ ರಾಜ್ಯ ಸಭಾ ಅದಸ್ಯರೂ ಆಗಿದ್ದ ಜ್ಯೋತಿ ಸದ್ಯ ಡಿಎಂಕೆ ಪಕ್ಷದಲ್ಲಿದ್ದಾರೆ. ಅರ್ಜಿಯಲ್ಲಿ ಬಹುಮತ ಸಾಬೀತಿನ ನಂತರವಷ್ಟೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಬೇಕು. ಬಹುಮತಕ್ಕೆ ಬೇಕಾದಷ್ಟು ಶಾಸಕರ ಬೆಂಬಲ ಇದ್ದರೆ ಮಾತ್ರ ರಾಜ್ಯಪಾಲರು ಸರಕಾರ ರಚಿಸಲು ಆಹ್ವಾನಿಸಬೇಕು ಎಂದು ಕೋರಿಕೊಂಡಿದ್ದರು. ಆದರೆ ಇದನ್ನು ಮದ್ರಾಸ್ ಹೈಕೋರ್ಟ್ ತಳ್ಳಿಹಾಕಿದೆ.[ತಮಿಳುನಾಡು ಮುಖ್ಯಮಂತ್ರಿಯಾಗಿ ಕೆ ಪಳನಿಸ್ವಾಮಿ]

Madras high court dismissed PIL seeking a stay to Palanisamy's swearing.

ಪಳನಿಸ್ವಾಮಿ ಪ್ರಮಾಣವಚನಕ್ಕೂ ಕೆಲವೇ ಗಂಟೆಗಳ ಮೊದಲು ಈ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಇದರಿಂದ ಯಾವುದೇ ಅಡೆ ತಡೆ ಇಲ್ಲದೆ ರಾಜ್ಯಪಾಲರು ಪ್ರಮಾಣವಚನ ಬೋಧಿಸಿದರು. ಎಡಪ್ಪಾಡಿ ಪಳನಿಸ್ವಾಮಿ ಈಗಾಗಲೇ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಹುದ್ದೆಯನ್ನು ವಹಿಸಿಕೊಂಡಿದ್ದಾರೆ.[ಅಮ್ಮನಂತೆ ಪರಪ್ಪನ ಅಗ್ರಹಾರ ಜೈಲಿನಿಂದಲೇ ಚಿನ್ನಮ್ಮನ ದರ್ಬಾರ್!]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+