ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರ್ಧಾ ಅಬ್ಬರ: ಆಂಧ್ರ, ಕರ್ನಾಟಕ್ಕೂ ತಟ್ಟಿದ ಬಿಸಿ

By Ananthanag
|
Google Oneindia Kannada News

ಚೆನ್ನೈ, ಡಿಸೆಂಬರ್ 12: ವಾರ್ಧಾ ಚಂಡಮಾರುತ ತಮಿಳುನಾಡಿಗೆ ಅಪ್ಪಳಿಸಿದ್ದು, ಭೀಕರ ಪರಿಣಾಮವನ್ನು ಬೀರಿದೆ. ಸಾವಿರಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ಆಂಧ್ರದಲ್ಲಿಯೂ ಇದರ ಪರಿಣಾಮ ಬೀರಿದ್ದು ಕರಾವಳಿ ಪ್ರದೇಶದಲ್ಲಿ ರುದ್ರನರ್ತನ ಮಾಡಿದೆ. ಸೋಮವಾರ- ಮಂಗಳವಾರ ಕರ್ನಾಟದಲ್ಲಿ ಮೋಡಕವಿದ ವಾತಾವರಣ, ಜಿಟಿಜಿಟಿ ಮಳೆಯಾಗಿದೆ.

ಹವಾಮಾನ ಇಲಾಖೆ ಬಂಗಾಳ ಕೊಲ್ಲಿಯಲ್ಲಿ ವಾರ್ಧಾ ಚಂಡಮಾರುತ ಎದುರಾಗಿದ್ದು ತಮಿಳುನಾಡಿಗೆ ಸೋಮವಾರ ಮಧ್ಯಾಹ್ನ 1.30 ಬಂದೆರುಗಲಿದೆ ಎಂದು ಹೇಳಿದ್ದರು. ಹಾಗು ಮಧ್ಯಾಹ್ನ 2 ಗಂಟೆ ಯಿಂದ ರಾತ್ರಿ 12ಗಂಟೆ ವರೆಗೆ ಆಂಧ್ರ ಪ್ರದೇಶಕ್ಕೆ ಚಂಡಮಾರುತ ಎದುರಾಗಲಿದೆ ಎಂದಿದ್ದರು. ಅಂತೆಯೆ ಕರ್ನಾಟಕದಲ್ಲಿಯೂ ವಾರ್ಧಾ ಪರಿಣಾಮದಿಂದಾಗಿ ಸೋಮವಾರ ರಾತ್ರಿಯಿಂದಲೂ ಜಿಟಿಜಿಟಿ ಮಳೆಯಾಗುತ್ತಿದೆ ಮಂಗಳವಾರವೂ ಇದು ಮುಂದುವರೆದಿದ್ದು ಮೋಡಕವಿದ ವಾತಾವರಣ ಜನರಲ್ಲಿ ಜಡವನ್ನುಂಟುಮಾಡಿದೆ.

ತಮಿಳುನಾಡಿನಲ್ಲಿ ಚಂಡಮಾರುತದ ಭೀಕರತೆ ಕಡಿಮೆಯಾಗುತ್ತಿದೆ. ಸುಮಾರು 3 ಗಂಟೆಗಳ ಕಾಲ ಮಾಡಿದ ವಾರ್ಧಾ ನರ್ತನ ನಗರವನ್ನು ಮರ್ಧನಗೊಳಿಸಿದೆ. ಸಾರಿಗೆ, ವಿದ್ಯುತ್, ವ್ಯಾಪಾರ ವಹಿವಾಟುಗಳು ಸ್ಥಬ್ಧಗೊಂಡಿದೆ.

* ಆಂಧ್ರದಲ್ಲಿ ವಾರ್ಧಾ ಅಬ್ಬರ ಪ್ರಾಂಭವಾಗಿದೆ. ಆಂಧ್ರದ ಜನತೆಗೆ ಸರಕಾರ ಮುನ್ನೆಚ್ಚರಿಕೆ ನೀಡಿದೆ. ಮನೆಯಿಂದ ಹೊರಬರದಂತೆ ತಿಳಿಸಿದೆ. ಆಂಧ್ರದಲ್ಲಿ 12 ಗಂಟೆ ವರೆಗೂ ಮಳೆ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

vardah

* ವರ್ಧಾ ಆಂಧ್ರ ಪ್ರದೇಶದೆಡೆಗೆ ದಿಕ್ಕು ಬದಲಿಸಿದ್ದು, ಕರ್ನಾಟಕದ ಕೆಲವಡೆ ಮೊಡಕವಿದ ವಾತಾವರಣ ಬೆಳಗ್ಗಿನಿಂದಲು ಇದೆ. ಆದರೆ ಈಗ ಕೋಲಾರದ ಕೆಲವೆಡೆ ಬಿರುಗಾಳಿ ಕಾಣಿಸಿಕೊಂಡಿದೆ ಉಳಿದಂತೆ ಕೆಲವೆಡೆ ಸೊನೆ ಮಳೆ ಬೀಳುತ್ತಿದೆ.

* ವರ್ಧಾ ಚಂಡ ಮಾರುತದ ವೇಗ 120 ಕಿಮೀ ವೇಗಕ್ಕೆ ಇಳಿದೆದೆ, ಬಿರುಗಾಳಿ ಅಬ್ಬರ ಮೊದಲಿನಂತೆಯೇ ಇದ್ದು, ಚೆನ್ನೈನ ರಾಜಭವನಕ್ಕೆ ನೀರುನುಗ್ಗಿದೆ.

live Cyclone Vardah: Heavy rains, strong winds hit Chennai

* ಚೆನ್ನೈನಲ್ಲಿ ನಗರದಲ್ಲಿ ಇಬ್ಬರು ಸಾವು,ನೆಲಕ್ಕುರುಳಿದ 4000 ಮರಗಳು, 500 ಲೈಟ್ ಕಂಬಗಳು ನಲಕ್ಕಪ್ಪಳಿಸಿವೆ, ಪೆಟ್ರೋಲ್ ಬಂಕ್ ಚಾವಣಿ ಕುಸಿದಿದೆ.

* ಆಂಧ್ರ, ತಮಿಳುನಾಡು ಕರಾವಳಿಯಲ್ಲಿ 11 ನಾಕೆಗಳು ಕಾರ್ಯಾಚರಣೆ, 2 ಅತ್ಯಾದುನಿಕ ನೌಕೆಗಳು, 3 ಡಿವರ್ಸ್ ನೌಕೆಗಳು ಸೇನಾದಳ ರಕ್ಷಣಾ ಕಾರ್ಯಾಚರಣೆಗೆ ಸಿದ್ಧ.

* ತಮಿಳುನಾಡಿನ ಬಂಗಾಳಕೊಲ್ಲಿಯಲ್ಲಿ 8 ಮೀನುಗಾರರನ್ನು ರಕ್ಷಿಸಿದ ಎನ್ ಆರ್ ಡಿಎಫ್ ರಕ್ಷಣಾ ಪಡೆ

vardha syclone

* ಅಣ್ಣಾಸೆಲೈ ರೋಡಿನ ಅಂಗಡಿ ಮುಂಗಟ್ಟುಗಳು ಬಂದ್, ಚನ್ನೈನಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರು, ವಿರಳವಾದ ವಾಹನ ಸಂಚಾರ,

* ಆಂಧ್ರ ತಮಿಳುನಾಡಿನ ಗಡಿ ಭಾಗಗಳಲ್ಲಿ 8 ಸೇನಾತುಕಡಿಯನ್ನು ನಿಯೋಜನೆ ಮಾಡಲಾಗಿದೆ. ಮತ್ತು ತಮಿಳುನಾಡಿಯನಲ್ಲಿ ಎನ್ ಡಿಎಫ್ ಆರ್ ರಕ್ಷಣಾದಳವನ್ನು ನಿಯೋಜಿಸಲಾಗಿದೆ.

* ವರ್ಧಾ ಚಂಡಮಾರುತ ಹಿನ್ನೆಲೆ ತಮಿಳುನಾಡಿನ ನಗರ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಜನರಿಗೆ ಮನೆಯಿಂದ ಹೊರಬರದಿರಲು ಎಚ್ಚರಿಕೆ ನೀಡಲಾಗಿದೆ.

vardha

* ಚಂಡಮಾರತದ ಪರಿಣಾಮ ತಮಿಳುನಾಡಿದ ಹಲವಾರು ಭಾಗಗಳಲ್ಲಿ ಜನರಿಗೆ ಗಾಯಗಳು ಮತ್ತು ಗಂಭೀರ ಸ್ಥಿತಿ ಎದುರಾದರೆ ಅವರಿಗೆ ಸೇವೆ ನೀಡಲು 150 ಹೆಚ್ಚು ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿದೆ.

*ಸಮುದ್ರ ತೀರದಲ್ಲಿ ಹಡಗು ಮತ್ತು ದೋಣಿಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಸಂಜೆ 5 ಗಂಟೆ ವರೆಗೆ ಚಂಡಮಾರುತ ಪರಿಣಾಮ ವಾಗಲಿದ್ದು ನಂತರ ವಾತಾವರಣ ಶಾಂತಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

vardha

* ಗಂಟೆಗೆ 150 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಮಳೆ ಸುರಿಯುತ್ತಿದ್ದು, ವಿದ್ಯುತ್ ವ್ಯವಸ್ಥೆ, ಜನಸಂಚಾರ ಅಸ್ತವ್ಯಸ್ತಗೊಂಡಿದೆ. ಸಮುದ್ರದ ತೀರ ಭಾಗದಲ್ಲಿ 4-5 ಮೀಟರ್ ರಭಸ ಹೆಚ್ಚಾಗಿದೆ.

*ಚಂಡಮಾರುತದಿಂದ ತಮಿಳುನಾಡಿನಲ್ಲಿ ರೈಲ್ವೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

* ವರ್ಧಾ ಚಂಡ ಮಾರುತ ಪರಿಣಾಮವಾಗಿ ಚೆನ್ನೈ ಮತ್ತು ವೆಲ್ಲೂರು ನಡುವೆ ಕೆಲ ಭಾಗಗಳಲ್ಲಿ ಭೂಕುಸಿತ ಉಂಟಾಗಿದೆ.

vardha

* ಬಿರುಗಾಳಿ ಮಳೆಗೆ ಜನ ತತ್ತರಿಸಿದ್ದು, 10 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ.

* ಚೆನ್ನೈ ನಗರದಲ್ಲಿ ಭಾರಿ ಮಳೆ, ಕಡಲೂರು ತಿರುವಣ್ಣಾಮಲೈ ಮುಂತಾದ ಪ್ರದೇಶಗಳಲ್ಲಿ ತೀವ್ರ ಪ್ರಮಾಣದ ಮಳೆ.

vadga

* ತಮಿಳುನಾಡಿನಲ್ಲಿ 1 ಸಾವಿರಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ರಾಯಪೇಟೆಯಲ್ಲಿ 59, ಮಾಂಡೇಲಿಯಲ್ಲಿ 23, ನುಂಗಂಬಾಕ್ಕಂನಲ್ಲಿ 29 ಮರಗಳು ನೆಲಕಚ್ಚಿವೆ.

* ತಮಿಳುನಾಡಿಗೆ ಸಂಚರಿಸುವ 25 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

vardha

* 10 ಕಿಲೋ ಮೀಟರ್ ವೇಗದಲ್ಲಿ ಮಳೆ ಸುರಿಯುತ್ತಿದ್ದು, ಮನೆಯ ಚಾವಣಿಗಳು ಹಾರಿಹೋಗುತ್ತಿವೆ.

* ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

English summary
Chennai: Heavy rains coupled with squally winds on Monday lashed the city of Chennai as very severe cyclonic storm 'Vardah' was expected to make landfall this afternoon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X