ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ಆಯ್ತು ತಮಿಳುನಾಡು ಸರ್ಕಾರ, ನಟರಿಗೆ ವೈದ್ಯ ಬರೆದ ಪತ್ರ

|
Google Oneindia Kannada News

ಚೆನ್ನೈ, ಜನವರಿ 05: ಕೊರೊನಾ ವೈರಸ್ ಭೀತಿ ನಡುವೆ ಈಗ ರೂಪಾಂತರ ಸೋಂಕಿನ ಆತಂಕವೂ ಎದುರಾಗಿದೆ. ಇದರ ನಡುವೆಯೇ ಸಿನಿಮಾ ಮಂದಿರಗಳಲ್ಲಿ ಶೇ 100ರಷ್ಟು ಆಸನ ಭರ್ತಿಗೆ ತಮಿಳುನಾಡು ಸರ್ಕಾರ ಅವಕಾಶ ಕಲ್ಪಿಸಿದೆ.

ತಮಿಳು ನಟರಾದ ವಿಜಯ್ ಹಾಗೂ ಸಿಂಬು ತಮಿಳುನಾಡು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಭೇಟಿಯಾಗಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ಕೇಳಿದ್ದು, ಆನಂತರ ಸಿನಿಮಾ ಮಂದಿರಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಸರ್ಕಾರದ ಈ ನಡೆಯನ್ನು ಖಂಡಿಸಿ ವೈದ್ಯರೊಬ್ಬರು ಬರೆದಿರುವ ಪತ್ರವೊಂದು ಈಗ ವೈರಲ್ ಆಗಿದೆ. ಜವಹರಲಾಲ್ ನೆಹರು ಇನ್ ಸ್ಟಿಟ್ಯೂಟ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರದಲ್ಲಿ ನಿವಾಸಿ ವೈದ್ಯನಾಗಿರುವ ಅರವಿಂದ್ ಶ್ರೀನಿವಾಸ್ ಅವರು ಪತ್ರ ಬರೆದಿದ್ದಾರೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂದೆ ಓದಿ...

 ಸಿಎಂ ಬಳಿ ಮನವಿ ಮಾಡಿದ್ದ ನಟರು

ಸಿಎಂ ಬಳಿ ಮನವಿ ಮಾಡಿದ್ದ ನಟರು

ಮಾಸ್ಟರ್ ಸಿನಿಮಾ ಜನವರಿಯಲ್ಲಿ ಬಿಡುಗಡೆಯಾಗುತ್ತಿದ್ದು, ನಟರಾದ ವಿಜಯ್ ಹಾಗೂ ಸಿಂಬು ಸಿನಿಮಾ ಮಂದಿರಗಳ ಮಾಲೀಕರೊಂದಿಗೆ ಸಿಎಂ ಭೇಟಿಯಾಗಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ನೀಡುವಂತೆ ಕೋರಿಕೊಂಡಿದ್ದರು. ಈ ನಿರ್ಧಾರವನ್ನು ತಮಿಳು ಸಿನಿಮಾ ರಂಗವೂ ಸ್ವಾಗತಿಸಿತ್ತು. ಆದರೆ ಕೆಲವು ತಜ್ಞರು ಹಾಗೂ ಸೆಲೆಬ್ರಿಟಿಗಳು ಈ ನಡೆಯನ್ನು ಖಂಡಿಸಿದ್ದರು.

ಚೆನ್ನೈನ ಸ್ಟಾರ್ ಹೋಟೆಲ್ ಗಳಲ್ಲಿ ಕೊರೊನಾ ಸ್ಫೋಟ; ಜಿಸಿಸಿ ನಿರ್ಬಂಧಚೆನ್ನೈನ ಸ್ಟಾರ್ ಹೋಟೆಲ್ ಗಳಲ್ಲಿ ಕೊರೊನಾ ಸ್ಫೋಟ; ಜಿಸಿಸಿ ನಿರ್ಬಂಧ

 ತಜ್ಞರಿಂದ ಸರ್ಕಾರದ ನಡೆಗೆ ಆಕ್ಷೇಪ

ತಜ್ಞರಿಂದ ಸರ್ಕಾರದ ನಡೆಗೆ ಆಕ್ಷೇಪ

ಇಂಥ ಸಾರ್ವಜನಿಕ ಸ್ಥಳಗಳಲ್ಲಿ, ಶೇ 100ರಷ್ಟು ಜನಕ್ಕೆ ಅನುಮತಿ ನೀಡಿದರೆ ಕೊರೊನಾ ಹರಡುವುದರಲ್ಲಿ ಅನುಮಾನವೇ ಇಲ್ಲ. ಇಂಥ ಸಮಯದಲ್ಲಿ ಸರ್ಕಾರ ಈ ಕ್ರಮವನ್ನು ತೆಗೆದುಕೊಂಡಿರುವುದು ಜನರ ಜೀವದೊಂದಿಗೆ ಆಟವಾಡಿದಂತೆ ಎಂದು ಕೆಲವು ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 ನಟರು, ಸರ್ಕಾರಕ್ಕೆ ವೈದ್ಯ ಬರೆದ ಪತ್ರ

ನಟರು, ಸರ್ಕಾರಕ್ಕೆ ವೈದ್ಯ ಬರೆದ ಪತ್ರ

ಸರ್ಕಾರದ ಈ ನಡೆಯನ್ನು ಖಂಡಿಸಿ ತಮಿಳುನಾಡಿನ ವೈದ್ಯರೊಬ್ಬರು ಫೇಸ್ ಬುಕ್ ಮೂಲಕ ಮುಕ್ತ ಪತ್ರವನ್ನು ಬರೆದಿದ್ದಾರೆ. ಹಣಕ್ಕಾಗಿ ಜೀವವನ್ನೇ ವ್ಯಾಪಾರ ಮಾಡುತ್ತಿದ್ದೀರ ಎಂದು ದೂರಿದ್ದಾರೆ. ವಿಜಯ್ ಸರ್, ಸಿಂಬು ಸರ್ ಹಾಗೂ ತಮಿಳುನಾಡು ಸರ್ಕಾರ ಎಂದು ಉಲ್ಲೇಖಿಸಿ ಪತ್ರ ಆರಂಭಿಸಿದ್ದಾರೆ.

ಜ.31ರವರೆಗೂ ಲಾಕ್ ಡೌನ್ ವಿಸ್ತರಿಸಿದ ತಮಿಳುನಾಡು ಸರ್ಕಾರಜ.31ರವರೆಗೂ ಲಾಕ್ ಡೌನ್ ವಿಸ್ತರಿಸಿದ ತಮಿಳುನಾಡು ಸರ್ಕಾರ

 ವೈದ್ಯನ ಪತ್ರದಲ್ಲಿ ಏನಿದೆ?

ವೈದ್ಯನ ಪತ್ರದಲ್ಲಿ ಏನಿದೆ?

"ನಾನು ದಣಿದಿದ್ದೇನೆ. ನಾವೆಲ್ಲರೂ ದಣಿದಿದ್ದೇವೆ. ನನ್ನಂಥ ಸಾವಿರಾರು ವೈದ್ಯರು ದಣಿದಿದ್ದಾರೆ, ಆರೋಗ್ಯ ಕಾರ್ಯಕರ್ತರು, ಪೊಲೀಸರು, ಎಲ್ಲರೂ ದಣಿದಿದ್ದಾರೆ.

ಈ ಸೋಂಕಿನ ತಡೆಗೆ, ನಿವಾರಣೆಗೆ ತಳಮಟ್ಟದಿಂದಲೂ ಸಾವಿರಾರು ವೈದ್ಯರು ಕೆಲಸ ಮಾಡಿದ್ದಾರೆ. ಈ ಸೋಂಕು ಮಾಡಿರುವ ಹಾನಿಯನ್ನು ಇನ್ನೂ ಸರಿ ಮಾಡಲು ಸಾಧ್ಯವಾಗಿಲ್ಲ. ನಾವು ನಮ್ಮ ಕೆಲಸದ ಬಗ್ಗೆ ಜಂಭ ಪಟ್ಟುಕೊಳ್ಳುತ್ತಿಲ್ಲ. ನಾವು ಹೀರೊಗಳೂ ಅಲ್ಲ, ಆದರೆ ನಮಗೆ ಉಸಿರಾಡಲು ಸಮಯ ಬೇಕು. ಇಂಥ ಸಮಯದಲ್ಲಿ ನಿಮ್ಮ ನಡೆ ಸರಿಯಲ್ಲ.

ಈ ಸೋಂಕು ಇನ್ನೂ ಸಂಪೂರ್ಣ ಹೋಗಿಲ್ಲ. ಆದರೆ ಇಂಥ ಸಮಯದಲ್ಲಿ ಸಿನಿಮಾ ಮಂದಿರಗಳನ್ನು ತೆರೆದಿರುವುದು, ಅದರಲ್ಲೂ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ನೀಡಿರುವುದು ಸರಿಯಲ್ಲ ಎಂದು ಹೇಳಿಕೊಂಡಿದ್ದಾರೆ.

English summary
Aravinth Srinivas, a resident doctor at JIPMER in Puducherry, addressed the open letter to the Tamil Nadu government and actors Vijay and Simbu after the state decided to allow all theatres in the state to run at 100%
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X