ಕೊಚಾಡಿಯನ್ ಕಿರಿಕ್: ಫೋರ್ಜರಿ ಮಾಡಿಲ್ಲ ಎಂದ ಲತಾ ರಜನಿ
ಬೆಂಗಳೂರು, ಜೂ.16:ಕೊಚಾಡಿಯನ್ ಚಿತ್ರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಸಂಸ್ಥೆಯೊಂದಿಗೆ ಯಾವ ಅಕ್ರಮ ವ್ಯವಹಾರವನ್ನು ನಡೆಸಿಲ್ಲ, ಫೋರ್ಜರಿ ಮಾಡಿಲ್ಲ, ವಂಚನೆಗೈದಿಲ್ಲ, ಸಾಲ ಪಡೆಯಲು ಖಾತರಿದಾರಳಾಗಿ ಸಹಿ ಹಾಕಿಲ್ಲ ಎಂದು
ಸೂಪರ್ ಸ್ಟಾರ್ ರಜನಿಕಾಂತ್ ಅವರ ಪತ್ನಿ ಲತಾ ಅವರು ಸ್ಪಷ್ಟಪಡಿಸಿದ್ದಾರೆ.
ಲತಾ ರಜನಿ ಅವರ ವಿರುದ್ಧ ವಂಚನೆ, ನಕಲಿ ದಾಖಲೆ ಪತ್ರ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದಾರೆ. [ಲತಾ ರಜನಿಕಾಂತ್ ವಿರುದ್ಧ ಎಫ್ ಐಆರ್]

ರಜನಿಕಾಂತ್ ಅವರ ಕೊಚಾಡಿಯನ್ ಚಿತ್ರದ ಸೋಲು, ಅದರಿಂದ ಉಂಟಾದ ಆರ್ಥಿಕ ನಷ್ಟ ಇನ್ನೂ ರಜನಿಕಾಂತ್ ಕುಟುಂಬವನ್ನು ಕಾಡುತ್ತಿದೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ವಿತರಕರಿಗೆ ಆಗಿರುವ ಕಷ್ಟ ನಷ್ಟಗಳ ಕುರಿತು ಕೋರ್ಟಿಗೆ ಲತಾ ಅವರು ವಿವರಣೆ ನೀಡುವ ಸಂದರ್ಭದಲ್ಲಿ ನಕಲಿ ಲೆಟರ್ ಹೆಡ್ ದಾಖಲೆ ಒದಗಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಬೆಂಗಳೂರಿನ ಆಡ್ ಬ್ಯೂರೋ ಪ್ರೈ ಲಿ ವ್ಯವಸ್ಥಾಪಕ ನಿರ್ದೇಶಕ ಅಭಿರ್ ಚಂದ್ರ ನಹಾರ್ ಅವರು ಲತಾ ವಿರುದ್ಧ ಖಾತರಿದಾರರಾಗಿ ಸಹಿ ಹಾಕಿ ವಂಚನೆ ಮಾಡಿದ ಆರೋಪ ಹೊರೆಸಿ 14.9 ಕೋಟಿ ರು ಸಾಲ ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಅದರೆ, ಇದೆಲ್ಲ ಪ್ರಚಾರ ತಂತ್ರವಾಗಿದ್ದು, ರಜನಿಕಾಂತ್ ಅವರು ಹೆಸರು ಹಾಳುಮಾಡಲು ಅಭಿರ್ ಚಂದ್ ಹಾಗೂ ಆತನ ಪತ್ನಿ ಚಂಚಲ್ ಅವರು ಯತ್ನಿಸುತ್ತಿದ್ದಾರೆ. ಆಡ್ ಬ್ಯೂರೋ ಕಂಪನಿ ವಿರುದ್ಧ ಸಿವಿಲ್ ಹಾಗೂ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಲತಾ ರಜನಿಕಾಂತ್ ಪರ ವಕೀಲರು ಹೇಳಿದ್ದಾರೆ.











Click it and Unblock the Notifications