ಲೆಗ್ಗಿಂಗ್ಸ್ ಸುದ್ದಿಯನ್ನು ಸಮರ್ಥಿಸಿಕೊಂಡ ಕುಮುಧಮ್

ಚೆನ್ನೈ, ಸೆಪ್ಟೆಂಬರ್, 26 : ಕಳೆದ ಕೆಲವು ದಿನಗಳ ಹಿಂದೆ ಕುಮುಧಮ್ ನಿಯತಕಾಲಿಕೆ ಮಹಿಳೆಯರ ಲೆಗ್ಗಿಂಗ್ಸ್ ಬಗ್ಗೆ ಲೇಖನ ಪ್ರಕಟಿಸಿತ್ತು. ಆ ಲೇಖನದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಲವು ಮಂದಿ ಹರಿದಾಯ್ದಿದ್ದರು. ಇದೀಗ ವೈದ್ಯರೊಬ್ಬರು ಈ ಲೇಖನ ಮಾನವಾಸಕ್ತಿ ಬರಹ. ಇದಕ್ಕೆ ವಿರೋಧಾಭಾಸಗಳು ಬೇಕಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಕುಮುಧಮ್ ನಿಯತಕಾಲಿಕೆಯಲ್ಲಿ ಪ್ರಕಟವಾದ ಲೆಗ್ಗಿಂಗ್ಸ್ ಲೇಖನ ಆರೋಗ್ಯದ ದೃಷ್ಟಿಯಿಂದ ಅನುಕೂಲಕರವಾಗಿದೆ. ಬಹಳ ಬಿಗಿಯಾದ ವಸ್ತ್ರ ಧರಿಸುವುದರಿಂದ ದೇಹದಲ್ಲಿ ರಕ್ತ ಸಂಚಲನ ತೀರಾ ಹದಗೆಟ್ಟು ಹೃದಯ, ಕಿಡ್ನಿ, ಮೂತ್ರಕೋಶ ಸಂಬಂಧಿ ರೋಗಗಳಿಗೆ ಆಹ್ವಾನ ಕೊಟ್ಟಂತಾಗುತ್ತದೆ. ಈ ಲೇಖನವನ್ನು ಲಿಂಗಾಧಾರಿತವಾಗಿ ಪರಿಗಣಿಸಬಾರದು ಎಂದು ವೈದ್ಯರು ಸಲಹೆ ನೀಡಿದ್ದಾರೆ.[ಅಪ್ಪಚ್ಚಿ ತಿನ್ನೋ ಪಾಪಚ್ಚಿ ಕೈಗೆ ಎಣ್ಣೆ ಲೋಟ]

Tamilnadu

ಕುಮುಧಮ್ ನಿಯತಕಾಲಿಕೆಯ ಸಹಾಯಕ ಎಡಿಟರ್ ಆದ ಕೆ ಕುಂಬೆದ್ರನ್ ಅವರು, 'ಈ ಲೇಖನವನ್ನು ಹಲವಾರು ಪೋಷಕರನ್ನು ಸಂದರ್ಶಿಸಿ ಬರೆಯಲಾಗಿದೆ. ಆ ಲೇಖನದಲ್ಲಿ ಪ್ರಕಟವಾಗಿರುವ ಪ್ರತಿಯೊಂದು ವಾಕ್ಯಗಳು ಪೋಷಕರ ಮಾತುಗಳಾಗಿವೆ. ಸಾರ್ವಜನಿಕ ಸ್ಥಳಗಳಲ್ಲಿ ಬಿಗಿ ಉಡುಪು ಧರಿಸಿ ನಾಗರೀಕರನ್ನು ಮುಜುಗರಕ್ಕೆ ಈಡು ಮಾಡುವ ಪುರುಷ ಮತ್ತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದೇ ಲೇಖನ ಉದ್ದೇಶವಾಗಿತ್ತು' ಎಂದು ತಿಳಿಸಿದ್ದಾರೆ.

'ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸಿ ಲೆಗ್ಗಿಂಗ್ಸ್ ಲೇಖನ ಬರೆಯಲಾಗಿದೆ. ಅಲ್ಲದೇ ಈ ಲೇಖನ ಪೋಷಕರ ಅಭಿಪ್ರಾಯವನ್ನು ಹೆಚ್ಚಾಗಿ ಒಳಗೊಂಡಿದೆ. ಜನರಲ್ಲಿ ಅರಿವು ಮೂಡಿಸಲು ಇದನ್ನು ಪ್ರಕಟ ಮಾಡಲಾಗಿದೆ.

ಇದರಲ್ಲಿ ಮಹಿಳೆಯರ ಹಕ್ಕು ಹಾಗೂ ಭಾವನೆಯನ್ನು ವಿಮರ್ಶೆ ಮಾಡಿಲ್ಲ. ಈ ಲೇಖನದಲ್ಲಿ ಪುರುಷ ಮತ್ತು ಮಹಿಳೆ ಇಬ್ಬರ ದೃಷ್ಟಿಯಿಂದಲೂ ಚರ್ಚೆ ನಡೆದಿದೆ' ಎಂದು ಈ ಲೇಖನ ಬರೆದು ಗೋಜಿಗೆ ಸಿಲುಕಿರುವ ಕುಮುಧಮ್ ನಿಯತಕಾಲಿಕೆಯ ವರದಿಗಾರ ತನ್ನ ಲೇಖನದ ತಿರುಳನ್ನು ತಿಳಿಸಿದ್ದಾರೆ.[ಭಾರತದ ಹೆಣ್ಣು ಮಕ್ಕಳ ವ್ಯಥೆ ಬಿಚ್ಚಿಡುವ ವರದಿಯಲ್ಲೇನಿದೆ?]

ಏನಿದು ಚರ್ಚೆ :
ತಮಿಳುನಾಡಿನ ಕುಮುಧಮ್ ನಿಯತಕಾಲಿಕೆಯು ತಮಿಳುನಾಡಿನ ಹಲವು ಕಾಲೇಜಿನಲ್ಲಿ ಲೆಗ್ಗಿಂಗ್ಸ್ ಬ್ಯಾನ್ ಮಾಡಿರುವ ಹಿನ್ನೆಯಾಗಿರಿಸಿಕೊಂಡು ಲೇಖನ ಪ್ರಕಟಮಾಡಿತ್ತು. ಇದರಲ್ಲಿ ಲಗ್ಗಿನ್ಸ್ ಧರಿಸಿದ ಮಹಿಳೆಯರ ಭಾವಚಿತ್ರವನ್ನು ಪ್ರಕಟಿಸಲಾಗಿತ್ತು.

ಲೆಗ್ಗಿಂಗ್ಸ್ ಲೇಖನ ಓದಿದ ಹಲವಾರು ಮಂದಿ 'ಮಹಿಳೆಯರ ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ಧಕ್ಕೆ ತರುವ ಕಾರ್ಯ ಮಾಡಿದ್ದೀರಿ. ಪುರುಷರ ವಸ್ತ್ರಗಳ ಕುರಿತಾಗಿ ಮಾತನಾಡುವುದೇ ಇಲ್ಲ ಎಂದು ನಿಯತಕಾಲಿಕೆಯ ವಿರುದ್ಧ ಕಿಡಿಕಾರಿದ್ದರು. ಈ ಹಿನ್ನೆಲೆಯಲ್ಲಿ ನಿಯತಕಾಲಿಕೆಯ ವಿರುದ್ಧ ಕೇಸು ದಾಖಲಿಸಲು 15,000 ಮಂದಿಯಿಂದ ಸಹಿ ಪಡೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+