ಕೊರೊನಾ ಪರಿಣಾಮ: ಟಿಸಿಎಸ್ ಮಾಜಿ ಟೆಕ್ಕಿ ಈಗ ಡೆಲಿವರಿ ಬಾಯ್
ಚೆನ್ನೈ, ಏಪ್ರಿಲ್ 06: ಕೊರೊನಾವೈರಸ್ ಹಾವಳಿಯಿಂದ ಜನ ಸಾಮಾನ್ಯರು ಹೆಚ್ಚಾಗಿ ಆನ್ಲೈನ್ ಶಾಪಿಂಗ್ ಮೊರೆ ಹೋಗಬೇಕಾಯಿತು. ಇದು ಲಾಕ್ ಡೌನ್ ನಿಂದ ಉದ್ಯೋಗ ಕಳೆದುಕೊಂಡಿದ್ದ ಅದೆಷ್ಟೋ ಜನರಿಗೆ ಆದಾಯದ ಮೂಲವಾಗಿ ಪರಿಣಮಿಸಿದ್ದು ಅಕ್ಷರಶಃ ಸತ್ಯ.
ಆನ್ಲೈನ್ ಮೂಲಕ ನಿತ್ಯಬಳಕೆಯ ಸಾಮಗ್ರಿಗಳಿಂದ ಹಿಡಿದು ಆಹಾರ, ತರಕಾರಿಗಳನ್ನು ಸಹ ಮನೆಯ ಬಾಗಿಲಿನವರೆಗೆ ತಂದುಕೊಡುವ ಸೇವೆಗೆ ಅವಕಾಶ ಕಲ್ಪಿಸಿದ್ದು ಡೆಲಿವರಿ ಬಾಯ್ ಗಳಿಗೆ ಉಪಯೋಗವಾಯಿತು. ಬೆನ್ನಿಗೆ ಮಣಬಾರದ ಬ್ಯಾಗ್ ವೊಂದನ್ನು ಹಾಕಿಕೊಂಡು ವಾರಾಂತ್ಯಗಳಲ್ಲಿ ಮತ್ತು ಹಬ್ಬ ಹರಿದಿನಗಳಲ್ಲಿ ಸಿಹಿ ತಿನಿಸುಗಳು, ಆಹಾರದ ಪೊಟ್ಟಣಗಳನ್ನು ಸೇರಿದಂತೆ ದಿನಬಳಕೆಗೆ ಅವಶ್ಯಕ ವಸ್ತುಗಳಗಳನ್ನು ಮನೆಯ ಬಾಗಿಲಿಗೆ ತಲುಪಿಸುವ ಸಾಹಸಮಯ ಕೆಲಸದಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಯೋರ್ವರ ಯಶೋಗಾಥೆ ಇಲ್ಲಿದೆ.
ಚೆನ್ನೈ ಮೂಲದ ಜಯರಾಮನ್ ವೃತ್ತಿಯಲ್ಲಿ ಟೆಕ್ಕಿಯಾಗಿದ್ದರು. ಬಿಡುವಿನ ವೇಳೆಯಲ್ಲಿ ಸಮಯ ವ್ಯರ್ಥಮಾಡದೆ ಡೆಲಿವರಿ ಬಾಯ್ ಕೆಲಸದಲ್ಲಿ ತೊಡಗಿಸಿಕೊಂಡು ಆದಾಯದ ಮೂಲವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಡೆಲಿವರಿ ಬಾಯ್ ಕೆಲಸ ಎಂದರೆ ಕಿಳರಿಮೆ ತೋರುತ್ತಿದ್ದ ಅನೇಕ ಯುವಕರಿಗೆ ಸ್ಪೂರ್ತಿಯಾಗಿರುವ ಜಯರಾಮನ್ ವೃತ್ತಿಯೇ ಧರ್ಮ ಎನ್ನುವ ಮಾತನ್ನು ಎತ್ತಿ ಹಿಡಿದಿದ್ದಾರೆ.
ಕೆಲ ದಿನಗಳ ಹಿಂದೆಯೇ ಟಿಸಿಎಸ್ ಉದ್ಯೋಗವನ್ನು ಕಳೆದುಕೊಂಡು ಮತ್ತೊಂದು ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಈ ಮಧ್ಯದಲ್ಲಿ ಸಮಯ ವ್ಯರ್ಥ ಮಾಡುವ ಬದಲು ಜೋಮ್ಯಾಟೋದಲ್ಲಿ ಅರೆಕಾಲಿಕ ಡೆಲಿವರಿ ಬಾಯ್ ಕೆಲಸಕ್ಕೆ ಸೇರಿಕೊಂಡರು. ಈ ಕುರಿತು ಪಾಲಕರಿಗೆ ಮತ್ತು ಸ್ನೇಹಿತರಿಗೆ ತಿಳಿಸಿದಾಗ ಐಟಿಯಲ್ಲಿ ಕೆಲಸ ಮಾಡುವ ನಿನಗೆ ಏಕೆ ಈ ರೀತಿಯಾದ ಯೋಚನೆ ಬಂದಿತು. ನಿನ್ನಿಂದ ಡೆಲಿವರಿ ಕೆಲಸ ಮಾಡಲು ಸಾಧ್ಯವಿಲ್ಲ ನಿನ್ನ ಮನಸ್ಥಿತಿಯನ್ನು ಬದಲಾಯಿಸಿಕೊಂಡು ನಿನ್ನ ವ್ಯಾಸಂಗಕ್ಕೆ ತಕ್ಕ ವೃತ್ತಿಯನ್ನೇ ಆಯ್ಕೆ ಮಾಡಿಕೊ ಎಂದು ಕಿವಿ ಮಾತು ಹೇಳಿದರು, ಯಾರ ಮಾತನ್ನು ಕೇಳದ ಜಯರಾಮ್ ಯಾವ ಕೆಲಸವು ದೊಡ್ಡದು ಸಣ್ಣದು ಅಂದೆಲ್ಲ ಇರುವುದಿಲ್ಲ ನಾವು ಪ್ರೀತಿಯಿಂದ ಮಾಡುವ ಕೆಲಸದಲ್ಲಿ ನೆಮ್ಮದಿ ಇರುತ್ತದೆ ಎಂದು ತಾತ್ಕಾಲಿಕವಾಗಿ ಡೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡರು.
ವಿದ್ಯಾವಂತನಿಗೆ ಒಂದೇ ಕೆಲಸವಾದರೇ, ಅವಿದ್ಯಾವಂತನಿಗೆ ಮಾಡಿದ ಎಲ್ಲವೂ ಕೆಲಸವೆಂಬಂತೆ ಉನ್ನತ ಶಿಕ್ಷಣ ಪಡೆಯದೆ ಇದ್ದರೂ ಸಹ ಕುಟುಂಬ ನಿರ್ವಹಣೆಗಾಗಿ ಕೆಲಸ ಮಾಡುತ್ತಿರುವ ಅನೇಕ ಜನರಿಗೆ ಈ ಡೆಲಿವರಿ ಬಾಯ್ ಜಾಬ್ ಅತಿ ಹೆಚ್ಚು ಉಪಯುಕ್ತವಾಗಿದೆ. ಡೆಲಿವರಿ ಬಾಯ್ ಕೆಲಸವನ್ನು ನಿಭಾಯಿಸುವ ಚಾಕಚಕ್ಯತೆ ರೂಡಿಸಿಕೊಂಡಿರುವ ಜಯರಾಮ್ ಅವರು ಅನೇಕ ರೀತಿಯ ಸವಾಲುಗಳನ್ನು ಆರಂಭಿಕ ದಿನಗಳಲ್ಲಿ ಎದುರಿಸಿದ್ದರು. ಮೊದಲು ಕೆಲಸ ಕಷ್ಟಕರವಾಗಿತ್ತು ದಿನಕಳೆದಂತೆ ಎಲ್ಲವು ಹೊಂದಾಣಿಕೆಯಾಯಿತು.
ಕೆಲವು ಬಾರಿ ಗ್ರಾಹಕರು ವಿತರಣಾ ಸ್ಥಳವನ್ನು ಸರಿಯಾಗಿ ನಮೂದಿಸದೆ ಇರುವುದು, ದೂರವಾಣಿ ಸಂಖ್ಯೆಯನ್ನು ನವೀಕರಿಸಲಾಗಿರುವುದಿಲ್ಲ, ಹೊಸ ಸ್ಥಳಗಳಲ್ಲಿ ಡೆಲಿವರಿ ಎಜೆಂಟ್ ರಿಗೆ ಹೋಟೆಲ್ ಮತ್ತು ವಿತರಣಾ ಸ್ಥಳದ ಹುಡುಕಾಟ, ಒಂದೇ ಸಮಯಕ್ಕೆ 14 ಕಿ.ಮೀ ಅಂತರದಲ್ಲಿ 3 ಆರ್ಡರ್ ಗಳನ್ನು ಪಡೆದುಕೊಂಡು ಡೆಲಿವರಿ ನೀಡುವುದು ಕಷ್ಟಕರವಾಗಿತ್ತು ಇದರೊಂದಿಗೆ ಪೆಟ್ರೊಲ್ ಬೆಲೆ ಸಹ ಏರಿಕೆಯಾಗಿದ್ದು ಹೇಳತಿರದ ಸಂಕಟವಾಗಿ ಪರಿಣಮಿಸಿತ್ತು ಎಂದು ಅನುಭವವನ್ನು ಹಂಚಿಕೊಂಡಿದ್ದಾರೆ.












Click it and Unblock the Notifications