ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರುಣಾನಿಧಿ ಆರೋಗ್ಯ ಇನ್ನಷ್ಟು ಕ್ಷೀಣ: 24 ಗಂಟೆ ಗಡುವು

|
Google Oneindia Kannada News

Recommended Video

ಕರುಣಾನಿಧಿ ಆರೋಗ್ಯ ಕ್ಷೀಣ | 24 ಗಂಟೆಗಳ ಗಡುವು | Oneindia Kannada

ಚೆನ್ನೈ, ಆಗಸ್ಟ್ 6: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರ ಆರೋಗ್ಯ ಇನ್ನಷ್ಟು ಹದಗೆಟ್ಟಿದ್ದು, 24 ಗಂಟೆಗಳಲ್ಲಿ ಅವರು ಚಿಕಿತ್ಸೆಗೆ ನೀಡುವ ಸ್ಪಂದನೆ ಆಧಾರದಲ್ಲಿ ಅವರ ಸ್ಥಿತಿ ನಿರ್ಧಾರವಾಗಲಿದೆ.

ವಯೋಸಹಜ ಸಮಸ್ಯೆಯಿಂದಾಗಿ ಅವರ ಅಂಗಗಳು ಕಾರ್ಯ ನಿರ್ವಹಿಸುವಂತೆ ಕಾಪಾಡುವುದು ದೊಡ್ಡ ಸವಾಲಾಗಿದೆ. ಅವರಿಗೆ ನಿರಂತರವಾಗಿ ವೈದ್ಯಕೀಯ ನೆರವು ನೀಡಲಾಗುತ್ತಿದೆ.

ಕರುಣಾನಿಧಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ರಾಷ್ಟ್ರಪತಿ ಭೇಟಿಕರುಣಾನಿಧಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ರಾಷ್ಟ್ರಪತಿ ಭೇಟಿ

ಆದರೆ ಮುಂದಿನ 24 ಗಂಟೆಯಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸುವ ರೀತಿಯಲ್ಲಿ ಉಳಿದದ್ದು ನಿರ್ಧಾರವಾಗಲಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಕಾವೇರಿ ಆಸ್ಪತ್ರೆಯ ವೈದ್ಯ ಡಾ. ಅರವಿಂದನ್ ಸೆಲ್ವರಾಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

karunanidhi health critical 24 hours will determine

ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಕರುಣಾನಿಧಿ, ಒಂದು ವಾರಕ್ಕೂ ಹೆಚ್ಚು ಕಾಲದಿಂದ ಆಸ್ಪತ್ರೆಯಲ್ಲಿದ್ದಾರೆ.

ಕರುಣಾನಿಧಿ ಅವರು ಜಾಂಡೀಸ್‌ಗೆ ತುತ್ತಾಗಿದ್ದು, ಉಸಿರಾಡಲು ಕಷ್ಟಪಡುತ್ತಿದ್ದಾರೆ. ಇದರಿಂದಾಗಿ ಅವರ ಆರೋಗ್ಯದ ಸ್ಥಿತಿಯಲ್ಲಿ ತೀವ್ರ ಏರಳಿತ ಉಂಟಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಕರುಣಾನಿಧಿ ಅನಾರೋಗ್ಯ: ಆಘಾತ ತಾಳಲಾರದೆ 21 ಡಿಎಂಕೆ ಕಾರ್ಯಕರ್ತರ ಸಾವುಕರುಣಾನಿಧಿ ಅನಾರೋಗ್ಯ: ಆಘಾತ ತಾಳಲಾರದೆ 21 ಡಿಎಂಕೆ ಕಾರ್ಯಕರ್ತರ ಸಾವು

ಅವರ ದೇಹಾರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿರಲಿಲ್ಲ. ಸೋಮವಾರದಿಂದ ಆರೋಗ್ಯದ ಮಟ್ಟದಲ್ಲಿ ಇನ್ನಷ್ಟು ಕುಸಿತ ಉಂಟಾಗಿದೆ.

ಕರುಣಾನಿಧಿ ಅವರ ಪತ್ನಿ ದಯಾಳು ಅಮ್ಮಾನ್ ಅವರನ್ನು ಸೋಮವಾರ ಆಸ್ಪತ್ರೆಗೆ ಕರೆತರಲಾಗಿದೆ. ಕರುಣಾನಿಧಿ ಅವರು ಜುಲೈ 29ರಂದು ಆಸ್ಪತ್ರೆಗೆ ದಾಖಲಾದ ಬಳಿಕ ಅವರು ಇದೇ ಮೊದಲ ಬಾರಿಗೆ ಆಸ್ಪತ್ರೆ ಭೇಟಿ ನೀಡಿದ್ದಾರೆ. ಅವರನ್ನು ಮೂರನೇ ಮಗ ತಮಿಳರಸು ಗಾಲಿಕುರ್ಚಿಯಲ್ಲಿ ಕರೆದುಕೊಂಡು ಬಂದರು.

English summary
M Karunanidhi's health become more critical. Doctor of Kauvery hospital released statment, His response to the medical intervention over the next 24 hours will determine the prognosis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X