ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಕಮಲ್

By Mahesh
|
Google Oneindia Kannada News

ಚೆನ್ನೈ, ಏಪ್ರಿಲ್ 24: ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಅವರು ತಮ್ಮ ಪಕ್ಷವು ಅಧಿಕೃತವಾಗಿ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವುದಾಗಿ ಮಂಗಳವಾರದಂದು ಘೋಷಿಸಿದರು. ಕಮಲ್ ಅವರ ಮಕ್ಕಳ್ ನೀತಿ ಮಯ್ಯಂ ಪಕ್ಷವು ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಲಿದೆ.

ರಾಜಕೀಯಕ್ಕೆ ಕಮಲ್ ಎಂಟ್ರಿ, ಹೊಸ ಪಕ್ಷ ಸ್ಥಾಪನೆ ರಾಜಕೀಯಕ್ಕೆ ಕಮಲ್ ಎಂಟ್ರಿ, ಹೊಸ ಪಕ್ಷ ಸ್ಥಾಪನೆ

ಚೆನ್ನೈನಲ್ಲಿ ನಡೆದ ಗ್ರಾಮ ಪಂಚಾಯಿತಿ ಸಭೆಯಲ್ಲಿಯಲ್ಲಿ ಈ ವಿಷಯವನ್ನು ಕಮಲ್ ಘೋಷಿಸಿದರು. ಭ್ರಷ್ಟಾಚಾರದ ವಿರುದ್ಧ ಹೋರಾಡಲು ಮತ್ತು ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಹಾಗೂ ಜನರ ಪರವಾಗಿ ಕೆಲಸ ಮಾಡಲು ತಾವು ರಾಜಕೀಯಕ್ಕೆ ಬಂದಿರುವುದಾಗಿ ಕಮಲ್ ಹಾಸನ್ ಅವರು ಮಕ್ಕಳ್ ನೀತಿ ಮಯ್ಯಂ ಪಕ್ಷ ಉದ್ಘಾಟನೆ ದಿನದಂದು ಹೇಳಿದ್ದರು.

Kamal Haasans party to contest in local body elections

2021ರ ವಿಧಾನಸಭೆ ಚುನಾವಣೆಯಲ್ಲೂ ಸ್ಪರ್ಧಿಸುವುದಾಗಿ ಈಗಾಗಲೇ ಹೇಳಿದ್ದಾರೆ. ಹೊಸ ತಮಿಳುನಾಡು ರಚಿಸಲು ನಾವಿಲ್ಲಿ ಬಂದಿದ್ದೇನೆ, ನಾನು ಕ್ಯಾಸ್ಟಿಂಗ್ ಕೋಚ್ ಬಗ್ಗೆ ಮಾತನಾಡಲಾರೆ. ಆದರೆ, ಪ್ರತಿ ಮಹಿಳೆಗೂ ತನ್ನದೆ ಆದ ಹಕ್ಕುಗಳಿವೆ, ಸ್ವಾತಂತ್ರ್ಯವಿದೆ ಎಂದರು.

ನಾನು ಸೋತರೆ ಸಿಡಿದೇಳುತ್ತೇನೆ. ನಾನು ನಿರ್ಧರಿಸಿದರೆ ನಾನೇ ಮುಖ್ಯಮಂತ್ರಿ. ಬನ್ನಿ, ಮೂರ್ಖರ ವಿರುದ್ಧ ಹೋರಾಡುವವನೇ ನಿಜವಾದ ನಾಯಕ'. ಎಂದು ಪಕ್ಷ ಆರಂಭಕ್ಕೂ ಮುನ್ನ ಕಮಲ್ ಅವರು ಟ್ವೀಟ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಮಧುರೈನಲ್ಲಿ ಫೆಬ್ರವರಿಯಲ್ಲಿ ಪಕ್ಷ ಉದ್ಘಾಟನೆ ಮಾಡಿದ ಬಳಿಕ ತಮಿಳುನಾಡು ಪ್ರವಾಸ ಮಾಡಿದ್ದರು.

English summary
Superstar Kamal Haasan on Tuesday announced that his newly launched political party, Makkal Needhi Maiam, will contest in the upcoming local body election in Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X