ಪಕ್ಷದ ಬಾವುಟ ಹಾರಿಸಿ, ಪ್ರಮುಖರನ್ನು ಹೆಸರಿಸಿದ ಕಮಲ್
ಚೆನ್ನೈ, ಜುಲೈ 12: ಮಕ್ಕಳ್ ನೀತಿ ಮಯ್ಯಂ(ಎಂಎನ್ಎಂ) ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರು ಇದೇ ಮೊದಲ ಬಾರಿಗೆ ತಮ್ಮ ಪಕ್ಷದ ಬಾವುಟವನ್ನು ಹಾರಿಸಿದರು. ಆಳ್ವಾರ್ ಪೇಟ್ ನ ಕಚೇರಿಯಲ್ಲಿ ಧ್ವಜಾರೋಹಣ ಮಾಡಿ ನಂತರ ಪಕ್ಷದ ಪ್ರಮುಖರ ಹೆಸರುಗಳನ್ನು ಪ್ರಕಟಿಸಿದ್ದಾರೆ.
ಚುನಾವಣಾ ಆಯೋಗದಿಂದ ಪಕ್ಷ, ಪಕ್ಷದ ಬಾವುಟಕ್ಕೆ ಮಾನ್ಯತೆ ಸಿಕ್ಕ ಬಳಿಕ , ಇದೇ ಮೊದಲ ಬಾರಿಗೆ ಈ ರೀತಿ ಸಮಾರಂಭ ನಡೆಸಲಾಗಿದೆ.
#MakkalNeedhiMaiam President #KamalHaasan hoists his Party Flag at Alwarpet Head Office.. #MNMFlagHoist pic.twitter.com/qkHMFKfDIx
— Ramesh Bala (@rameshlaus) July 12, 2018
ಕು ಜ್ಞಾನ ಸಂಬಂಧಮ್ ಅವರನ್ನು ಪಕ್ಷದ ಉಪಾಧ್ಯಕ್ಷ, ಅರುಣಾಚಲಂ ಅವರನ್ನು ಕಾರ್ಯದರ್ಶಿ ಹಾಗೂ ಸುರೇಶ್ ಅವರನ್ನು ಖಜಾಂಚಿಯಾಗಿ ನೇಮಿಸಲಾಗಿದೆ

ಈ ಮುಂಚೆ ಇದ್ದ ಸಮಿತಿಯನ್ನು ವಜಾಗೊಳಿಸಿ ಹೊಸ ಕಾರ್ಯಕಾರಿ ಸಮಿತಿಯನ್ನು ನೇಮಿಸಲಾಗಿದೆ. ಕಮೀಲಾ ನಾಸರ್, ನಿವೃತ್ತ ಐಪಿಎಸ್ ಎಜಿ ಮೌರ್ಯ, ನಟಿ ಶ್ರೀಪ್ರಿಯ ರಾಜಕುಮಾರ್, ಸಿಕೆ ಕುಮಾರವೇಲ್, ಎಸ್ ಮೂರ್ತಿ, ಆರ್ ರಂಗರಾಜನ್, ಸೂರ್ಯ ರಾಜನ್, ಆರ್ ತಂಗವೇಲ್ ಹಾಗೂ ಬರಹಗಾರ ಭಾರತಿ ಕೃಷ್ಣಕುಮಾರ್ ಅವರು ಸಮಿತಿಯಲ್ಲಿರುವ ಪ್ರಮುಖರಾಗಿದ್ದಾರೆ. ಇದಲ್ಲದೆ, ಪಕ್ಷದ ಜಿಲ್ಲಾವಾರು ಘಟಕಗಳ ಉಸ್ತುವಾರಿ, ಪದಾಧಿಕಾರಿಗಳನ್ನು ಹೆಸರಿಸಲಾಗಿದೆ.
ಕಳೆದ ಫೆಬ್ರವರಿ ತಿಂಗಳಿನಲ್ಲಿ ಆರಂಭವಾದ ಕಮಲ್ ಹಾಸನ್ ಅವರ ಪಕ್ಷ ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸಲು ಉತ್ಸುಕವಾಗಿದೆ.












Click it and Unblock the Notifications