ಪನ್ನೀರ್ ಸೆಲ್ವಂ ಬೆಂಬಲಕ್ಕೆ ಕಮಲ್ ನಿಂತಿದ್ದೇಕೆ? ಇಲ್ಲಿದೆ ಉತ್ತರ

Posted By:
Subscribe to Oneindia Kannada

ಚೆನ್ನೈ, ಫೆಬ್ರವರಿ 09: ತಮಿಳುನಾಡಿನ ಹಂಗಾಮಿ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂರನ್ನು ಸ್ಟಾರ್ ನಟ ಕಮಲಹಾಸನ್ ಬೆಂಬಲಿಸಿದ್ದಾರೆ. ಶಶಿಕಲಾ ನಟರಾಜನ್ ಅವರು ಮುಖ್ಯಮಂತ್ರಿಯಾದರೆ ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲದ್ದಂತಾಗುತ್ತದೆ ಎಂದಿದ್ದಾರೆ.

ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಪನ್ನೀರ್ ಸೆಲ್ವಂರ ಬೆಂಬಲಕ್ಕೆ ನಿಂತಿದ್ದೇಕೆ? ಸರಣಿ ಟ್ವೀಟ್ ಗಳ ಅರ್ಥವೇನು? ತಮಿಳರು ಏಕೆ ಈಗ ಮತ್ತೊಮ್ಮೆ ಒಗ್ಗೂಡಬೇಕು ಎಂಬುದನ್ನು ವಿವರಿಸಿದ್ದಾರೆ.

ಜನರಿಗೆ ಇಷ್ಟವಿಲ್ಲದಿದ್ದರೆ ಮುಖ್ಯಮಂತ್ರಿಯನ್ನು ಅಧಿಕಾರದಿಂದ ಕೆಳಗಿಳಿಸುವ ಆಧಿಕಾರ ಇದೆಯಲ್ಲವೇ? ತಮಿಳುನಾಡಿನ ಈಗಿನ ಗೊಂದಲದ ಪರಿಸ್ಥಿತಿಗೆ ಕೆಟ್ಟ ಕ್ಲೈಮಾಕ್ಸ್ ಎಂದಿರುವ ಕಮಲ್, ನಾವು ಕುರಿಮಂದೆಯಲ್ಲ ನಮ್ಮನ್ನು ಬೇಕಾದಲ್ಲಿಗೆ ಅಟ್ಟಲ್ಪಡುವುದು ನಮಗೆ ಇಷ್ಟವಿಲ್ಲ. ಹೆಚ್ಚು ಕಾಲ ತಮಿಳರು ಇದನ್ನೆಲ್ಲ ಸಹಿಸಲಾರರು ಎಂದು ಎಚ್ಚರಿಸಿದ್ದಾರೆ. ಇನ್ನಷ್ಟು ವಿವರ ನಿರೀಕ್ಷಿಸಿ....

ರಾಜಕೀಯದ ಬಗ್ಗೆ ಸರಣಿ ಟ್ವೀಟ್ಸ್

ರಾಜಕೀಯದ ಬಗ್ಗೆ ಸರಣಿ ಟ್ವೀಟ್ಸ್

ಶಶಿಕಲಾರನ್ನು ಸಿಎಂ ಆಗಿ ಕಾಣುವುದು ದುರಂತ. ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕ ಎಂದು ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಹೇಳಿದ್ದಾರೆ.

ಕಮಲ್ ರಿಂದ ಟ್ವೀಟ್ ಬಗ್ಗೆ ಸ್ಪಷ್ಟನೆ

ಕಮಲ್ ರಿಂದ ಟ್ವೀಟ್ ಬಗ್ಗೆ ಸ್ಪಷ್ಟನೆ ಸಿಕ್ಕಿದ್ದು, ತಮ್ಮ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿಲ್ಲ. ಪ್ರಜ್ಞಾಪೂರ್ವಕವಾಗಿ ಟ್ವೀಟ್ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಸಂದರ್ಶನದ ವೇಳೆ ಹೇಳಿದ್ದೇನು?

ಸಂದರ್ಶನದ ವೇಳೆ ಹೇಳಿದ್ದೇನು?

ನಾನು ಯಾವುದೇ ಪಕ್ಷ ಅಥವಾ ವ್ಯಕ್ತಿಯ ಪರ ಮಾತನಾಡುತ್ತಿಲ್ಲ. ವ್ಯವಸ್ಥೆಯ ಬಗ್ಗೆ ಹೇಳುತ್ತಿದ್ದೇನೆ. ಪದಗಳ ಪ್ರಯೋಗ ತುಂಬಾ ಎಚ್ಚರಿಕೆ ಮಾಡುತ್ತಿದ್ದೇನೆ. ಮುಂದೆ ಹೇಳಿಕೆ ತಿರುಚಿ ಗಲಭೆ, ಘರ್ಷಣೆಗಳಾಗುವುದು ಬೇಕಿಲ್ಲ.

I am trying to be equi-poised and I am not going to show any of my anger which may lead to violence. That's why the mystery."

ಪನ್ನೀರ್ ಸೆಲ್ವಂ ಅವರೇ ಬೇಕೆಂದು ಹೇಳಿಲ್

ಪನ್ನೀರ್ ಸೆಲ್ವಂ ಅವರೇ ಬೇಕೆಂದು ಹೇಳಿಲ್

ನಾನು ಪನ್ನೀರ್ ಸೆಲ್ವಂ ಬೆಂಬಲಿಗನಲ್ಲ, ಜಲ್ಲಿಕಟ್ಟು ಪ್ರತಿಭಟನೆ ಸಂದರ್ಭದಲ್ಲಿ ಮಾತ್ರ ನಾನು ಅವರೊಂದಿಗೆ ಮಾತನಾಡಿದ್ದೆ. ಜನರ ಭಾವನೆಗಳಿಗೆ ಬೆಲೆ ಕೊಡಿ ಎಂದಷ್ಟೇ ಹೇಳಿದ್ದೆ. ಪ್ರಜೆಗಳಿಂದ ಆಯ್ಕೆಯಾದ ಪ್ರತಿನಿಧಿ ನಮಗೆ ಬೇಕಿದೆ. ಪನ್ನೀರ್ ಸೆಲ್ವಂ ಅವರೇ ಬೇಕೆಂದು ಹೇಳಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Actor Kamal Haasan has been tweeting in mysterious language as to what's unravelling in Tamil Nadu, especially the battle between VK Sasikala and O Panneerselvam. In an exclusive interview to India Today
Please Wait while comments are loading...