ಕಮಲ್ ಹಾಸನ್ ಮತ್ತು ನನ್ನ ಗುರಿ ಒಂದೇ: ರಜನಿಕಾಂತ್
ಚೆನ್ನೈ, ಫೆಬ್ರವರಿ 23: 'ಕಮಲ್ ಹಾಸನ್ ಮತ್ತು ನನ್ನ ಗುರಿ ಒಂದೇ. ಅದು ಜನರಿಗೆ ಒಳಿತನ್ನು ಮಾಡಬೇಕು ಎಂಬುದು' ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.
ಕಮಲ್ ಹಾಸನ್ ಅವರ ಹೊಸ ಪಕ್ಷದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಚೆನ್ನೈಯಲ್ಲಿ ಉತ್ತರಿಸಿದ ರಜನಿಕಾಂತ್, "ಕಮಲ್ ಹಾಸನ್ ಅವರ ಸಾರ್ವಜನಿಕ ಸಭೆ ಬಹಳ ಚೆನ್ನಾಗಿತ್ತು. ನಾನು ಅದನ್ನು ಸಂಪೂರ್ಣ ನೋಡಿದೆ. ನಮ್ಮ ದಾರಿ ಮತ್ತು ಶೈಲಿ ಬೇರೆ ಬೇರೆ ಇರಬಹುದು. ಆದರೆ ಇಬ್ಬರ ಗುರಿಯೂ ಒಂದೆ. ಅದು ಜನರಿಗೆ ಒಳಿತನ್ನು ಮಾಡುವುದು" ಎಂದು ತಲೈವಾ ರಜನಿಕಾಂತ್ ಹೇಳಿದ್ದಾರೆ.
ಬಹುಭಾಷಾ ನಟ ಕಮಲ್ ಹಾಸನ್, ಫೆ.21 ರಂದು ತಮ್ಮ ಹೊಸ ಪಕ್ಷದ ಹೆಸರನ್ನು ಘೋಷಿಸಿದ್ದರು. ಮಕ್ಕಳ ನೀತಿ ಮಯ್ಯಂ(ಜನರ ನ್ಯಾಯ ಕೇಂದ್ರ) ಎಂಬ ಅವರ ಪಕ್ಷದ ಹೆಸರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ಘೋಷಿಸಿದ್ದರು.












Click it and Unblock the Notifications