ಜಯಾ ಪ್ರಕರಣದ ನ್ಯಾಯಾಧೀಶರ ಬಗ್ಗೆ ಗೊತ್ತಾ?

ಬೆಂಗಳೂರು, ಸೆ. 27 : ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಅಂತಿಮ ತೀರ್ಪು ನೀಡಲಿರುವ ಮೈಕಲ್ ಜಾನ್ ಕುನ್ಹ ಪ್ರಕರಣಕ್ಕೆ ಸಂಬಂಧಿಸಿ ಐದನೇ ನ್ಯಾಯಾಧೀಶರು. ಈ ಹಿಂದೆ ನಾಲ್ಕು ನ್ಯಾಯಾಧೀಶರು ಪ್ರಕರಣದ ವಿವಾರಣೆ ನಡೆಸಿದ್ದರು.

ಪ್ರಕರಣದ ಮೊದಲ ನ್ಯಾಯಾಧೀಶ ಎ. ಎಸ್‌. ಪಂಚಪುರೆ 2003ರವೆರೆಗೆ ಕೇಸ್‌ಗೆ ಸಂಬಂಧಿಸಿದ ವಿಚಾರಣೆ ನಡೆಸಿದರು. ಅಲ್ಲದೇ ಸುಪ್ರೀಂ ಕೋರ್ಟ್‌ ಆದೇಶದಂತೆ ಚೆನೈನಿಂದ ಬೆಂಗಳೂರಿಗೆ ಪ್ರಕರಣ ವರ್ಗಾಯಿಸಿದ್ದು ಪಂಚಪುರೆ ಎನ್ನುವುದು ವಿಶೇಷ.(ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದ ಸಂಪೂರ್ಣ ವಿವರ)

jaya

ನಂತರ 2007ರಲ್ಲಿ ಎ. ಎಸ್‌. ಪಂಚಪುರೆ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕವಾದ ಕಾರಣ ಹೊಸ ಜಡ್ಜ್‌ ಆಗಮಿಸುತ್ತಾರೆ. ಪ್ರಕರಣದ ಎರಡನೇ ನ್ಯಾಯಾಧೀಶರಾಗಿ ಎಲ್‌.ಟಿ. ಮುನೋಳಿ ಕೆಲ ಕಾಲ ಕಾರ್ಯನಿರ್ವಹಿಸುತ್ತಾರೆ. ಇವರ ನಿವೃತ್ತಿ ನಂತರ ಬಿ.ಎಂ.ಮಲ್ಲಿಕಾರ್ಜುನಯ್ಯ ನ್ಯಾಯಾಧೀಶರಾಗಿ ಆಗಮಿಸುತ್ತಾರೆ.

ಮಲ್ಲಿಕಾರ್ಜುನಯ್ಯ ನ್ಯಾಯಾಧೀಶರಾಗಿದ್ದಾಗಲೇ ಪ್ರಕರಣದ ಬಹುಪಾಲು ವಿಚಾರಣೆ ನಡೆಯುತ್ತದೆ. ಸಾಕ್ಷಿಗಳ ವಿಚಾರಣೆ, ಕ್ರಾಸ್‌ ಎಕ್ಸಾಮಿನೇಶನ್‌ ನಡೆಯುತ್ತದೆ. ನಂತರ ಮಲ್ಲಿಕಾರ್ಜುನಯ್ಯ 2012 ರ ಆಗಸ್ಟ್‌ನಲ್ಲಿ ನಿವೃತ್ತಿಯಾಗುತ್ತಾರೆ.(ತೀರ್ಪು ಕೇಳಲು ತವರಿಗೆ ಜಯಾ 'ಅಮ್ಮ' ಬರಲೇಬೇಕು)

2013ರ ನವೆಂಬರ್‌ನಲ್ಲಿ ಎಂ.ಎಸ್‌.ಬಾಲಕೃಷ್ಣ ನ್ಯಾಯಾಧೀಶರಾಗಿ ಆಗಮಿಸುತ್ತಾರೆ. ಉಳಿದ ಸಾಕ್ಷಿಗಳ ವಿಚಾರಣೆ ಇವರ ಅವಧಿಯಲ್ಲಿ ಮುಕ್ತಾಯವಾಗುತ್ತದೆ. ಪಬ್ಲಿಕ್‌ ಪ್ರಾಸಿಕ್ಯೂಟರ್ ಅಂತಿಮ ಹಂತದ ವಾದವನ್ನು ಮುಗಿಸುರುತ್ತಾರೆ. ಸುಪ್ರೀಂ ಕೋರ್ಟ್‌ ಬಾಲಕೃಷ್ಣ ಅವರಿಗೆ ಪ್ರಕರಣದ ವಿಚಾರಣೆ ಮುಂದುವರಿಸಲು ತಿಳಿಸುತ್ತದೆ. ಆದರೆ ತಮ್ಮ ನಿವೃತ್ತಿ (ಸೆ. 30, 2013) ನಂತರ ಪ್ರಕರಣದ ವಿಚಾರಣೆ ನಡೆಸಲು ಬಾಲಕೃಷ್ಣ ನಿರಾಕರಿಸುತ್ತಾರೆ. ನಂತರ ಪ್ರಕರಣ ಮೈಕಲ್ ಜಾನ್ ಕುನ್ಹ ಅವರ ಕೈ ಸೇರುತ್ತದೆ.

ಸೆ. 27 ರಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮೈಕಲ್ ಜಾನ್ ಕುನ್ಹ ಜಯಲಲಿತಾ ಮತ್ತು ಇತರೆ ಆರೋಪಿಗಳಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಮಾನ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+