ತಮಿಳುನಾಡಿನಲ್ಲಿ ಶಾಲೆ, ಕಾಲೇಜುಗಳಿಗೆ 3 ದಿನಗಳ ರಜೆ ಘೋಷಣೆ

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 06: ತಮಿಳುನಾಡಿನ ಮೊದಲ ಮಹಿಳಾ ಮುಖ್ಯಮಂತ್ರಿ, ಅಭಿಮಾನಿಗಳ ಪಾಲಿನ 'ಅಮ್ಮ', ಪುರಚ್ಚಿ ತಲೈವಿ ಎನಿಸಿಕೊಂಡಿದ್ದ ಜೆ ಜಯಲಲಿತಾ ಅವರ ಸಾವಿನ ದುಃಖದಲ್ಲಿ ತಮಿಳುನಾಡು ಮುಳುಗಿದೆ. ಏಳು ದಿನಗಳ ಶೋಕಾಚರಣೆಯನ್ನು ಘೋಷಿಸಲಾಗಿದೆ.

[ಗ್ಯಾಲರಿ: ಶೋಕಸಾಗರದಲ್ಲಿ 'ಅಮ್ಮ'ನ ಮಕ್ಕಳು]

ತಮಿಳುನಾಡಿನ ಎಲ್ಲಾ ಶಾಲಾ, ಕಾಲೇಜುಗಳಿಗೆ ಮೂರು ದಿನಗಳ ರಜೆ ಘೋಷಿಸಲಾಗಿದೆ. ತಮಿಳುನಾಡಿನ ಸಿಎಂ ಜಯಲಲಿತಾ ಅವರು ಸೋಮವಾರ 11.30ಕ್ಕೆ ನಿಧನರಾಗಿದ್ದಾರೆ. ಶೋಕಾಚರಣೆ ಹಿನ್ನಲೆಯಲ್ಲಿ ಎಲ್ಲಾ ವಿದ್ಯಾಸಂಸ್ಥೆಗಳಿಗೆ ಮೂರು ದಿನ ರಜೆ ಘೋಷಿಸಲಾಗಿದೆ ಎಂದು ಶಿಕ್ಷಣ ಇಲಾಖೆ ತನ್ನ ಪ್ರಕಟಣೆಯಲ್ಲಿ ಹೇಳಿದೆ. [ತಮಿಳುನಾಡಿನ 'ಅಮ್ಮ' ಜೆ ಜಯಲಲಿತಾ ವಿಧಿವಶ]

Jayalalithaa no more- Schools and colleges shut for 3 days

ಸೋಮವಾರ ಕೂಡಾ ಸರ್ಕಾರಿ ಶಾಲೆ, ಕಾಲೇಜು ತೆರೆಯುವ ಬಗ್ಗೆ ಗೊಂದಲ ಮೂಡಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಅಣ್ಣಾಹಾಗೂ ಮದ್ರಾಸ್ ವಿವಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಆದರೆ, ಖಾಸಗಿ ಶಾಲೆ, ಕಾಲೇಜುಗಳು ಎಂದಿನಂತೆ ತೆರೆಯಲಾಗಿತ್ತು. ಆದರೆ, ಸೋಮವಾರ ಮಧ್ಯಾಹ್ನದ ನಂತರ ರಜೆ ಘೋಷಿಸಲಾಗಿತ್ತು.

ಜಯಾ ಅವರ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಹಲವಾರು ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ. ಮೋದಿ ಅವರು ತಮ್ಮ ಶೋಕ ಸಂದೇಶದಲ್ಲಿ ಜಯಾ ಅವರು ದೇಶದ ಮಹಾನ್ ನಾಯಕಿ, ಬಡವರ ಜತೆ ಅವರು ಬೆರೆಯುತ್ತಿದ್ದ ರೀತಿ ಅನೇಕರಿಗೆ ಸ್ಪೂರ್ತಿದಾಯಕ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A three day holiday has been declared in Tamil Nadu following the death of Tamil Nadu Chief Minister, J Jayalalithaa. The decision was taken by the education department following the death of the CM at 11.30 PM.
Please Wait while comments are loading...