ಜಯಲಲಿತಾ ಹೆಸರು ನೊಬೆಲ್ ಪ್ರಶಸ್ತಿಗೆ ಶಿಫಾರಸು ಮಾಡಿ

Posted By: Gururaj
Subscribe to Oneindia Kannada

ಚೆನ್ನೈ, ಜನವರಿ 09 : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಹೆಸರನ್ನು ನೊಬೆಲ್ ಪ್ರಶಸ್ತಿಗೆ ಶಿಫಾರಸು ಮಾಡಬೇಕು ಎಂದು ಪಕ್ಷದ ನಾಯಕ ವಿ.ಜಯರಾಮನ್ ಹೇಳಿದ್ದಾರೆ.

ಎಐಎಡಿಎಂಕೆ ಪಕ್ಷದ ನಾಯಕ ಮತ್ತು ತಮಿಳುನಾಡು ವಿಧಾನಸಭೆ ಮಾಜಿ ಸ್ಪೀಕರ್ ವಿ.ಜಯರಾಮನ್ ವಿಧಾನಸಭೆಯಲ್ಲಿಯೇ ಈ ಕುರಿತು ಹೇಳಿಕೆ ನೀಡಿದ್ದಾರೆ. ಮಹಿಳೆಯರ ಅಭಿವೃದ್ಧಿಗೆ ಜಯಲಲಿತಾ ಅವರು ಜಾರಿಗೆ ತಂದ ಕಾರ್ಯಕ್ರಮಗಳನ್ನು ಪರಿಗಣಿಸಿ ನೊಬೆಲ್ ಪ್ರಶಸ್ತಿ ನೀಡಬೇಕು ಎಂದು ಹೇಳಿದ್ದಾರೆ.

ಸೋಮವಾರ ತಮಿಳುನಾಡು ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ನಡೆಯಿತು. ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿ.ಜಯರಾಮನ್, ಮದರ್ ಥೆರೆಸಾ ಅವರು ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗೆ ಜಯಲಲಿತಾ ಯೋಜನೆಗಳನ್ನು ಜಾರಿಗೆ ತಂದ ಯೋಜನೆಗಳನ್ನು ಶ್ಲಾಘಿಸಿದ್ದಾರೆ ಎಂದರು.

ಜಯಾ ವಿಡಿಯೋ : ವೆಟ್ರಿವೇಲನ್ ವಿರುದ್ಧ ಕ್ರಮವೇಕಿಲ್ಲ?

Jayalalithaa

ಸೇಲಂನಲ್ಲಿ ಮೊದಲು ಜಾರಿಗೆ ಬಂದ 'Cradle Baby Scheme' ಅನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲಾಯಿತು. ಈ ಯೋಜನೆಯಿಂದ ಲಿಂಗಾನುಪಾತದ ಪ್ರಮಾಣ ಕಡಿಮೆಯಾಗಿದೆ ಎಂದು ವಿಧಾನಸಭೆಯಲ್ಲಿ ಯೋಜನೆಯನ್ನು ಶ್ಲಾಘಿಸಿದರು.

ಅಣ್ವಸ್ತ್ರ ವಿರೋಧಿ ಆಂದೋಲನಕ್ಕೆ 2017 ನೊಬೆಲ್‌ ಶಾಂತಿ ಪ್ರಶಸ್ತಿ

ಜಯಲಲಿತಾ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ (1991-96) ನವಜಾತ ಹೆಣ್ಣು ಮಕ್ಕಳನ್ನು ಆರೈಕೆ ಮಾಡುವ ಯೋಜನೆಯನ್ನು ಜಾರಿಗೆ ತರಲಾಯಿತು. ಮಹಿಳೆಯರು ಮಕ್ಕಳನ್ನು ಹಸ್ತಾಂತರ ಮಾಡಿದರೆ ಸರ್ಕಾರದ ವತಿಯಿಂದ ಅವುಗಳನ್ನು ಆರೈಕೆ ಮಾಡಲಾಗುತ್ತಿತ್ತು.

'ಜಯಲಲಿತಾ (ಅಮ್ಮ) ಜಾರಿಗೆ ತಂದ ಈ ಯೋಜನೆಗಳನ್ನು ನಾವೆಲ್ಲರೂ ಮರೆಯುವಂತಿಲ್ಲ. ಸರ್ಕಾರ ಅವರ ಹೆಸರನ್ನು ನೊಬೆಲ್ ಪ್ರಶಸ್ತಿಗೆ ಶಿಫಾರಸು ಮಾಡಬೇಕು' ಎಂದು ಮನವಿ ಮಾಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Senior AIADMK leader and Deputy Speaker of the Tamil Nadu Assembly, V Jayaraman, suggested that late Chief Minister J Jayalalithaa's name be recommended for the Nobel Prize in the light of her scheme to prevent female infanticide in the state.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ