ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ದೇಗುಲಗಳಲ್ಲಿ ಅನ್ನದಾನ', ಜಯಲಲಿತಾ ಹೊಸ ಕೊಡುಗೆ

By Mahesh
|
Google Oneindia Kannada News

ಚೆನ್ನೈ, ಸೆ. 18: ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು 'ಅನ್ನದಾನ' ಯೋಜನೆಯನ್ನು 206ಕ್ಕೂ ಅಧಿಕ ದೇಗುಲಗಳಿಗೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ. ಇದರ ಜೊತೆಗೆ 10 ಸಾವಿರಕ್ಕೂ ಅಧಿಕ ಸಣ್ಣ ಪುಟ್ಟ ದೇಗುಲಗಳಿಗೆ ಒಟ್ಟಾರೆ 2.44 ಕೋಟಿ ರು ಮೌಲ್ಯದ ಪೂಜಾ ಸಾಮಾಗ್ರಿಗಳನ್ನು ತಮಿಳು ನಾಡು ಸರ್ಕಾರ ಘೋಷಿಸಿದೆ.

ತಮಿಳುನಾಡಿನಲ್ಲಿ ಈಗಾಗಲೇ ಇತಿಹಾಸ ಪ್ರಸಿದ್ಧ ದೇಗುಲಗಳ ರಕ್ಷಣೆಗೆ ಅನೇಕ ಯೋಜನೆಗಳನ್ನು ಕೈಗೊಂಡಿರುವ ಜಯಲಲಿತಾ ಅವರು ತಮ್ಮ ಜನಪ್ರಿಯ ಯೋಜನೆಗಳ ಪಟ್ಟಿಗೆ 'ಅನ್ನದಾನ ಯೋಜನೆ' ಯನ್ನು ಸೇರಿಸಿದ್ದಾರೆ. [ತಾಯಿ ಹಾಲಿನ ಬ್ಯಾಂಕುಗಳಿಗೆ ಚಾಲನೆ ನೀಡಿದ ಸಿಎಂ ಜಯಾ]

Jayalalithaa launches 'Annadhanam' in 206 more Tamil Nadu temples

ಇದರ ಜೊತೆಗೆ 820ಕ್ಕೂ ಅಧಿಕ ದಿನಗೂಲಿ ನೌಕರರಿಗೆ ಹೊಸ ಅನ್ನದಾನ ಯೋಜನೆ ಮೂಲಕ ಕಾಲ ಕಾಲಕ್ಕೆ ವೇತನ ಪರಿಷ್ಕರಣೆ ಘೋಷಿಸಿದ್ದಾರೆ. ಗಣೇಶ ಹಬ್ಬದ ಅಂಗವಾಗಿ ಪೂಜಾ ಸಾಮಾಗ್ರಿಗಳನ್ನು ಐದು ದೇವಸ್ಥಾನಗಳಿಗೆ ಹಾಗೂ ಇಬ್ಬರಿಗೆ ವೇತನ ಪರಿಷ್ಕರಣೆ ರಸೀತಿಯನ್ನು ಸಾಂಕೇತವಾಗಿ ನೀಡುವ ಮೂಲಕ ಜಯಲಲಿತಾ ಅವರು ಯೋಜನೆಗೆ ಚಾಲನೆ ನೀಡಿದರು.

2002ರಲ್ಲಿ ಮೊದಲ ಬಾರಿಗೆ ಶ್ರೀಕಬಾಲೇಶ್ವರ ದೇಗುಲದಲ್ಲಿ ಅನ್ನದಾನ ಯೋಜನೆಗೆ ಚಾಲನೆ ದೊರೆಕಿತ್ತು. ಈಗ ಸುಮಾರು 500ಕ್ಕೂ ಅಧಿಕ ದೇಗುಲಗಳಲ್ಲಿ ಸಾವಿರಾರು ಭಕ್ತರಿಗೆ ಈ ಯೋಜನೆಯ ಲಾಭ ಸಿಗಲಿದೆ. (ಪಿಟಿಐ)

English summary
Tamil Nadu Chief Minister Jayalalithaa launched the Annadhanam scheme in 206 more temples in the State and distribution of pooja articles worth Rs.2.44 Crore to 10,000 tiny shrines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X