ಜಯಲಲಿತಾಗೆ ಮುಕ್ತಿ, 'ಅಮ್ಮ ದಿನಾಚರಣೆ' ಆರಂಭ
ಚೆನ್ನೈ, ಮೇ.11: ಅಕ್ರಮ ಆಸ್ತಿ ಪ್ರಕರಣದಲ್ಲಿ ನಿರ್ದೋಷಿಯಾಗಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಗೆ ಮುಕ್ತಿ ಸಿಕ್ಕಿದೆ. ಕರ್ನಾಟಕ ಹೈಕೋರ್ಟಿನಿಂದ ಈ ಶುಭ ಸುದ್ದಿ ಸಿಗುತ್ತಿದ್ದಂತೆ ತಮಿಳುನಾಡಿನಲ್ಲಿ ಹಬ್ಬದ ವಾತಾವರಣ ಆರಂಭವಾಗಿದೆ. ಜಯಲಲಿತಾ ಅಭಿಮಾನಿಗಳು ಎಲ್ಲೆಡೆ ಸಿಹಿ, ಮಜ್ಜಿಗೆ ಹಂಚಿ ಕುಣಿದಾಡಿದ್ದಾರೆ.
ಚೆನ್ನೈನ ಪೋಯಿಸ್ ಗಾರ್ಡನ್ ನಲ್ಲಿರುವ ಜಯಲಲಿತಾ ನಿವಾಸದ ಎದುರು ಸಾವಿರಾರು ಸಂಖ್ಯೆಯಲ್ಲಿ ನೆರೆದಿರುವ ಅಭಿಮಾನಿಗಳು 'ಅಮ್ಮ' ಹಬ್ಬ ಆಚರಿಸಿದ್ದಾರೆ. ಚೆನ್ನೈನಲ್ಲಿ ಮದರ್ಸ್ ಡೇ ಆಚರಣೆ ಸೋಮವಾರ ಶುರುವಾಗಿದೆ.[ಅಕ್ರಮ ಆಸ್ತಿ ಪ್ರಕರಣ: ಜಯಲಲಿತಾ ನಿರ್ದೋಷಿ]
Mother's Day celebrations continue. Amma acquitted.
#JayaVerdict
— Ramesh Srivats (@rameshsrivats) May 11, 2015 ಕರ್ನಾಟಕ ಹೈಕೋರ್ಟ್ ಜಡ್ಜ್ ಸಿ.ಆರ್ ಕುಮಾರಸ್ವಾಮಿ ಅವರು ಎರಡು ಸಾಲಿನ ಆದೇಶ ನೀಡುತ್ತಿದ್ದಂತೆ ತಮಿಳುನಾಡಿನಲ್ಲಿ ಸಂಭ್ರಮ ಮನೆ ಮಾಡಿತು. ವಿಶೇಷ ನ್ಯಾಯಾಲಯ ನೀಡಿದ ನಾಲ್ಕು ವರ್ಷಗಳ ಶಿಕ್ಷೆ, 100 ಕೋಟಿ ರು ದಂಡ ಆದೇಶ ರದ್ದಾಗಿದೆ. ಜಯಾ ಇನ್ನು 10 ನಿಮಿಷದಲ್ಲೇ ಸಿಎಂ ಆಗುತ್ತಾರೆ ಎಂದು ಜಯಾ ವಕೀಲರು ಸಂಭ್ರಮದಿಂದ ಹೇಳಿದರು. [ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್]
'ಪುರಚ್ಚಿ ತಲೈವಿಗೆ ಅಂಟಿದ ಕಳಂಕ ಇನ್ನಿಲ್ಲ, ನಮ್ಮೆಲ್ಲರ ಬದುಕು ಬಂಗಾರವಾಗುತ್ತದೆ' ಎಂಬ ಡೈಲಾಗ್ ಗಳು ಕೇಳಿ ಬಂದಿದೆ. ಎಂದಿನಂತೆ ಅನೇಕ ಕಡೆ ಜಯಲಲಿತಾ ಭಾವಚಿತ್ರಕ್ಕೆ ಹಾಲಿನ ಅಭಿಷೇಕ, ಹಣ್ಣು ಕಾಯಿ, ನೈವೇದ್ಯ ಪ್ರಸಾದ ವಿನಿಯೋಗ ನಡೆದಿದೆ. ಅಭಿಮಾನಿಗಳ ಸಂಭ್ರಮಾಚರಣೆಯ ಚಿತ್ರಗಳು ಇಲ್ಲಿವೆ..[ಮತ್ತೆ ತಮಿಳುನಾಡು ಮುಖ್ಯಮಂತ್ರಿಯಾಗಿ ಜಯಮ್ಮ?]

ವಿಶೇಷ ಪೂಜೆ ಪುನಸ್ಕಾರ
ಕಲ್ಯಾಣ ಪಶುಪತಿ ದೇಗುಲದಲ್ಲಿ ಮಹಾಯಜ್ಞ ನಡೆಸಿ 1,00,008 ದೀಪಗಳಲ್ಲಿ ಜಯಾ ಅಮ್ಮ ಹೆಸರು ಪ್ರಜ್ವಲಿಸುವಂತೆ ಮಾಡಲಾಗಿದೆ.

ಎಐಎಡಿಎಂಕೆ ಶಾಸಕರು ಜಯಾ ಮನೆಯತ್ತ
ಬೆಳಗ್ಗಿನಿಂದಲೇ ಜಯಲಲಿತಾ ಮನೆಯತ್ತ ಎಐಎಡಿಎಂಕೆ ಶಾಸಕರು ಜಯಲಲಿತಾ ಮನೆಯತ್ತ ಧಾವಿಸುತ್ತಿದ್ದರು. ತೀರ್ಪು ಹೊರ ಬಂದ ಮೇಲೆ ಜಯಲಲಿತಾ ಅವರ ದರ್ಶನಕ್ಕಾಗಿ ಆಗಮಿಸಿದ್ದು, ಜಯಾ ಅವರನ್ನು ನೋಡಿ ಆನಂದಿಂದ ಕುಣಿದಾಡಿದ್ದಾರೆ.

ತಿರುನಲ್ವೇಲಿ ಹಲ್ವಾ, ಮಜ್ಜಿಗೆ ಸ್ಪೆಷಲ್
ತಿರುವರೂರ್ ನಿಂದ ಬಂದಿದ್ದ 6000ಕ್ಕೂ ಅಧಿಕ ಎಐಎಡಿಎಂಕೆ ಮಹಿಳಾ ಕಾರ್ಯಕರ್ತರು ಮಜ್ಜಿಗೆ ಇದ್ದ ಕುಡಿಕೆಗಳನ್ನು ತಂದಿದ್ದರು. ಇದಕ್ಕೂ ಮುನ್ನ ತ್ಯಾಗರಾಜ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದರು. ತೀರ್ಪು ಬಂದ ಮೇಲೆ ತಿರುನಲ್ವೇಲಿ ಹಲ್ವಾ ಹಾಗೂ ಮಜ್ಜಿಗೆ ಹಂಚಲಾಯಿತು.

ನಮ್ಮ ನಾಡು ಎಂಜಿ ಆರ್ ನಾಡು
ಇದು ಜನತೆ ಕೊಟ್ಟ ತೀರ್ಪು, ವಿಪಕ್ಷಗಳ ಕುತಂತ್ರಕ್ಕೆ ಬಲಿಯಾಗಿದ್ದೆ.ಈಗ ಮುಕ್ತಳಾಗಿದ್ದೇನೆ ಎಂದು ಜಯಲಲಿತಾ ಹೇಳಿದ್ದಾರೆ.

ಬೆಂಗಳೂರಿನಲ್ಲೂ ಜಯಾ ಅಭಿಮಾನಿಗಳ ಸಂಭ್ರಮ
ಬೆಂಗಳೂರಿನಲ್ಲೂ ಜಯಾ ಅಭಿಮಾನಿಗಳ ಸಂಭ್ರಮ ಮೇರೆ ಮೀರಿತ್ತು. ಹೈಕೋರ್ಟ್ ಸುತ್ತಾ ಮುತ್ತಾ ಜಯಾ ಅಭಿಮಾನಿಗಳು ಗದ್ದಲ, ಗಲಾಟೆ ಆರಂಭಿಸಿದ್ದರು. ವಕೀಲರಂತೆ ಕೋರ್ಟ್ ಒಳಗೆ ನುಗ್ಗಲು ಯತ್ನಿಸಿ ವಿಫಲರಾದರು,
|
ಚೆನ್ನೈನಲ್ಲಿ ನಿವಾಸದ ಮುಂದೆ ಸಂಭ್ರಮಾಚರಣೆ
ಚೆನ್ನೈನಲ್ಲಿ ಜಯಲಲಿತಾ ನಿವಾಸದ ಮುಂದೆ ಸಂಭ್ರಮಾಚರಣೆ
|
ಶ್ರೀರಂಗಂನಲ್ಲಿ ಅಭಿಮಾನಿಗಳ ಸಂಭ್ರಮ
ತಮಿಳುನಾಡಿನ ಕೊಯಮತ್ತೂರು, ಶ್ರೀರಂಗಂ ಸೇರಿದಂತೆ ವಿವಿಧೆಡೆ ಜಯಾ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಪುದುಚೇರಿಯಲ್ಲೂ ಅನೇಕ ಕಡೆ ಜಯಾ ಭಾವಚಿತ್ರ ಮೆರವಣಿಗೆ ಸಿಹಿ ಹಂಚಿಕೆ ಮುಂದುವರೆದಿದೆ.












Click it and Unblock the Notifications