ಮತ್ತೆ ತಮಿಳುನಾಡು ಮುಖ್ಯಮಂತ್ರಿಯಾಗಿ ಜಯಮ್ಮ?
ಬೆಂಗಳೂರು, ಮೇ 11 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ವಿಶೇಷ ಕೋರ್ಟ್ ನೀಡಿರುವ 4 ವರ್ಷದ ಜೈಲು ಶಿಕ್ಷೆ ತೀರ್ಪು ಪ್ರಶ್ನಿಸಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಇಂದು ಪ್ರಕಟಿಸಿದೆ. ಜಯಲಲಿತಾ ಅವರನ್ನು ಆರೋಪ ಮುಕ್ತವಾಗಿಸಿದ್ದು, ವಿಶೇಷ ಕೋರ್ಟ್ ನೀಡಿದ್ದ ಶಿಕ್ಷೆಯನ್ನು ರದ್ದುಗೊಳಿಸಿದೆ. ['ಅಕ್ರಮ ಆಸ್ತಿ ಪ್ರಕರಣ: ಜಯಲಲಿತಾ ನಿರ್ದೋಷಿ']
ಕರ್ನಾಟಕ ಹೈಕೋರ್ಟ್‌ನ ವಿಶೇಷ ನ್ಯಾಯಪೀಠದಲ್ಲಿ ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ಅವರು ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣದ ತೀರ್ಪಿನ ಮೇಲ್ಮನವಿಯ ವಿಚಾರಣೆಯನ್ನು ಮಾ.11ರಂದು ಮುಕ್ತಾಯಗೊಳಿಸಿದ್ದು, ಸೋಮವಾರ ಬೆಳಗ್ಗೆ 11 ಗಂಟೆಗೆ ತೀರ್ಪು ನೀಡಿದರು. [ಅಕ್ರಮ ಆಸ್ತಿಗಳಿಕೆ ಪ್ರಕರಣ Time line]

2014ರ ಸೆ. 27ರಂದು ಅಕ್ರಮ ಆಸ್ತಿಗಳಿಕೆ ಪ್ರಕರಣದ ತೀರ್ಪು ನೀಡಿದ್ದ ಬೆಂಗಳೂರಿನ ವಿಶೇಷ ನ್ಯಾಯಾಲಯ ಜಯಲಲಿತಾ, ವಿ.ಕೆ.ಶಶಿಕಲಾ, ಜೆ.ಇಳವರಸಿ ಮತ್ತು ವಿ.ಎನ್.ಸುಧಾಕರನ್ ತಪ್ಪಿತಸ್ಥರು ಎಂದು ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಜಯಲಲಿತಾ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ತೀರ್ಪಿನ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ [ಜಯ ಪ್ರಕರಣದ ಎಸ್ ಪಿಸಿ ಬಿವಿ ಆಚಾರ್ಯ ಸಂದರ್ಶನ]
ಸಮಯ 2.40 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಜಯಲಲಿತಾ ಅವರು ಪುನಃ ಸಿಎಂ ಆಗಿ ಅಧಿಕಾರವಹಿಸಿಕೊಳ್ಳುವ ಸಾಧ್ಯತೆ ಇದೆ. ಎರಡು ದಿನಗಳ ಕಾಲ ರಾಜೀನಾಮೆ ನೀಡಬಾರದು ಎಂದು ಅವರು ತಮಿಳುನಾಡು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರಿಗೆ ಸೂಚನೆ ನೀಡಿದ್ದಾರೆ.
ಸಮಯ 2 ಗಂಟೆ : ಕೆಲವು ಕಾರ್ಯಕರ್ತರನ್ನು ಮಾತ್ರ ಮನೆಯಲ್ಲಿ ಭೇಟಿ ಮಾಡಿದ ಜಯಲಲಿತಾ, ಹೂವಿನ ಹಾರ ಹಾಕಿ ಕಾರ್ಯಕರ್ತರಿಂದ ಅಭಿನಂದನೆ ಸಲ್ಲಿಕೆ. 'ಕಾರ್ಯಕರ್ತರು ಮನೆಯ ಬಳಿ ಬರಬೇಡಿ, ದೇವರಿಗೆ ಪ್ರಾರ್ಥನೆ ಸಲ್ಲಿಸಿ' ಎಂದು ಜಯಲಲಿತಾ ಕರೆ ನೀಡಿದ್ದಾರೆ
ಸಮಯ 1.30 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ದೋಷಮುಕ್ತರಾದ ಜಯಲಲಿತಾ ಶೀಘ್ರದಲ್ಲೇ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ
ಸಮಯ 1 ಗಂಟೆ : ಜಯಲಲಿತಾ ನೋಡಲು ನಿವಾಸದ ಮುಂದೆ ಕಾದು ಕುಳಿತಿರುವ ನೂರಾರು ಅಭಿಮಾನಿಗಳು, ಇನ್ನೂ ಮನೆಯಿಂದ ಹೊರಬಾರದ ಜಯಲಲಿತಾ
ಸಮಯ 12.15 : 10 ಸಂಪುಟದಲ್ಲಿ 918 ಪುಟಗಳ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ಅವರು ಜಯಲಲಿತಾ, ವಿ.ಕೆ.ಶಶಿಕಲಾ, ಜೆ.ಇಳವರಸಿ ಮತ್ತು ವಿ.ಎನ್.ಸುಧಾಕರನ್ ಅವರನ್ನು ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸಮಯ 12.07 : ಜಯಲಲಿತಾ ಅವರನ್ನು ದೋಷಮುಕ್ತಗೊಳಿಸಿರುವ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಡಿಎಂಕೆ ಸುಪ್ರೀಂಕೋರ್ಟ್ ಮೆಟ್ಟಿಲೇರಲಿದೆ. ಕರುಣಾನಿಧಿ ಅವರ ನಿವಾಸದಲ್ಲಿ ನಡೆದ ಡಿಎಂಕೆ ನಾಯಕರ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ
ಸಮಯ 12 ಗಂಟೆ : 'ತೀರ್ಪಿನ ಪ್ರತಿ ಇನ್ನೂ ಸಿಕ್ಕಿಲ್ಲ, ಪ್ರತಿ ಸಿಗುವ ತನಕ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ವಿಶೇಷ ಸರ್ಕಾರಿ ಅಭಿಯೋಜಕ ಬಿ.ವಿ.ಆಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಸಮುಯ 11.45 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಆರೋಪ ಮುಕ್ತಗೊಂಡಿರುವ ಜಯಲಲಿತಾ ಅವರು ಪುನಃ ತಮಿಳುನಾಡು ಸಿಎಂ ಆಗುವ ಸಾಧ್ಯತೆ ಇದೆ. ಮೇ 17ರಂದು ಪ್ರಮಾಣ ವಚನ ಸಮಾರಂಭ ನಡೆಯಲಿದೆ ಎಂದು ತಿಳಿದುಬಂದಿದೆ [ಅಭಿಮಾನಿಗಳ ಸಂಭ್ರಮಾಚರಣೆ ವಿಡಿಯೋ ನೋಡಿ]
ಸಮಯ 11.30 : ಜಯಲಲಿತಾ ಪರವಾಗಿ ತೀರ್ಪು ಬಂದಿರುವುದರಿಂದ ಜಯಾ ಅವರ ಚೆನ್ನೈ ನಿವಾಸದ ಮುಂದೆ ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಎಐಎಡಿಎಂಕೆ ಸಂಸದರು ಸಂತಸದಿಂದ ಕಣ್ಣೀರು ಹಾಕಿದ್ದಾರೆ.
#jayaverdict and celebration starts at poes garden, chennai. New lease of live to #Jayalalitha pic.twitter.com/l6OKUg2dvl
— Mayur Parikh (@mayurji_parikh) May 11, 2015 ಸಮಯ 11.25 : 'ಜಯಲಲಿತಾ ಅವರಿಗೆ ನ್ಯಾಯ ಸಿಕ್ಕಿದೆ. ಅವರು ತಮಿಳುನಾಡು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಬಹುದು' ಎಂದು ಜಯಾ ಪರ ವಕೀಲ ಬಿ.ಕುಮಾರ್ ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.
ಸಮಯ 11.19 : 'ಹೈಕೋರ್ಟ್ ಆದೇಶ ಆಶ್ಚರ್ಯ ಮತ್ತು ಅಘಾತತಂದಿದೆ. ಈ ತೀರ್ಪಿನ ಬಗ್ಗೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇನೆ' ಎಂದು ದೂರುದಾರ ಸುಬ್ರಮಣ್ಯ ಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ
ಸಮಯ 11.17 : ಜಯಲಲಿತಾ ನಿವಾಸಕ್ಕೆ ತಮಿಳುನಾಡು ಸಿಎಂ ಪನ್ನೀರ್ ಸೆಲ್ವಂ ಭೇಟಿ, ಜಯ ನಿವಾಸದ ಮುಂದೆ ಕಾರ್ಯಕರ್ತರ ಸಂಭ್ರಮಾಚರಣೆ

ಸಮಯ 11.12 : ಕೋರ್ಟ್ ತೀರ್ಪಿನಿಂದಾಗಿ ಜಯಲಲಿತಾ ಅವರು ಪುನಃ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಬಹುದು
ಸಮುಯ 11.11 : ಎರಡು ಸಾಲು ತೀರ್ಪು ಓದಿದಿ ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ

ಸಮಯ 11.06 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಯಲಲಿತಾ, ವಿ.ಕೆ.ಶಶಿಕಲಾ, ಜೆ.ಇಳವರಸಿ ಮತ್ತು ವಿ.ಎನ್.ಸುಧಾಕರನ್ ಆರೋಪ ಮುಕ್ತ
ಸಮಯ 11.02 : ಜಯಲಲಿತಾ ದೋಷ ಮುಕ್ತ, ಕೆಳಹಂತದ ನ್ಯಾಯಾಲಯದ ತೀರ್ಪು ರದ್ದುಗೊಳಿಸಿದ ಹೈಕೋರ್ಟ್
ಸಮಯ 11 ಗಂಟೆ : ಕೋರ್ಟ್ ಹಾಲ್ 14ರಲ್ಲಿ ಕಲಾಪ ಆರಂಭ
ಸಮಯ 10.45 : ಕೋರ್ಟ್ ಹಾಲ್ 14 ವಕೀಲರಿಂದ, ಪತ್ರಕರ್ತರಿಂದ ತುಂಬಿ ಹೋಗಿದೆ. ಕೆಲವೇ ಕ್ಷಣಗಳಲ್ಲಿ ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ಅವರು ಕೋರ್ಟ್‌ಗೆ ಆಗಮಿಸಲಿದ್ದಾರೆ
AIADMKના એક સમર્થકે કહ્યું, જયલલિતા અમારા માટે ઈશ્વર છે. #JayaVerdict pic.twitter.com/tXMx1tgfJj
— chitralekha (@chitralekhamag) May 11, 2015 ಸಮಯ 10.37 : 'ವಿಶೇಷ ಕೋರ್ಟ್ ನೀಡಿರುವ ತೀರ್ಪನ್ನು ಹೈಕೋರ್ಟ್ ಎತ್ತಿಹಿಡಿಯಲಿ ಎಂದು ನಾನು ನಿರೀಕ್ಷಿಸುತ್ತಿದ್ದೇನೆ' ಎಂದು ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
I expect that conviction will be upheld: Subramanian Swamy, BJP #JayaVerdict pic.twitter.com/oc56tmCnKC
— ANI (@ANI_news) May 11, 2015 ಸಮಯ 10.30 : ಹೈಕೋರ್ಟ್‌ಗೆ ಆಗಮಿಸಿದ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಸಿ) ಬಿ.ವಿ.ಆಚಾರ್ಯ
Heavy security outside the #KarnatakaHC with #JayaVerdict to be announced soon pic.twitter.com/NKko8hZ6H5
— Bar & Bench (@barandbench) May 11, 2015 ಸಮಯ 10.23 : 15 ವಕೀಲರನ್ನು ಕೋರ್ಟ್‌ವೊಳಗೆ ಬಿಡುವಂತೆ ಜಯಲಲಿತಾ ಪರ ವಕೀಲರು ಮಾಡಿದ ಮನವಿಯನ್ನು ಪೊಲೀಸರು ತಿರಸ್ಕರಿಸಿದರು

ಸಮಯ 10.08 : ಹೈಕೋರ್ಟ್‌ಗೆ ಪ್ರವೇಶ ನೀಡುವ ಸಂಬಂಧ ತಮಿಳುನಾಡು ವಕೀಲರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸುತ್ತಿದ್ದಾರೆ. ಬಾರ್ ಕೌನ್ಸಿಲ್ ಗುರತಿನ ಪತ್ರ ಹೊಂದಿರುವ ವಕೀಲರಿಗೆ ಮಾತ್ರ ಕೋರ್ಟ್ ಪ್ರವೇಶಿಸಲು ಅವಕಾಶ ಕಲ್ಪಿಸಲಾಗುತ್ತಿದೆ [ಜಯಲಲಿತಾಗೆ ಜಾಮೀನು ಸಿಕ್ಕಿದ್ದೇಕೆ? ಆದೇಶ ಪ್ರತಿ ಓದಿ]
ಸಮಯ 10.05 : ಜಯಲಲಿತಾ ಅವರ ಶಿಕ್ಷೆ ರದ್ದಾಗಲಿ ಎಂದು ಅಭಿಮಾನಿಗಳು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ
Meanwhile, Jaya News doing a roundup of a diff kind. What puja, abhishekam is going on in which temple #JayaVerdict pic.twitter.com/gMMEJvnSRd
— Ram (@ram_k27) May 11, 2015 ಸಮಯ 10.02 : ಹೈಕೋರ್ಟ್‌ಗೆ ಆಗಮಿಸಿದ ನ್ಯಾಯಮೂರ್ತಿ ಸಿ.ಆರ್. ಕುಮಾರಸ್ವಾಮಿ. ಕೋರ್ಟ್‌ಹಾಲ್ 14ರಲ್ಲಿ 11 ಗಂಟೆಗೆ ಕಲಾಪ ಆರಂಭವಾಗಲಿದೆ
ಸಮಯ 10 ಗಂಟೆ : ತಮಿಳುನಾಡು-ಕರ್ನಾಟಕ ಗಡಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಉಭಯ ರಾಜ್ಯಗಳ ಪೊಲೀಸರು ಗಸ್ತು ತಿರುಗುತ್ತಿದ್ದಾರೆ
ಸಮಯ 9.45 : ಜಯಲಲಿತಾ ಶಿಕ್ಷೆ ರದ್ದಾಗುತ್ತದೆ ಎಂದು ಅಭಿಮಾನಿಗಳು ಅವರ ನಿವಾಸದ ಮುಂದೆ ಸಂಭ್ರಮಾಚರಣೆ ಆರಂಭಿಸಿದ್ದಾರೆ
happy RT @anna_isaac: Some colour outside Jaya's residence. Loyal supporters. #JayaVerdict… https://t.co/xN0fY1e7JA pic.twitter.com/qbi2MBeFkB
— Chikori c c (@chikori_c) May 11, 2015 ಸಮಯ 9.27 : ಜಯಲಲಿತಾ ತೀರ್ಪಿನ ಹಿನ್ನಲೆಯಲ್ಲಿ ತಮಿಳುನಾಡಿನಿಂದ ಹಲವು ವಕೀಲರು ಕರ್ನಾಟಕಕ್ಕೆ ಆಗಮಿಸಿದ್ದಾರೆ
ಸಮಯ 9.20 : ಬೆಂಗಳೂರು ಕೇಂದ್ರ ವಿಭಾಗ ಡಿಸಿಪಿ ಸಂದೀಪ್ ಪಾಟೀಲ್ ನೇತೃತ್ವದಲ್ಲಿ 5 ಸಹಾಯಕ ಪೊಲೀಸ್ ಆಯುಕ್ತರು, 20 ಪೊಲೀಸ್ ಇನ್ಸ್ಪೆಕ್ಟರ್ ಮತ್ತು 200 ಕಾನ್ಸ್ಟೇಬಲ್ಗಳು, ಕೆಎಸ್ಆರ್ಪಿ ಮತ್ತು ಸಿಎಆರ್ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಸಮಯ 9.10 : ಕರ್ನಾಟಕ ಹೈಕೋರ್ಟ್ ಸುತ್ತ-ಮತ್ತು 1000 ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.
ಸಮಯ 8.45 : ಜಯಲಲಿತಾ ತೀರ್ಪು ಪ್ರಕಟಗೊಳ್ಳುವ ಹಿನ್ನಲೆಯಲ್ಲಿ ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿರುವ ಜಯಾ ನಿವಾಸಕ್ಕೆ ನೂರಾರು ಅಭಿಮಾನಿಗಳು ಆಗಮಿಸುತ್ತಿದ್ದಾರೆ
Security tightened at Poes Garden residence of Jayalalithaa ahead of verdict. #JayaVerdict pic.twitter.com/N44XqTFeoY
— TheNewsMinute (@thenewsminute) May 11, 2015 ಸಮಯ 8.25 : ತೀರ್ಪು ಪ್ರಕಟಗೊಳ್ಳುವ ತನಕ ಕೆಎಸ್ಆರ್‌ಟಿಸಿ ಬಸ್ ಎಂದಿನಂತೆ ತಮಿಳುನಾಡಿಗೆ ಸಂಚರಿಸಲಿದೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ
ಸಮಯ 8 ಗಂಟೆ : ಜಯಲಲಿತಾ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಹೈಕೋರ್ಟ್ ಸುತ್ತ-ಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ

ಸಮಯ 7.30 : ಜಯಲಲಿತಾ ಖುದ್ದಾಗಿ ಇಂದು ನ್ಯಾಯಾಲಕ್ಕೆ ಹಾಜರಾಗುವುದಿಲ್ಲ
-
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ












Click it and Unblock the Notifications