ರಾಜಕೀಯಕ್ಕೆ ದುರ್ಬಳಕೆಯಾಯ್ತೆ ಜಯಲಲಿತಾ ವೈರಲ್ ವಿಡಿಯೋ?
ಚೆನೈ, ಡಿಸೆಂಬರ್ 20: ಸದಾ ಒಂದಿಲ್ಲೊಂದು ಅಚ್ಚರಿಯನ್ನು ಸೃಷ್ಟಿಸುತ್ತಲೇ ಇಡೀ ದೇಶದ ಗಮನವನ್ನು ತನ್ನತ್ತ ಸೆಳೆವ ತಮಿಳುನಾಡು ರಾಜಕೀಯ ಇದೀಗ ಜಯಲಲಿತಾ ಅವರ ಚಿಕಿತ್ಸೆಯ ವಿಡಿಯೋದಿಂದಾಗಿ ಮತ್ತೊಮ್ಮೆ ರಾಷ್ಟ್ರೀಯ ಮಾಧ್ಯಮಗಳನ್ನೂ ತನ್ನತ್ತ ಸೆಳೆದಿದೆ.
ಮಾಜಿ ಮುಖ್ಯಮಂತ್ರಿ, ಎಐಎಡಿಎಂಕೆ ಜಯಲಲಿತಾ ಅವರ ಮರಣದ ನಂತರ ತೆರವಾಗಿರುವ ಆರ್ ಕೆ ನಗರ ವಿಧಾನಸಭಾ ಕ್ಷೇತ್ರಕ್ಕೆ ನಾಳೆ(ಡಿ.21) ಉಪಚುನಾವಣೆ ನಡೆಯಲಿದೆ. ಚುನಾವಣೆಗೂ ಮುನ್ನ ಎಂತೆಂಥದೋ ನಾಟಕಗಳೆಲ್ಲ ಇಲ್ಲಿ ಮಾಮೂಲೇ ಆಗಿದ್ದರೂ, ಶಶಿಕಲಾ ಬಣ ತಾನು ಸಂಭಾವಿತ ಎಂಬುದನ್ನು ಸಾಬೀತುಪಡಿಸಲು ಜಯಲಲಿತಾ ಅವರ ವಿಡಿಯೋವನ್ನು ದುರ್ಬಳಕೆ ಮಾಡಿಕೊಳ್ಳುತ್ತದೆ ಎಂಬುದನ್ನು ಮಾತ್ರ ಯಾರೂ ಊಹಿಸಿರಲಿಲ್ಲ!
ಊಹಿಸದ ಘಟನೆ ಈಗ ನಡೆದುಹೋಗಿದೆ. ಜಯಾಲಲಿತಾ ಆಸ್ಪತ್ರೆಗೆ ಸೇರುವ ಮುನ್ನವೇ ಅಸುನೀಗಿದ್ದರು ಎಂಬ ಊಹಾಪೋಹಗಳಿಗೆ ತೆರೆ ಎಳೆಯುವ, ತನ್ನ ವಿರುದ್ಧ ಎದ್ದ ಆರೋಪಗಳಿಗೆಲ್ಲ ತೇಪೆ ಹಚ್ಚುವ ಕೆಲಸಕ್ಕಾಗಿಯೂ ಶಶಿಕಲಾ ಬಣ ಮತ್ತೆ ಜಯಲಲಿತಾರನ್ನೇ ಆಯುಧವನ್ನಾಗಿ ಬಳಸಿಕೊಳ್ಳುತ್ತಿರುವುದು ವಿಚಿತ್ರವಾದರೂ ಸತ್ಯ!
ಈಗ ಎದ್ದಿರುವ ಪ್ರಶ್ನೆ ಎಂದರೆ, ಶಶಿಕಲಾ ಮತ್ತು ಟಿಟಿವಿ ದಿನಕರನ್ ಬಣ ತಮ್ಮ ಸ್ವಾರ್ಥಕ್ಕಾಗಿ, ರಾಜಕೀಯಕ್ಕಾಗಿ ಮರಣಿಸಿದ ಜಯಲಲಿತಾ ಅವರ ವಿಡಿಯೋವನ್ನು ದುರ್ಬಳಕೆ ಮಾಡಿಕೊಳಲ್ಳುತ್ತಿರುವುದು ಸರಿಯೇ ಎಂಬುದು! ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ಎದ್ದಿದೆ.
| Array |
ಛೆ, ಛೆ ನಾಚಿಕೆಗೇಡು!
ಛೆ, ಜನ ಅಧಿಕಾರದ ಆಸೆಗೆ ಏನೆಲ್ಲಾ ಮಾಡುತ್ತಾರಲ್ಲ! ಎಐಎಡಿಎಂ ಕೆ ಪಕ್ಷದ ಜನರು ಅಧಿಕಾರಕ್ಕಾಗಿ ಜಯಲಲಿತಾ ಅವರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರು ತಮ್ಮ ಇಂಥ ಚಿತ್ರಗಳನ್ನು ಬಿಡುಗಡೆ ಮಾಡಲು ಎಂದಿಗೂ ಒಪ್ಪುತ್ತಿರಲಿಲ್ಲ. ದಯವಿಟ್ಟು ಜಯಲಲಿತಾ ಅವರು ಈಗಲಾದರೂ ಶಾಂತಿಯಿಂದಿರಲು ಬಿಡಿ ಎಂದು ವಾರಿಯರ್ ಪ್ರಿನ್ಸೆಸ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
|
ನೈತಿಕವಾಗಿ ಸರಿಯಲ್ಲ!
ತಮಿಳರು ಯಾವತ್ತಿಗೂ ಸಂಸ್ಕೃತಿಗೆ ಹೆಸರಾದವರು. ನಾವು ಸರಿಯಿದ್ದೇವೆ ಎಂಬುದನ್ನು ಸಾಬೀತುಪಡಿಸಲು ಇದು ನೈತಿಕವಾದ ದಾರಿಯಲ್ಲ. ಮತ್ತೊಬ್ಬರನ್ನು ಮುಜುಗರಕ್ಕೀಡು ಮಾಡುವಂಥ ಇಂಥ ಕೆಲಸ ಮಾಡುವ ಅಗತ್ಯವಿಲ್ಲ ಎಂದು ದೇವಿ ದರ್ಶಿನಿ ಎಂಬುವವರು ಟ್ವೀಟ್ ಮಾಡಿದ್ದಾರೆ.
| Array |
ನಿಮ್ಮ ನೋವು ಇನ್ನೂ ನಿಂತಿಲ್ಲ ಜಯಲಲಿತಾ..!
ಜಯಲಲಿತಾ ಅವರೇ, ನಿಮ್ಮ ನೋವು, ದುಃಖ ಎಂದಿಗೂ ಕೊನೆಯಾಗುವುದಿಲ್ಲ ಅನ್ನಿಸುತ್ತೆ. ನೀವು ಅಸುನೀಗಿದ ಮೇಲೂ ಕೆಲವು ಹದ್ದುಗಳು ಹಣ, ಅಧಿಕಾರಕ್ಕಾಗಿ ನಿಮ್ಮನ್ನು ಬೇಟೆಯಾಡುತ್ತಿವೆ. ಈ ವಿಡಿಯೋ ಬಿಡುಗಡೆ ಮಾಡಿದವರ ಬಗ್ಗೆ ಅಸಹ್ಯವಾಗುತ್ತಿದೆ ಎಂದು ವಂದನಾ ಎಂಬುವವರು ಟ್ವೀಟ್ ಮಾಡಿದ್ದಾರೆ.
| Array |
ಎಂಥ ಕೀಳು ಪ್ರವೃತ್ತಿ!
ಚುನಾವಣೆಯ ಸಮಯದಲ್ಲಿ ಇಂಥ ವಿಡಿಯೋವನ್ನು ಬಿಡುಗಡೆ ಮಾಡುವುದು ಎಂಥ ಕೀಳು ಪ್ರವೃತ್ತಿ? ಎಂದು ಶ್ರೀನಿವಾಸನ್ ಎಂಬುವವರು ಪ್ರಶ್ನಿಸಿದ್ದಾರೆ.
| Array |
ಅಸಹ್ಯಕರ ನಡೆ
ನಿಜಕ್ಕೂ ಅಸಹ್ಯಕರ ನಡೆ ಇದು. ಅವರಿಗೆ ಈ ವಿಡಿಯೋ ಮಾಡುವುದಕ್ಕೆ ಮತ್ತು ಅದನ್ನು ಬಿಡುಗಡೆ ಮಾಡುವುದಕ್ಕೆ ಅಧಿಕಾರ ಕೊಟ್ಟವರ್ಯಾರು? ತಮ್ಮದೇ ನಾಯಕಿಯ ವ್ಯಕ್ತಿತ್ವಕ್ಕೆ ಮಸಿಬಳಿದು, ಅಗೌರವ ನೀಡಿ ತಾವು ಚುನಾವಣೆಯಲ್ಲಿ ಗೆಲ್ಲಬಹುದು ಅಂತ ಅವರೇನಾದರೂ ಅಂದುಕೊಂದಿದ್ದರೆ ಅದು ಮೂರ್ಖತನವಷ್ಟೆ ಎಂದು ಅಪರ್ಣಾ ಎಂಬುವವರು ಟ್ವೀಟ್ ಮಾಡಿದ್ದಾರೆ.
| Array |
ಜನರನ್ನು ಎದುರಿಸಲು ಸಿದ್ಧವಾಗಿ!
ಆಕೆಯನ್ನು ಸಾಯಿಸಿದ್ದಲ್ಲದೆ, ಈಗ ವಿಡಿಯೋ ಸಹ ಬಿಡುಗಡೆ ಮಾಡಿ ಜನರ ಅನುಕಂಪ ಪಡೆಯಲು ಪ್ರಯತ್ನಿಸುತ್ತಿದ್ದೀರಾ? ಇತ್ತೀಚೆಗೆ ತಾನೇ ಅಪೊಲೋ ಆಸ್ಪತ್ರೆಯ ಉನ್ನತಾಧಿಕಾರಿಯೊಬ್ಬರು 'ಜಯಲಲಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಅವರು ತೀರಾ ಗಂಭೀರ ಸ್ಥಿತಿಯಲ್ಲಿದ್ದರು. ಉಸಿರಾಡುವುದಕ್ಕೇ ಕಷ್ಟವಾಗುತ್ತಿತ್ತು' ಎಂದಿದ್ದನ್ನು ಮರೆತಿರಾ? ನೀವು ಜನರನ್ನು ಎದುರಿಸಲು ಸಿದ್ಧರಾಗಿ ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ ನರ್ಮದಾ ಸೆಲ್ವರಾಜ್.












Click it and Unblock the Notifications