ಸುಗ್ರೀವಾಜ್ಞೆ ಹೊರಡಿಸುವವರೆಗೆ ಜಲ್ಲಿಕಟ್ಟು ಪ್ರತಿಭಟನೆ ನಿಲ್ಲಲ್ಲ!

By: ಅನುಷಾ ರವಿ
Subscribe to Oneindia Kannada

ಚೆನ್ನೈ, ಜನವರಿ 20 : ಪ್ರಧಾನಿ ನರೇಂದ್ರ ಮೋದಿ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ನಡುವಿನ ಮಾತುಕತೆ ಫಲ ನೀಡುವ ಲಕ್ಷಣ ಕಾಣದಿರುವುದರಿಂದ, ಜಲ್ಲಿಕಟ್ಟು ಕುರಿತಂತೆ ಸುಗ್ರೀವಾಜ್ಞೆ ಹೊರಡಿಸುವವರೆಗೆ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ತಮಿಳುನಾಡಿನ ಜನತೆ ನಿರ್ಧಾರ ತೆಗೆದುಕೊಂಡಿದ್ದಾರೆ.

ಮದವೇರಿದ ಗೂಳಿಯನ್ನು ಕಟ್ಟಿಹಾಕುವ ಕ್ರೀಡೆ ಜಲ್ಲಿಕಟ್ಟನ್ನು ಬೆಂಬಲಿಸುವುದಾಗಿ ಪ್ರಧಾನಿ ಹೇಳಿದ್ದಾರೆ, ನೀವು ಪ್ರತಿಭಟನೆ ನಿಲ್ಲಿಸಿ ಎಂದು ಮುಖ್ಯಮಂತ್ರಿ ಪನ್ನೀರ್ ಎಷ್ಟೇ ಹೇಳಿದರೂ ಕೇಳಲು ಪ್ರತಿಭಟನಾಕಾರರು ತಯ್ಯಾರಿಲ್ಲ. ರಾಜ್ಯ ಸರಕಾರ ಸುಗ್ರೀವಾಜ್ಞೆ ಹೊರಡಿಸುವವರೆಗೆ ಜಪ್ಪಯ್ಯ ಅಂದ್ರೂ ಬಗ್ಗಲ್ಲ ಎಂದು ಹಠ ಹಿಡಿದಿದ್ದಾರೆ. [ಜಲ್ಲಿಕಟ್ಟಿಗಾಗಿ ಬೆಂಗಳೂರಿನಲ್ಲಿಯೂ ದನಿಯೆತ್ತಿದ ತಮಿಳರು]

Jallikattu Protesters reject O Panneerselvam's call to give up agitation

ಮಾಂಬಲಮ್ ರೈಲು ನಿಲ್ದಾಣದಲ್ಲಿ ಬ್ಯಾರಿಕೇಡ್ ಮುರಿದು ಪ್ರತಿಭಟನಾಕಾರರು ಮುನ್ನುಗ್ಗಿ ರೈಲ್ ರೋಕೋ ಮಾಡಿದ್ದರಿಂದ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಡಿಎಂಕೆ ನಾಯಕ ಸ್ಟಾಲಿನ್ ಈ ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದಾರೆ.

ಬೆಂಗಳೂರಿನಲ್ಲಿ ಕೂಡ ತಮಿಳರು ಹೆಚ್ಚಾಗಿರುವ ಹಲಸೂರು ಪ್ರದೇಶದಲ್ಲಿ ತಿರುವಳ್ಳುವರ್ ಪ್ರತಿಮೆಯ ಬಳಿ ಭಾನುವಾರ ಪ್ರತಿಭಟನೆ ನಡೆಸಲು ತಮಿಳು ಭಾಷಿಕರು ನಿರ್ಧರಿಸಿದ್ದಾರೆ. ಅವರಿಗೆ ಪ್ರತಿಭಟನೆ ನಡೆಸಲು ಕೇವಲ 1 ಗಂಟೆ ಮಾತ್ರ ಸಮಯ ನಿಗದಿಪಡಿಸಲಾಗಿದೆ. [Oneindia explainer: ಜಲ್ಲಿಕಟ್ಟು ಏನು, ಎತ್ತ? ಸ್ವಾರಸ್ಯಕರ ಸಂಗತಿ!]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jallikattu : Protesters in Tamil Nadu to continue agitation till ordinance is passed. The people have rejected the call by O Panneer Selvam to give up agitation. The state government has no other go but to pass ordinance to allow Jallikattu.
Please Wait while comments are loading...