ಜಯಲಲಿತಾರನ್ನು ಭೇಟಿ ಮಾಡಿದ ಅಮಿತ್ ಷಾ, ಜೇಟ್ಲಿ

Posted By: Prithviraj
Subscribe to Oneindia Kannada

ಚೆನ್ನೈ, ಅಕ್ಟೋಬರ್, 12 : ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ, ಜಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಇಂದು ಭೇಟಿ ಮಾಡಿ ಶೀಘ್ರಗುಣಮುಖರಾಗುವಂತೆ ಹಾರೈಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅರುಣ್ ಜೇಟ್ಲಿ, "ಇಂದು ಅಪೊಲೋ ಆಸ್ಪತ್ರೆಗೆ ಭೇಟಿ ನೀಡಿ ಜಯಲಲಿತಾ ಅವರು ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದೇನೆ" ಎಂದು ತಿಳಿಸಿದ್ದಾರೆ.

ಅಮಿತ್ ಷಾ ಸಹ ಟ್ವೀಟ್ ಮಾಡಿದ್ದು, "ಚೆನ್ನೈನ ಅಪೊಲೋ ಆಸ್ಪತ್ರೆಗೆ ಭೇಟಿ ನೀಡಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯ ಪರಿಸ್ಥಿತಿ ವಿಚಾರಿಸಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದೇನೆ" ಎಂದು ಹೇಳಿದ್ದಾರೆ.

ಜಯಲಲಿತಾರನ್ನು ಭೇಟಿ ಮಾಡಿದ ಅಮಿತ್ ಷಾ, ಜೇಟ್ಲಿ

ಜಯಲಲಿತಾ ಆರೋಗ್ಯದ ಕುರಿತು ಟ್ವೀಟ್ ಮಾಡಿರುವ ಎಐಡಿಎಂಕೆ ಪಕ್ಷ, "ಮುಖ್ಯಮಂತ್ರಿಯವರು ಆರೋಗ್ಯದಿಂದ ಇದ್ದಾರೆ. ಅವರ ಆರೋಗ್ಯದ ಕುರಿತು ತಪ್ಪು ಸಂದೇಶಗಳನ್ನು ರವಾನಿಸಬೇಡಿ'' ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. [ಜಯಾ ಅನಾರೋಗ್ಯ: ಎಐಎಡಿಎಂಕೆ ಎಂಪಿಯಿಂದ ಸಿಬಿಐ ತನಿಖೆಗೆ ಒತ್ತಾಯ]

ಮುಖ್ಯಮಂತ್ರಿ ಸ್ಥಾನದಲ್ಲಿ ಜಯಲಲಿತಾ ಅವರೇ ಮುಂದುವರೆಯಲಿದ್ದಾರೆ. ಅವರು ನಿಭಾಯಿಸುತ್ತಿದ್ದ ಪ್ರಮುಖ ಖಾತೆಗಳನ್ನು ಅವರ ಅನುಮತಿ ಮೇರೆಗೆ ಪಕ್ಷದ ಹಿರಿಯ ಮುಖಂಡ ಹಾಗೂ ಹಣಕಾಸು ಸಚಿವ ಒ.ಪನ್ನೀರ್ ಸೆಲ್ವಂ ಅವರಿಗೆ ವಹಿಸಲಾಗಿದೆ ಎಂದು ಪಕ್ಷ ತಿಳಿಸಿದೆ.[ಜಯಲಲಿತಾ ಅನಾರೋಗ್ಯ: ಹೈಕೋರ್ಟ್ ಗೆ ಹಾಕಿದ್ದ ಪಿಐಎಲ್ ವಜಾ]

ಜಯಲಲಿತಾ ಅವರ ಆರೋಗ್ಯದ ಸಾಮಾಜಿಕ ಜಾಲಾತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ವಿರುದ್ಧ ದೂರುಗಳು ಬಂದ ಹಿನ್ನೆಲೆಯಲ್ಲಿ ಇದುವರೆಗೆ 42ಮಂದಿಯನ್ನು ಬಂಧಿಸಲಾಗಿದೆ ಎಂದು ತಮಿಳುನಾಡು ಪೊಲೀಸ್ ಇಲಾಖೆ ತಿಳಿಸಿದೆ. ಹಾಗೂ ಸುಳ್ಳು ಸುದ್ದಿ ಹರಡದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Arun jaitley and Amith sha met CM Jayalalitha to day in Chennai Apollo Hospital, and wish to cm for speedy recovery.
Please Wait while comments are loading...