ಚೆನ್ನೈನಲ್ಲಿ ಮತ್ತೆ ಐಟಿ ಆಟ: ಶಶಿಕಲಾಗೆ ಶುರುವಾಯ್ತು ಶನಿಕಾಟ!?

Recommended Video

      ಶಶಿಕಲಾ ನಟರಾಜನ್ ಆಸ್ತಿಗಳ ಮತ್ತೆ ಐ ಟಿ ದಾಳಿ | Oneindia Kannada

      ಚೆನ್ನೈ, ನವೆಂಬರ್ 28: ಎಐಎಡಿಎಂಕೆ ನಾಯಕಿ, ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಗೆ ಬಹುಶಃ ಶನಿಕಾಟ ಆರಂಭವಾದಂತಿದೆ! ಇತ್ತೀಚೆಗೆ ತಾನೇ ಶಶಿಕಲಾ ಅವರಿಗೆ ಒಡೆತನದ ಹಲವು ಪ್ರದೇಶಗಳಲ್ಲಿ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆ ದಾಳಿಯ ಮುಂದಿನ ಭಾಗ ಎಂಬಂತೆ ಇಂದು(ನ.28) ಬೆಳಿಗ್ಗೆ ಸಹ ದಾಳಿ ನಡೆಸಿದ್ದಾರೆ.

      ಚೆನ್ನೈ ಮತ್ತು ಮಧುರೈನ 33 ಸ್ಥಳಗಳಲ್ಲಿ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ನ.9 ರಂದು ಶಶಿಕಲಾ ಒಡೆತನದ ಬರೋಬ್ಬರಿ 187 ಸ್ಥಳಗಳ ಮೇಲೆ ನಡೆದಿದ್ದ ಸತತ 5 ದಿನಗಳ ಐಟಿದಾಳಿಯಲ್ಲಿ ಒಂದು ಅಂದಾಜಿನ ಪ್ರಕಾರ ಸುಮಾರು 1400 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿತ್ತು.

      IT Raids on Sasikala Natarajan aides continue: searching in 33 locations in TN

      ಈಗಾಗಲೇ ಅಕ್ರಮ ಆಸ್ತಿ ಹೊಂದಿರುವ ಅಪರಾಧದ ಮೇಲೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಶಶಿಕಲಾ ನಟರಾಜನ್ ಅವರಿಗೆ ಪದೇ ಪದೇ ಐಟಿ ಆಘಾತವಾಗುತ್ತಿರುವುದು ನುಂಗಲಾರದ ತುತ್ತೆನಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+