ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋಯಾಲುಕ್ಕಾಸ್ ಮಳಿಗೆಗಳ ಮೇಲೆ ಐಟಿ ದಾಳಿ

By Sachhidananda Acharya
|
Google Oneindia Kannada News

Recommended Video

ಚೆನ್ನೈ : ಜೋಯಾಲುಕ್ಕಾಸ್ ಮಳಿಗೆಗಳ ಮೇಲೆ ಐ ಟಿ ದಾಳಿ | Oneindia Kannada

ಚೆನ್ನೈ, ಜನವರಿ 10: ಕೇರಳ ಮೂಲದ ಆಭರಣ ಮಾರಾಟ ಸಂಸ್ಥೆ ಜೋಯಾಲುಕ್ಕಾಸ್ ನ ಸರಣಿ ಶೋರೂಂಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆದಿದ್ದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

"ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ಹೆಚ್ಚಿನ ಮಾಹಿತಿಗಳನ್ನು ನಂತರ ನೀಡಲಿದ್ದೇವೆ," ಎಂದು ಆದಾಯ ತೆರಿಗೆ ಇಲಾಖೆ ಹಿರಿಯ ಅಧಿಕಾರಿ ಆಂಗ್ಲ ವೆಬ್ಸೈಟ್ ಒಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಉದ್ಯಮಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಕೆ.ಪಿ.ನ೦ಜು೦ಡಿಗೆ ಐಟಿ ಶಾಕ್ಉದ್ಯಮಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಕೆ.ಪಿ.ನ೦ಜು೦ಡಿಗೆ ಐಟಿ ಶಾಕ್

ಇದೇ ವೇಳೆ ಕೇರಳದ ಮತ್ತೊಂದು ಪ್ರಮುಖ ಜುವೆಲ್ಲರಿ ಸಂಸ್ಥೆ ಮಂಜಲಿ ಜುವೆಲ್ಲರ್ಸ್ ಮೇಲೆಯೂ ಐಟಿ ದಾಳಿ ನಡೆದಿದೆ.

IT conducts raid at showrooms of Joyalukkas

100 ಮಳಿಗೆಗಳು ಸೇರಿ ಒಟ್ಟು 130 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ. ಚೆನ್ನೈ, ಹೈದರಾಬಾದ್, ತ್ರಿಶೂರ್ ಸೇರಿದಂತೆ ಕೇರಳ, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ದಾಳಿ ನಡೆದಿದೆ.

ಸಂಕ್ರಾಂತಿ ವಿಶೇಷ ಪುಟ

ಅಪನಗದೀಕರಣದ ನಂತರ ಈ ಎರಡು ಸಂಸ್ಥೆಗಳು ತೆರಿಗೆ ವಂಚನೆ ನಡೆಸಿವೆ ಎಂದು ಹೇಳಲಾಗಿದೆ. ಅಪನಗದೀಕರಣದ ನಂತರ ಎರಡೂ ಸಂಸ್ಥೆಗಳು ಭಾರೀ ಮಾರಾಟವನ್ನು ತೋರಿಸಿರುವುದಲ್ಲದೇ, ಖಾತೆಗಳಲ್ಲಿ ದೊಡ್ಡ ಮೊತ್ತದ ಹಣವು ಜಮೆಯಾಗಿದ್ದು ತನಿಖಾ ಸಂಸ್ಥೆಗಳ ಕಣ್ಣಿಗೆ ಬಿದ್ದಿದೆ. ಈ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ.

ಚೆನ್ನೈನ ಐಟಿ ವಿಭಾಗದ ನೇತೃತ್ವದಲ್ಲಿ ದಾಳಿ ನಡೆದಿದ್ದು 100ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ದೊಡ್ಡ ಸಂಖ್ಯೆಯ ಪೊಲೀಸರು ದಾಳಿಯಲ್ಲಿ ಪಾಲ್ಗೊಂಡಿದ್ದಾರೆ.

ಜೋಯಾಲುಕ್ಕಾಸ್ ಒಟ್ಟು 11 ದೇಶಗಳಲ್ಲಿ ತನ್ನ ಶೋರೂಂಗಳನ್ನು ಹೊಂದಿದೆ. ಭಾರತ, ಕತಾರ್, ಓಮನ್, ಬಹ್ರೇನ್, ಬ್ರಿಟನ್ ಸೇರಿದಂತೆ 11 ದೇಶಗಳಲ್ಲಿ 130 ಮಳಿಗೆಗಳು ಈ ಸಂಸ್ಥೆಯ ಬಳಿಯಲ್ಲಿವೆ. ಮಂಜಲಿ ಜುವೆಲ್ಲರ್ಸ್ ಗೆ ಕೂಡ ವಿದೇಶಗಳಲ್ಲಿ ಮಳಿಗೆಗಳಿವೆ.

English summary
Multiple showrooms of Joyalukkas and Manjali Jewellers are being raided in Chennai and other places over allegations of tax evasion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X