ವೆಂಕಟೇಶ್ವರ ಸ್ವಾಮಿ ಮೂರ್ತಿ ಹಿಡಿಯುವ ಮುನ್ನ ಶೂ ತೆಗೆದ ಕ್ರಿಕೆಟ್ ದೇವರು: ಸಚಿನ್ ತೆಂಡೂಲ್ಕರ್ ಸಂಸ್ಕಾರಕ್ಕೆ ಇಂಟರ್ನೆಟ್ ಫಿದಾ

ಭಾರತೀಯ ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ ಎಂದರೆ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿಯೂ ಒಂದು ವಿಶೇಷವಾದ ಗೌರವವಿದೆ. ಕ್ರಿಕೆಟ್ ಮೈದಾನದಲ್ಲಿ ಅವರು ಮಾಡಿರುವ ದಾಖಲೆಗಳಷ್ಟೇ, ಮೈದಾನದ ಹೊರಗೆ ಅವರ ಸರಳ ವ್ಯಕ್ತಿತ್ವವೂ ಜನರಿಗೆ ಅಚ್ಚುಮೆಚ್ಚು. ಸಚಿನ್ ಅವರನ್ನು ಯಾರಾದರೂ ಟೀಕಿಸುವುದನ್ನು ನೋಡಲು ಸಿಗುವುದು ತೀರಾ ಕಡಿಮೆ.

ಇದಕ್ಕೆ ಪ್ರಮುಖ ಕಾರಣ, ಅವರು ಕೇವಲ ಒಬ್ಬ ಶ್ರೇಷ್ಠ ಆಟಗಾರ ಮಾತ್ರವಲ್ಲ, ಅದಕ್ಕಿಂತ ಮಿಗಿಲಾಗಿ ಒಬ್ಬ ಅತ್ಯುತ್ತಮ ವ್ಯಕ್ತಿ. ಅವರ ಗುಣ ಮತ್ತು ಸಂಸ್ಕಾರವನ್ನು ಎಷ್ಟು ಹೊಗಳಿದರೂ ಕಡಿಮೆಯೇ ಎಂದೆನಿಸುತ್ತದೆ. ಸಚಿನ್ ಅವರ ಈ ಅದ್ಭುತ ವ್ಯಕ್ತಿತ್ವವನ್ನು ಬಿಂಬಿಸುವ ಮತ್ತೊಂದು ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನಗೆದ್ದಿದೆ.

Sachin Tendulkar

ದೇವರ ಮೂರ್ತಿ ಹಿಡಿಯುವ ಮುನ್ನ ಶೂ ತೆಗೆದ ಸಚಿನ್

ಇತ್ತೀಚೆಗೆ ವಿಶಾಖಪಟ್ಟಣಂನಲ್ಲಿರುವ ಆಂಧ್ರ ವಿಶ್ವವಿದ್ಯಾಲಯದ 100 ವರ್ಷಗಳ ಸಂಭ್ರಮಾಚರಣೆ (ಶತಮಾನೋತ್ಸವ) ಅದ್ಧೂರಿಯಾಗಿ ನೆರವೇರಿತು. ಈ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಭಾಗವಹಿಸಿದ್ದರು. ಕಾರ್ಯಕ್ರಮದ ವೇದಿಕೆಯ ಮೇಲೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಜೊತೆ ಸಚಿನ್ ನಿಂತಿದ್ದಾಗ, ಅವರಿಗೆ ವೆಂಕಟೇಶ್ವರ ಸ್ವಾಮಿ ದೇವರ ಒಂದು ಸುಂದರವಾದ ಮೂರ್ತಿಯನ್ನು ನೀಡಿ ಗೌರವಿಸಲಾಯಿತು.

ಆ ಸಮಯದಲ್ಲಿ ಅತ್ಯಂತ ಭಕ್ತಿ ಮತ್ತು ಗೌರವದಿಂದ ದೇವರ ಮೂರ್ತಿಯನ್ನು ಸ್ವೀಕರಿಸುವ ಮೊದಲು ಸಚಿನ್ ತೆಂಡೂಲ್ಕರ್ ಅವರು ತಮ್ಮ ಕಾಲುಗಳಲ್ಲಿದ್ದ ಶೂಗಳನ್ನು ತೆಗೆದಿದ್ದಾರೆ. ದೇವರ ಮೂರ್ತಿಯನ್ನು ಕೈಯಲ್ಲಿ ಹಿಡಿಯುವಾಗ ಪಾದರಕ್ಷೆ ಧರಿಸಬಾರದು ಎಂಬ ಅವರ ಈ ಸಣ್ಣ ಆದರೆ ಅರ್ಥಪೂರ್ಣ ನಡೆ ಇದೀಗ ಇಂಟರ್ನೆಟ್‌ನಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ ಸಚಿನ್‌ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಘುತ್ತಿದೆ. ಫೇಸ್‌ಬುಕ್‌ನಲ್ಲಿ ಈ ವಿಡಿಯೋಗೆ ಕಮೆಂಟ್‌ ಮಾಡಿದ ಬಳಕೆದಾರರೊಬ್ಬರು "ನೀವು ಎಷ್ಟು ಎತ್ತರಕ್ಕೆ ಬೆಳೆದರೂ, ನಿಮ್ಮಿಂದ ಕಲಿಯುವವರು ಬಹಳಷ್ಟು ಮಂದಿ ಇದ್ದಾರೆ ಅಣ್ಣ. ದೇವರ ಮುಂದೆ ನಾವೆಲ್ಲರೂ ಆ ದೇವರ ಮಕ್ಕಳೇ ಎಂಬುದನ್ನು ನೀವು ತೋರಿಸಿಕೊಟ್ಟಿದ್ದೀರಿ. ಅದಕ್ಕಾಗಿಯೇ ನಮ್ಮ ಹಿರಿಯರು ಅಂದೇ ಹೇಳಿದ್ದಾರೆ-'ಎಷ್ಟೇ ಬೆಳೆದರೂ ತಗ್ಗಿಯೇ ಇರಬೇಕು' ಎಂದು. ನೀವೇ ಅದಕ್ಕೆ ಸಾಕ್ಷಿ, ಸಚಿನ್ ಸರ್" ಎಂದು ಹೆಮ್ಮೆಯಿಂದ ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು "ಸಚಿನ್ ಸರ್, ವೆಂಕಟೇಶ್ವರ ಸ್ವಾಮಿಯ ಕೃಪೆ ಸದಾ ನಿಮ್ಮ ಮೇಲಿರಲಿ." ಎಂದು ಶುಭ ಹಾರೈಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+