ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರನ್ನು ಅವಮಾನಿಸುವುದು ಕಾಂಗ್ರೆಸ್, ಡಿಎಂಕೆ ಸಂಸ್ಕೃತಿ: ಮೋದಿ

|
Google Oneindia Kannada News

ತಿರುಪುರ್, ಮಾರ್ಚ್ 30: ಮಹಿಳೆಯರನ್ನು ಅವಮಾನಿಸುವುದು ಕಾಂಗ್ರೆಸ್, ಡಿಎಂಕೆ ಸಂಸ್ಕೃತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಂದು ತಮಿಳುನಾಡಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಅವಮಾನ ಮಾಡುವುದು, ಅಗೌರವದಿಂದ ವರ್ತಿಸುವುದು ಕಾಂಗ್ರೆಸ್ ಹಾಗೂ ಡಿಎಂಕೆ ಸಂಸ್ಕೃತಿಯ ಭಾಗವಾಗಿದೆ ಎಂದು ಹೇಳಿದ್ದಾರೆ.

ನಿಮ್ಮ ಬಳಿ ಹೇಳಿಕೊಳ್ಳಲು ಇನ್ನೇನು ಉಳಿದುಕೊಂಡಿದೆ?; ವಿಪಕ್ಷಗಳಿಗೆ ಮೋದಿ ಪ್ರಶ್ನೆನಿಮ್ಮ ಬಳಿ ಹೇಳಿಕೊಳ್ಳಲು ಇನ್ನೇನು ಉಳಿದುಕೊಂಡಿದೆ?; ವಿಪಕ್ಷಗಳಿಗೆ ಮೋದಿ ಪ್ರಶ್ನೆ

ಕೆಲವು ದಿನಗಳ ಹಿಂದೆ ಶಾಸಕ ಹಾಗೂ ಡಿಎಂಕೆ ಅಭ್ಯರ್ಥಿ ದಿಂಡಿಗುಲ್ ಲಿಯೋನಿ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು, ಆದರೂ ಟಿಎಂಕೆ ಅದನ್ನು ನಿಲ್ಲಿಸುವ ಯಾವುದೇ ಪ್ರಯತ್ನ ಮಾಡಿಲ್ಲ.

 Insulting Women Is Part Of Congress-DMK Culture, Says PM Modi

ಹಾಗೆಯೇ ಕಾಂಗ್ರೆಸ್ ಹಾಗೂ ಡಿಎಂಕೆ ತಮಿಳುನಾಡು ಮುಖ್ಯಮಂತ್ರಿ ಅವರ ತಾಯಿಯ ಬಳಿ ಕೂಡ ಅಗೌರವದಿಂದ ನಡೆದುಕೊಂಡಿದೆ. ಒಂದೊಮ್ಮೆ ಈ ಪಕ್ಷಗಳು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿರುವ ಎಲ್ಲಾ ಮಹಿಳೆಯರ ಬಳಿಯೂ ಕೆಟ್ಟದಾಗಿ ನಡೆದುಕೊಳ್ಳಲಿದ್ದಾರೆ ಎಂದರು.

ಇನ್ನು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರ 85 ವರ್ಷದ ತಾಯಿಯ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ್ದು, ಪರಿಣಾಮ ಆಕೆ ಮೃತಪಟ್ಟಿದ್ದಾರೆ. ಕೇವಲ ಮಹಿಳೆಯ ದೃಷ್ಟಿಕೋನ ಬೇರೆ ಎನ್ನುವ ವಿಚಾರಕ್ಕೆ ಹಲ್ಲೆ ನಡೆಸಿದೆ. ಈ ಕುರಿತು ಕಾಂಗ್ರೆಸ್ ಏನಾದರೂ ಪ್ರತಿಕ್ರಿಯೆ ನೀಡಿತೇ? ಎಂದು ಪ್ರಶ್ನಿಸಿದ್ದಾರೆ.

ತಮಿಳುನಾಡಿನ ರೈತರು, ಬಡವರು, ಯುವಕರು ಮತ್ತು ಮಹಿಳೆಯರ ಸಬಲೀಕರಣವನ್ನು ಬಿಜೆಪಿ ಬಯಸುತ್ತಿದೆ. ಎನ್‌ಡಿಎಗೆ ಮತ ನೀಡುವುದೆಂದರೆ ದೀರ್ಘಕಾಲೀನ ಸಮಸ್ಯೆಗಳ ಪರಿಹಾರಕ್ಕೆ ಮುಂದಡಿಯಿಟ್ಟಂತೆ ಎಂದು ಹೇಳಿದ್ದಾರೆ.

Recommended Video

RCB ತಂಡ ಸೇರಲು ಚೆನ್ನೈಗೆ ಬಂದ ಮ್ಯಾಕ್ಸ್ ವೆಲ್ | Oneindia Kannada

ತಮಿಳುನಾಡಿನ ಭಾಷೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು ನಾವು ಬಯಸುತ್ತೇವೆ, ಅದಕ್ಕಾಗಿಯೇ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ನೀಡಲು ಕ್ರಮ ಕೈಗೊಳ್ಳುತ್ತಿದ್ದೇವೆ.

English summary
Prime Minister Narendra Modi on Tuesday slammed Congress and Dravida Munnetra Kazhagam (DMK), saying it has become their culture to insult women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X