ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಓಖಿ' ಅಬ್ಬರಕ್ಕೆ ತಮಿಳುನಾಡು, ಕೇರಳ ತತ್ತರ

|
Google Oneindia Kannada News

Recommended Video

'ಓಖಿ' ಅಬ್ಬರಕ್ಕೆ ತಮಿಳುನಾಡು, ಕೇರಳ ತತ್ತರ | Oneindia Kannada

ಚೆನ್ನೈ, ನವೆಂಬರ್ 30 : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾದ ಓಖಿ ಚಂಡಮಾರುತದಿಂದ ಚೆನ್ನೈ ತತ್ತರಿಸಿದೆ. ಪ್ರಮುಖವಾಗಿ ತಮಿಳುನಾಡಿನ ಕರಾವಳಿ ತೀರದಲ್ಲಿ ಭಾರಿ ಮಳೆಯಾಗುತ್ತಿದ್ದು, ಗಂಟೆಗೆ ಸುಮಾರು 150 ಕಿ.ಮೀ ವೇಗದಲ್ಲಿ ಓಖಿ ಚಂಡಮಾರುತ ಲಕ್ಷದ್ವೀಪದತ್ತ ಧಾವಿಸುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಮಿಳುನಾಡಿನ ಸೈಕ್ಲೋನ್ ಎಫೆಕ್ಟ್: ರಾಜ್ಯದಲ್ಲಿ ಮೂರು ದಿನ ತುಂತುರು ಮಳೆತಮಿಳುನಾಡಿನ ಸೈಕ್ಲೋನ್ ಎಫೆಕ್ಟ್: ರಾಜ್ಯದಲ್ಲಿ ಮೂರು ದಿನ ತುಂತುರು ಮಳೆ

ಹಾಗೆಯೇ ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಭಾರತದ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಮುನ್ನೆರಚ್ಚರಿಕೆಯನ್ನೂ ರವಾನಿಸಿದೆ .ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಹಲವೆಡೆ ಗುರುವಾರ ಹಾಗೂ ಶುಕ್ರವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರಿಗರೇ ಚಳಿಗಾಲದ ಸುಖಗಳೆಲ್ಲ ಪ್ರಾಪ್ತಿರಸ್ತು...ಬೆಂಗಳೂರಿಗರೇ ಚಳಿಗಾಲದ ಸುಖಗಳೆಲ್ಲ ಪ್ರಾಪ್ತಿರಸ್ತು...

ಈಗಾಗಲೇ ತಮಿಳುನಾಡಿನ ಟುಟಿಕಾರನ್, ತಿರುನೆಲ್ವೇಲಿ, ಕನ್ಯಾಕುಮಾರಿ, ವಿರುದುನಗರ್ ಗಳಲ್ಲಿ ಭಾರಿ ಮಳೆಯಾಗುತ್ತಿದೆ. ಮಳೆ ಪೀಡಿತ ಈ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ
ಘೋಷಿಸಲಾಗಿದೆ.

ಚಂಡಮಾರುತದ ಪ್ರಮಾಣ ಮುಂದಿನ 48 ಗಂಟೆ : ಶುಕ್ರವಾರ (ಡಿ.1) ರಂದು ಲಕ್ಷದ್ವೀಪದಲ್ಲಿ ಅತಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ತಮಿಳುನಾಡು ಹಾಗೂ ಕೇರಳದ ದಕ್ಷಿಣ ಭಾಗದಲ್ಲಿ ಹೆಚ್ಚು ಮಳೆಯಾಗಲಿದೆ.

ತಮಿಳುನಾಡು ಹಾಗೂ ಕರ್ನಾಟಕದ ಉತ್ತರ ಭಾಗ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ.

ಜನ ಜಾಗೃತರಾಬೇಕು ಸೂಚನೆ

ತಮಿಳುನಾಡು ಜನ ಜಾಗೃತರಾಬೇಕು ಸೂಚನೆ: ಕಳೆದ 48 ಗಂಟೆಗಳಲ್ಲಿ ಇಡುಕಿಯಲ್ಲಿ ಸುರಿ ಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ, ಮರಗಳು ಧರೆಗುರುಳಿದೆ. ಜತೆಗೆ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿದೆ. ಮುಂದೆ ಜಾಗೃತರಾಗಿರುವುದು ಅಗತ್ಯ ಎಂದು ಸಚಿನ್ ಶಾಜಿ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಮಳೆಯ ಅಬ್ಬರ, ರಸ್ತೆ ಮಧ್ಯದಲ್ಲೇ ನಿಂತ ವಾಹನಗಳು

ಮಳೆಯ ಅಬ್ಬರ, ರಸ್ತೆ ಮಧ್ಯದಲ್ಲೇ ನಿಂತ ವಾಹನಗಳು

ಚೆನ್ನೈನಲ್ಲಿ ಮುಂದುವರೆದ ಮಳೆ ಜನಜೀವನ ಅಸ್ತವ್ಯಸ್ತ: ಪ್ರಸ್ತುತ ಕನ್ಯಾಕುಮಾರಿ ತೀರದಿಂದ ಸುಮಾರು 170 ಕಿ.ಮೀ ದೂರದಲ್ಲಿಓಖಿ ಚಂಡಮಾರುತ ಬೀಸುತ್ತಿದ್ದು, ಪರಿಣಾಮ ಕರಾವಳಿ ತೀರದಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ಮುಂಜಾನೆವರೆಗೂ ಸುಮಾರು 6 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕನ್ಯಾಕುಮಾರಿ, ಚೆನ್ನೈ, ಲಕ್ಷದ್ವೀಪ ಸೇರಿದಂತೆ ಕರಾವಳಿ ತೀರದಲ್ಲಿ ಭಾರಿ ಅಲೆಗಳು ಸೃಷ್ಟಿಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಮೀನುಗಾರರು
ನೀರಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ.

Array

ದೇವ್ ಸಿಂಗ್ ರಾಣಾ ಟ್ವೀಟ್

ತಮಿಳುನಾಡು ಹಾಗೂ ಕೇರಳ ಒಳಭಾಗದಲ್ಲಿ ಭಾರಿ ಮಳೆ ಸಾಧ್ಯತೆ: ಈಗಾಗಲೇ ತಮಿಳುನಾಡು ದಕ್ಷಿಣಭಾಗ ಹಾಗೂ ಕೇರಳದ ದಕ್ಷಿಣ ಭಾಗಗಳಲ್ಲಿ ಕಳೆದ 24 ಗಂಟೆಗಳಿಂದ ಮಳೆಯಾಗುತ್ತಿದೆ. ಇನ್ನು ಮುಂದಿನ 24 ಗಂಟೆಗಳಲ್ಲಿ ತಮಿಳುನಾಡು ಹಾಗೂ ಕೇರಳ ಒಳನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ದೇವ್ ಸಿಂಗ್ ರಾಣಾ ಟ್ವೀಟ್ ಮಾಡಿದ್ದಾರೆ.

ಚೆನ್ನೈ ಪರಿಸ್ಥಿತಿ

ಚೆನ್ನೈನಲ್ಲಿರುವವರ ಪರಿಸ್ಥಿತಿ ಕುರಿತ ಟ್ವೀಟ್ :ತಮಿಳುನಾಡಿನಲ್ಲಿ ಓಖಿ ಚಂಡಮಾರುತದಿಂದಾಗಿ ಭಾರಿ ಮಳೆಯಾಗುತ್ತಿದೆ, ಅವರ ಪರಿಸ್ಥಿತಿ ಕುರಿತು ದಿವ್ಯಾಂಶು ಅವರು ಟ್ವೀಟ್ ಮಾಡಿದ್ದು, ಒಂದೊಮ್ಮೆ ಕಠಿಣ ಸಂದರ್ಭ ಬಂದಾಗ ಸಹಾಯವಾಣಿಯನ್ನು ಬಳಸಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ.

ನಿಲ್ಲದ ಮಳೆ, ರಸ್ತೆಯಲ್ಲೇ ನಿಂತ ನೀರು, ಉರುಳಿದ ಮರಗಳು

ನಿಲ್ಲದ ಮಳೆ, ರಸ್ತೆಯಲ್ಲೇ ನಿಂತ ನೀರು, ಉರುಳಿದ ಮರಗಳು

ಅಂತೆಯೇ ಭಾರಿ ಮಳೆ ಮತ್ತು ಬಿರುಗಾಳಿ ಬೀಸುವ ಸಾಧ್ಯತೆ ಇದ್ದು, ಮರಗಳು ಧರೆಗುರುಳುವ ಸಾಧ್ಯತೆ ಇದೆ ಎನ್ನಲಾಗಿದೆ. ಅಂತೆಯೇ ಯಾವುದೇ ರೀತಿಯ ಪರಿಸ್ಥಿತಿ ಎದುರಿಸಲು ವಿದ್ಯುತ್ ಇಲಾಖೆ ಸಿಬ್ಬಂದಿಗೆ ಸಿದ್ಧರಿರುವಂತೆ
ಸೂಚನೆ ನೀಡಲಾಗಿದೆ.

ಸಹಾಯವಾಣಿಯನ್ನು ಬಳಸಿಕೊಳ್ಳುವಂತೆ ಸೂಚನೆ

ಸಹಾಯವಾಣಿಯನ್ನು ಬಳಸಿಕೊಳ್ಳುವಂತೆ ಸೂಚನೆ

ತಮಿಳುನಾಡಿನಲ್ಲಿ ಓಖಿ ಚಂಡಮಾರುತದಿಂದಾಗಿ ಭಾರಿ ಮಳೆಯಾಗುತ್ತಿದೆ, ಅವರ ಪರಿಸ್ಥಿತಿ ಕುರಿತು ದಿವ್ಯಾಂಶು ಅವರು ಟ್ವೀಟ್ ಮಾಡಿದ್ದು, ಒಂದೊಮ್ಮೆ ಕಠಿಣ ಸಂದರ್ಭ ಬಂದಾಗ ಸಹಾಯವಾಣಿಯನ್ನು ಬಳಸಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ.

ಚೆನ್ನೈ ತತ್ತರ

ಚೆನ್ನೈ ತತ್ತರ

ಬಿರುಗಾಳಿಗೆ ಚೆನ್ನೈ ತತ್ತರ : ಅಂತೆಯೇ ಭಾರಿ ಮಳೆ ಮತ್ತು ಬಿರುಗಾಳಿ ಬೀಸುವ ಸಾಧ್ಯತೆ ಇದ್ದು, ಮರಗಳು ಧರೆಗುರುಳುವ ಸಾಧ್ಯತೆ ಇದೆ ಎನ್ನಲಾಗಿದೆ. ಅಂತೆಯೇ ಯಾವುದೇ ರೀತಿಯ ಪರಿಸ್ಥಿತಿ ಎದುರಿಸಲು ವಿದ್ಯುತ್ ಇಲಾಖೆ ಸಿಬ್ಬಂದಿಗೆ ಸಿದ್ಧರಿರುವಂತೆ
ಸೂಚನೆ ನೀಡಲಾಗಿದೆ.

English summary
The state of Tamilnadu at present heavy rains falls were witnessed.India Meteorological Department has issued a cyclone warning for lakshadveep, kerala and tamil Nadu
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X