'21 ಸಾವಿರ ಸಸಿ ನೆಡದಿದ್ದರೆ ಎತ್ತಿನಹೊಳೆ ರದ್ದು?'

Posted By:
Subscribe to Oneindia Kannada

ಚೆನ್ನೈ, ಜನವರಿ 20: ರಾಜ್ಯವು ಎತ್ತಿನಹೊಳೆ ಯೋಜನೆಗಾಗಿ ಕಡಿದಿರುವ 7000 ಮರಗಳಿಗೆ ಬದಲಾಗಿ 21,000 ಸಸಿಗಳನ್ನು ನೆಡಬೇಕು ಇಲ್ಲದಿದ್ದರೆ ಎತ್ತಿನಹೊಳೆ ಯೋಜನೆಯನ್ನೇ ರದ್ದು ಗೊಳಿಸಿವುದಾಗಿ ಹಸಿರು ನ್ಯಾಯಾಧಿಕರಣ(ಎನ್ ಜಿಟಿ) ಖಡಕ್ ಎಚ್ಚರಿಕೆ ನೀಡಿದೆ.

ನ್ಯಾಯಮೂರ್ತಿ ಸ್ವತಂತ್ರಕುಮಾರ್ ನೇತೃತ್ವದ ಪೀಠ ಎತ್ತಿನಹೊಳೆ ಯೋಜನೆಗಾಗಿ ಸಾವಿರಾರು ಮರ ಕಡಿದಿರುವ ಬಗ್ಗೆ ಬಂದಿರುವ ಮನವಿ ಕುರಿತು ವಿಚಾರಿಸಿ ರಾಜ್ಯ ಸರ್ಕಾರವನ್ನು ತೀವ್ರ ತರಾಟೆ ತೆಗೆದುಕೊಂಡಿರು. ಪರಿಸರ ರಕ್ಷಣೆಯ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಸ್ಪಷ್ಟವಾದ ಉತ್ತರ ನೀಡುವಂತೆ ರಾಜ್ಯಪರ ವಕೀಲರಿಗೆ ತಾಕೀತು ಮಾಡಿದರು. ಈ ವೇಳೆ ರಾಜ್ಯ ಪರ ವಕೀಲರು ಎತ್ತಿನ ಹೊಳೆಗಾಗಿ 7000 ಮರಗಳನ್ನು ಕಡೆಯಲಾಗಿದ್ದು, ಬದಲಿಗೆ ಅದೇ ಸ್ಥಳದಲ್ಲಿ 3000 ಸಸಿಗಳನ್ನು ನೆಡಲಾಗಿದೆ ಎಂದು ಉತ್ತರಿಸಿದ್ದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.['ಎತ್ತಿನಹೊಳೆ ಬಗ್ಗೆ ಹಾಸನ ಜಿಲ್ಲಾ ಅರಣ್ಯಾಧಿಕಾರಿಗಳಿಂದ ಸುಳ್ಳು ಮಾಹಿತಿ']

If you are unplanted 21,000 saplings Yettinahole planning is cancel: NGT

ಇನ್ನು ರಾಜ್ಯವನ್ನು ತರಾಟೆಗೆ ತೆಗೆದು ಕೊಂಡು ನ್ಯಾಯಮೂರ್ತಿಗಳು ಕಸ್ತೂರಿ ರಂಗನ್ ಮತ್ತು ಮಾಧವ್ ಗಾಡ್ಗಿಲ್ ಅವರ ಪರಿಸರ ಸಂರಕ್ಷಣಾ ವರದಿಯನ್ನು ಏಕೆ ಪಾಲಿಸುತ್ತಿಲ್ಲ. ಮರಗಳನ್ನು ಕತ್ತರಿಸುವುದರಿಂದ ಮಣ್ಣಿನ ಸವಕಳಿ ಆಗುತ್ತದೆ ಇದರ ಬಗ್ಗೆ ಏಕೆ ಅಧ್ಯಯನ ನಡೆಸಿಲ್ಲ ಎಂದು ವಕೀಲರನ್ನು ಖಾರವಾಗಿ ಪ್ರಶ್ನಿಸಿದರು. ಅಲ್ಲದೆ ಈಗ ಕಡಿದಿರುವ ಮರಗಳ ಬದಲಾಗಿ 21,000 ಸಸಿಗಳನ್ನು ನೆಡಬೇಕು ಎಂದು ಸೂಚಿಸಿದರು.['ಎತ್ತಿನಹೊಳೆ ಯೋಜನೆ ವಿರೋಧಕ್ಕೆ ಅರ್ಥವಿಲ್ಲ']

ಎತ್ತಿನಹೊಳೆ ಯೋಜನೆಗಾಗಿಯೇ ಏಳು ಸಾವಿರ ಮರಗಳನ್ನು ರಾಜ್ಯಸರ್ಕಾರ ಕತ್ತರಿಸಲಿ ಮೂರು ಸಾವಿರ ಮರಗಳನ್ನು ನಟ್ಟಿದೆ ಅವುಗಳಲ್ಲಿ ಉಳಿದವು ಎಷ್ಟು ಎಂಬ ಮಾಹಿತಿಯು ಇಲ್ಲ. ಇದರ ಮಧ್ಯದಲ್ಲಿಯೇ ರಾಜ್ಯ ಬೆಂಗಳೂರಿನಲ್ಲಿ ಅಭಿವೃದ್ದಿ ಹೆಸರಿನಲ್ಲಿ ಉಕ್ಕಿನ ಸೇತುವೆಗೆ ನಿರ್ಮಿಸಲು ಮುಂದಾಗಿರುವುದು ನಾಗರಿಕರ ವಿವೇಚನೆಗೆ ಮತ್ತೆ ಮತ್ತೆ ಪ್ರಶ್ನೆ ಎತ್ತುವಂತೆ ಮಾಡುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
If you are unplanted 21,000 saplings Yettinahole planning is cancel says National Green Tribunal (NGT) in Chennai.
Please Wait while comments are loading...