ತಮಿಳರ 'ಅಮ್ಮ' ಜಯಲಲಿತಾರಿಗೆ ನಿಜಕ್ಕೂ ಏನು ಕಾಯಿಲೆ?

Posted By:
Subscribe to Oneindia Kannada

ಚೆನ್ನೈ, ಸೆ. 23: ತಮಿಳರ ಪಾಲಿನ 'ಅಮ್ಮ' ಸೆಲ್ವಿ ಜೆ ಜಯಲಲಿತಾ ಅವರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಸುದ್ದಿ ಎಲ್ಲರಿಗೂ ತಿಳಿದಿರುತ್ತೆ. ಜಯಲಲಿತಾ ಅವರ ಆರೋಗ್ಯ ಸುಧಾರಣೆಗಾಗಿ ಶುಭ ಹಾರೈಕೆಗಳ ಮಹಾಪೂರವೇ ಹರಿದು ಬರುತ್ತಿದೆ. ಆದರೆ, ಜಯಲಲಿತಾ ಅವರಿಗೆ ಕಾಡುತ್ತಿರುವ ಆರೋಗ್ಯ ಸಮಸ್ಯೆಯಾದರೂ ಏನು? ಮುಂದೆ ಓದಿ...

ಕರ್ನಾಟಕದ ಮೇಲುಕೋಟೆಯ ಅಯ್ಯಂಗಾರಿ ಬ್ರಾಹ್ಮಣ ಕುಟುಂಬದಲ್ಲಿ ಜಯರಾಮ್ ಹಾಗೂ ವೇದವಲ್ಲಿ ದಂಪತಿಯ ಪುತ್ರಿಯಾಗಿ ಜನಿಸಿದ ಕೋಮಲವಲ್ಲಿ ಮುಂದೆ ತಮಿಳುನಾಡಿನ ಜಯಲಲಿತಾ ಆಗಿ ಬೆಳೆದಿದ್ದು ದೊಡ್ಡ ಸಾಧನೆ. ಜಯಲಲಿತಾ ಅವರ ಸ್ಥೂಲ ಕಾಯ ಅವರಿಗೆ ಪರಂಪರಾಗತವಾಗಿ ಬಂದ ಬಳುವಳಿ. [ಜಯಾಗೆ ಜಲಸಂಬಂಧಿ ಸಮಸ್ಯೆ, ಟ್ವೀಟ್ ಜೋಕ್ಸ್]

ಒಂದು ಕಾಲದಲ್ಲಿ ಭರತನಾಟ್ಯ, ಮೋಹಿನಿಯಾಟ್ಟಂ, ಮಣಿಪುರಿ, ಕಥಕ್ ನೃತ್ಯ ಶೈಲಿಯಲ್ಲಿ ನರ್ತಿಸುತ್ತಿದ್ದ ಜಯಲಲಿತಾ ಅವರು ಎಂಜಿ ರಾಮಚಂದ್ರನ್ ಅವರ ನಂತರ ಸಿಎಂ ಪಟ್ಟಕ್ಕೇರಿದ ಮೇಲೆ ಆರೋಗ್ಯ ಮೇಲೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗಲಿಲ್ಲ.[ಸಿಂಗಪುರಕ್ಕೆ ಹೋಗ್ಲಿ ಎಂದಿದ್ದು ಬದ್ಧವೈರಿ ಸ್ವಾಮಿ!]

ಜಯಲಲಿತಾ ಅವರಿಗೆ ಏನೇನು ಕಾಯಿಲೆ ಇದೆ ಎಂಬುದರ ಬಗ್ಗೆ ಊಹಾಪೋಹ ಸುದ್ದಿಗಳು ಹಬ್ಬುತ್ತಲೇ ಇರುತ್ತದೆ. ಇಲ್ಲಿ ತನಕ ಎಐಎಡಿಎಂಕೆ ಕೂಡಾ ಈ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ.[ಜಯಲಲಿತಾಗೆ ಸಿಂಗಪುರದಲ್ಲಿ ಹೆಚ್ಚಿನ ಚಿಕಿತ್ಸೆ]

ವಿರೋಧ ಪಕ್ಷದವರು ಮಾತ್ರ ಆಗಾಗ ಅಧಿಕೃತ ವೈದ್ಯರಂತೆ ಸುದ್ದಿ ಹಬ್ಬಿಸಿ ಆತಂಕ ಮೂಡಿಸುವುದು ತಪ್ಪಿಲ್ಲ. ಪುರಚ್ಚಿ ತಲೈವಿ ಜಯಲಲಿತಾ ಅವರ ಅನಾರೋಗ್ಯದ ಬಗ್ಗೆ ಬಂದಿರುವ ಗಾಳಿಸುದ್ದಿ ಹಾಗೂ ನಿಜವಾದ ಇರುವ ಕಾಯಿಲೆಗಳತ್ತ ವಿವರಣೆ ಮುಂದಿದೆ..

ಜಯಲಲಿತಾ ಅವರಿಗೆ ಜಲ ಸಂಬಂಧಿ ಸಮಸ್ಯೆ

ಜಯಲಲಿತಾ ಅವರಿಗೆ ಜಲ ಸಂಬಂಧಿ ಸಮಸ್ಯೆ

ತಮಿಳುನಾಡಿನ ಮುಖ್ಯಮಂತ್ರಿ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಜಯಲಲಿತಾ ಅವರು ಜಲ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಗುರುವಾರ ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ನಿತ್ರಾಣರಾಗಿದ್ದ ಜಯಲಲಿತಾ ಅವರಿಗೆ ಜ್ವರ ಕೂಡಾ ಕಾಡುತ್ತಿದೆ. ರಾಹುಕಾಲ ಕಳೆದುಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂಬ ಸುದ್ದಿ ಬಂದಿದೆ.

ಜೆ ಜಯಲಲಿತಾ ಅವರಿಗೆ ವಯೋ ಸಹಜ ಕಾಯಿಲೆಗಳಿವೆ

ಜೆ ಜಯಲಲಿತಾ ಅವರಿಗೆ ವಯೋ ಸಹಜ ಕಾಯಿಲೆಗಳಿವೆ

ಜೆ ಜಯಲಲಿತಾ ಅವರಿಗೆ ಸ್ಥೂಲ ಕಾಯದಿಂದ ಬೆನ್ನು ನೋವು, ರಕ್ತದೊತ್ತಡ, ಸಕ್ಕರೆ ಕಾಯಿಲೆ ಇದೆ. ಅನೇಕ ವರ್ಷಗಳಿಂದ ಈ ಸಮಸ್ಯೆಯಿಂದ ಬಳಲುತ್ತಿದ್ದು, ಅವರು ನಿಯಮಿತವಾಗಿ ಆಹಾರ ಸೇವಿಸುವುದು ಅನಿವಾರ್ಯವಾಗಿದೆ. ಬೆಂಗಳೂರಿನ ಜೈಲಿನಲ್ಲಿದ್ದಾಗಲೂ ಮನೆ ಆಹಾರಕ್ಕಾಗಿ ಇದೇ ಕಾರಣಕ್ಕೆ ಮನವಿ ಸಲ್ಲಿಸಲಾಯಿತು.

ಜಯಲಲಿತಾ ಅವರ ಕಿಡ್ನಿ ಕಾರ್ಯ ನಿರ್ವಹಿಸುತ್ತಿಲ್ಲವೇ?

ಜಯಲಲಿತಾ ಅವರ ಕಿಡ್ನಿ ಕಾರ್ಯ ನಿರ್ವಹಿಸುತ್ತಿಲ್ಲವೇ?

ಜಯಲಲಿತಾ ಅವರ ಕಿಡ್ನಿ ನಿರ್ವಹಿಸುತ್ತಿಲ್ಲ. ಅವರು ಸಿಂಗಪುರಕ್ಕೆ ತೆರಳಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಾರೆ ಎನ್ನಲಾಗಿತ್ತು. ನಂತರ ಅಮೆರಿಕದ ಟೆಕ್ಸಾಸ್ ಗೆ ತೆರಳಿ ಬದಲಿ ಕಿಡ್ನಿ ಜೋಡಣೆ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ ಎಂದು ತೆಹಲ್ಕಾ ವರದಿ ಮಾಡಿತ್ತು.

2014ರಲ್ಲಿ ತೀವ್ರಗೊಂಡಿದ್ದ ಅನಾರೋಗ್ಯ ಸಮಸ್ಯೆ

2014ರಲ್ಲಿ ತೀವ್ರಗೊಂಡಿದ್ದ ಅನಾರೋಗ್ಯ ಸಮಸ್ಯೆ

2014ರಲ್ಲಿ ಅನಾರೋಗ್ಯ ಸಮಸ್ಯೆತೀವ್ರಗೊಂಡು ಕಚೇರಿ ಕೆಲಸ ನಿರ್ವಹಿಸಲು ಆಗದೆ, ಮನೆಯಲ್ಲೇ ಕಚೇರಿ ಮಾಡಿಕೊಂಡು ಯಾರಿಗೂ ದರ್ಶನ ನೀಡದಂತೆ ಗೌಪ್ಯವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಬಗ್ಗೆ ಡಿಎಂಕೆ ಪ್ರಶ್ನಿಸಿತ್ತು. ಜಯಲಲಿತಾ ಅವರ ಕಾಯಿಲೆ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸುವಂತೆ ಎಐಎಡಿಎಂಕೆಗೆ ಆಗ್ರಹಿಸಿತ್ತು.

ಜಯಲಲಿತಾರಿಗೆ ಸೂಕ್ತ ಚಿಕಿತ್ಸೆ ಬೇಕಿದೆ

ಜಯಲಲಿತಾರಿಗೆ ಸೂಕ್ತ ಚಿಕಿತ್ಸೆ ಬೇಕಿದೆ

68 ವರ್ಷ ವಯಸ್ಸಿನ ಜಯಲಲಿತಾರಿಗೆ ಸೂಕ್ತ ಚಿಕಿತ್ಸೆ ಬೇಕಿದೆ, ಸರಿಯಾಗಿ ನಡೆಯಲು ಸಾಧ್ಯವಿಲ್ಲ, ಕಾಲಿಗೆ ಗ್ಯಾಂಗ್ರಿನ್ ಆಗಿದೆ, ಹೀಗಾಗಿ ಹೆಚ್ಚಿನ ಕಾರ್ಯಕ್ರಮಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸುತ್ತಿದ್ದಾರೆ ಎಂದು ಟೆಲಿಗ್ರಾಫ್ ವರದಿ ಮಾಡಿತ್ತು. ಮಾಧ್ಯಮಗಳ ವರದಿ ವಿರುದ್ಧ ಎಐಎಡಿಎಂಕೆ ಅನೇಕ ಬಾರಿ ಹೋರಾಟ ನಡೆಸಿ ಸೋತಿರುವುದು ಸುಳ್ಳಲ್ಲ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
How ill is Amma J Jayalalithaa. Chief Minister Jayalalitha has some illness which she never declared openly. While the AIADMK bravely defends its leader and Jayalalithaa maintains silence
Please Wait while comments are loading...