ಶೂದ್ರರೆಲ್ಲ ವೇಶ್ಯೆಯರ ಮಕ್ಕಳು ಎಂದ ಡಿಎಂಕೆ ನಾಯಕ ಎ ರಾಜಾ!
ಚೆನ್ನೈ, ಸೆಪ್ಟೆಂಬರ್ 14: ತಮಿಳುನಾಡಿನಲ್ಲಿ ಶೂದ್ರರ ಬಗ್ಗೆ ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಎ ರಾಜಾ ನೀಡಿರುವ ಹೇಳಿಕೆ ವಿವಾದವನ್ನು ಹುಟ್ಟು ಹಾಕಿದೆ. ಕೇಸರಿ ಪಕ್ಷವು ಇತರರನ್ನು ಸಮಾಧಾನಪಡಿಸುವುದಕ್ಕೆ ಸಮುದಾಯದ ವಿರುದ್ಧ ದ್ವೇಷವನ್ನು ಹುಟ್ಟು ಹಾಕುತ್ತಿದ್ದಾರೆ ಎನ್ನುವ ಮೂಲಕ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
''ಮನುಸ್ಮೃತಿಯಲ್ಲಿ ಶೂದ್ರರನ್ನು ಅವಮಾನಿಸಲಾಗಿದೆ. ಸಮಾನತೆ, ಶಿಕ್ಷಣ, ಉದ್ಯೋಗ ಮಾತ್ರವದಲ್ಲದೇ ದೇವಾಲಯಗಳಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ'' ಎಂದು ನೀಲಗಿರಿ ಸಂಸದ ಎ ರಾಜಾ ಹೇಳಿಕೆ ನೀಡಿದ್ದಾರೆ.
ದ್ರಾವಿಡರ್ ಕಳಗಂ ಸಭೆಯನ್ನುದ್ದೇಶಿಸಿ ಮಾತನಾಡಿದ ಎ ರಾಜಾ, "ಹಿಂದೂ ಆಗಿ ಉಳಿಯುವವರೆಗೂ ನೀನು ಶೂದ್ರ. ಶೂದ್ರನಾಗಿ ಉಳಿಯುವವರೆಗೂ ನೀನು ವೇಶ್ಯೆಯ ಮಗ. ಹಿಂದೂ ಆಗಿ ಉಳಿಯುವವರೆಗೂ ನೀನು ಪಂಚಮ (ದಲಿತ). ಹಿಂದೂ ಆಗಿ ಉಳಿಯುವವರೆಗೂ ನೀನು ಅಸ್ಪೃಶ್ಯ," ಎಂದು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೆ ವೈರಲ್:
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, "ನಿಮ್ಮಲ್ಲಿ ಎಷ್ಟು ಮಂದಿ ವೇಶ್ಯೆಯರ ಮಕ್ಕಳಾಗಿ ಉಳಿಯಲು ಬಯಸುತ್ತೀರಿ? ನಿಮ್ಮಲ್ಲಿ ಎಷ್ಟು ಮಂದಿ ಅಸ್ಪೃಶ್ಯರಾಗಿ ಉಳಿಯಲು ಬಯಸುತ್ತೀರಿ? ಈ ಪ್ರಶ್ನೆಗಳ ಬಗ್ಗೆ ನಾವು ಧ್ವನಿ ಎತ್ತಿದರೆ ಮಾತ್ರ ಅದು ಸನಾತನ ಧರ್ಮ ಒಡೆಯುವ ಅಂಶವಾಗುತ್ತದೆ," ಎಂದರು. ಒಬ್ಬ ವ್ಯಕ್ತಿ ತಾನು ಕ್ರಿಶ್ಚಿಯನ್, ಮುಸ್ಲಿಂ ಅಥವಾ ಪರ್ಷಿಯನ್ ಆಗಿಲ್ಲದಿದ್ದರೆ, ಅವನು ಹಿಂದೂವೇ ಆಗಿರಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ ಎಂದು ಮಾಜಿ ಕೇಂದ್ರ ಸಚಿವರು ಹೇಳಿದ್ದಾರೆ. "ಇಂತಹ ಕ್ರೌರ್ಯವನ್ನು ಬೇರೆ ಯಾವುದಾದರೂ ದೇಶವು ಎದುರಿಸುತ್ತಿದೆಯೇ?" ಎಂದಿದ್ದಾರೆ.
ಶೂದ್ರರನ್ನು ಏಕೆ ಅವಮಾನಿಸಲಾಗಿದೆ?:
"ಶೂದ್ರರು ಯಾರು? ಅವರು ಹಿಂದೂಗಳಲ್ಲವೇ? ಮನುಸ್ಮೃತಿಯಲ್ಲಿ ಅವರನ್ನು ಏಕೆ ಅವಮಾನಿಸಲಾಗಿದೆ ಮತ್ತು ಹಿಂದೂಗಳ ಸಮಾನತೆ, ಶಿಕ್ಷಣ, ಉದ್ಯೋಗ ಮತ್ತು ದೇವಾಲಯ ಪ್ರವೇಶವನ್ನು ಏಕೆ ನಿರಾಕರಿಸಲಾಗಿದೆ, ಇದನ್ನು ಹಿಂದೂ ವಿರೋಧಿಗಳು ಪ್ರಶ್ನಿಸಿ ಮತ್ತು ಸರಿಪಡಿಸಲು ಸಾಧ್ಯವಿಲ್ಲ," ಎಂದು ಎ ರಾಜಾ ಟ್ವೀಟ್ ಮಾಡಿದ್ದಾರೆ.
"ಇತರರನ್ನು ಸಮಾಧಾನಪಡಿಸುವ ಏಕೈಕ ಉದ್ದೇಶದಿಂದ ಒಂದು ಸಮುದಾಯದ ವಿರುದ್ಧ ಮತ್ತೊಮ್ಮೆ ದ್ವೇಷವನ್ನು ಹೊರಹಾಕಿದ್ದಾರೆ. ತಮಿಳುನಾಡು ಅವರದೇ ಎಂದು ಭಾವಿಸುವುದು ಈ ರಾಜಕೀಯ ನಾಯಕರ ದುರದೃಷ್ಟಕರ ಮನಸ್ಥಿತಿ," ಎಂದು ಅವರು ಟ್ವೀಟ್ ಮಾಡಿದ್ದಾರೆ.
ಎ ರಾಜಾ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ:
ಡಿಎಂಕೆ ನಾಯಕ ಎ ರಾಜಾ ನೀಡಿದ ಹೇಳಿಕೆಯು "ತಮಿಳುನಾಡಿನ ರಾಜಕೀಯ ಭಾಷಣದ ಒಂದು ವಿಷಾದನೀಯ ಸ್ಥಿತಿ" ಎಂದು ಬಿಜೆಪಿಯ ರಾಜ್ಯ ಮುಖ್ಯಸ್ಥ ಅಣ್ಣಾಮಲೈ ಬಣ್ಣಿಸಿದ್ದಾರೆ.
ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಮಾತನಾಡಿ, ರಾಜಾ ಅನೇಕ ಸಂದರ್ಭಗಳಲ್ಲಿ ಮಹಿಳೆಯರು ಮತ್ತು ಹಿಂದೂಗಳನ್ನು ಅವಮಾನಿಸಿದ್ದಾರೆ. ಈ ಬಾರಿಯೂ ಶೂದ್ರರೆಲ್ಲ ವೇಶ್ಯೆಯರ ಮಕ್ಕಳೆಂದೂ, ಅವರು ಹಿಂದೂ ಧರ್ಮದಲ್ಲಿ ಉಳಿಯುವವರೆಗೂ ಹಾಗೆಯೇ ಇರುತ್ತಾರೆ ಎಂದಿದ್ದಾರೆ ಅಂತಾ ದೂಷಿಸಿದರು.
Who are Sudras? Are they not Hindus? Why they have been insulted in Manusmrithi denied equality, education, employment and Temple entry. Dravidian Movement as saviour of 90% Hindus questioned and redressed these, cannot be anti-Hindus.
— A RAJA (@dmk_raja) September 13, 2022












Click it and Unblock the Notifications