ತಮಿಳು ನಟ ವಿಶಾಲ್ ನಿರ್ಮಾಣ ಸಂಸ್ಥೆ ಮೇಲೆ ಜಿಎಸ್ಟಿ ದಾಳಿ
ಚೆನ್ನೈ, ಅಕ್ಟೋಬರ್ 23: ಜಿಎಸ್ಟಿ ಗುಪ್ತಚರ ವಿಭಾಗದ ತಂಡವೊಂದು ವಿಶಾಲ್ ಫಿಲ್ಮ್ ಫ್ಯಾಕ್ಟರಿ ಮೇಲೆ ಮೇಲೆ ದಾಳಿ ನಡೆಸಿದೆ. ತಮಿಳುನಾಡು ಸಿನಿಮಾ ನಿರ್ಮಾಪಕ ಸಂಘದ ಅಧ್ಯಕ್ಷ ನಟ ವಿಶಾಲ್ ಗೆ ಸೇರಿದ ನಿರ್ಮಾಣ ಸಂಸ್ಥೆ ಇದಾಗಿದೆ.
#Visuals from office of actor Vishal being raided in Chennai. More details awaited. #TamilNadu pic.twitter.com/8nOEElCXyP
— ANI (@ANI) October 23, 2017
ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ದಾಳಿ ನಡೆದಿದೆ. ವಡಪಳನಿಯಲ್ಲಿರುವ ಕಚೇರಿಯ ಮೇಲೆ ಈ ದಾಳಿ ನಡೆದಿದೆ. ಆರಂಭದಲ್ಲಿ ಇದನ್ನು ಆದಾಯ ತೆರಿಗೆ ಇಲಾಖೆ ದಾಳಿ ಎನ್ನಲಾಗಿತ್ತು. ಆದರೆ ನಂತರ ಇದು ಜಿಎಸ್ಟಿ ಗುಪ್ತಚರ ಇಲಾಖೆ ದಾಳಿ ಎಂದು ಗೊತ್ತಾಗಿತ್ತು.

ಹಣ ಪಾವತಿಗಳಲ್ಲಿ ಜಿಎಸ್ಟಿ ತಪ್ಪಿಸಲಾಗಿತ್ತೇ ಎಂಬುದನ್ನು ಕಂಡು ಹಿಡಿಯಲು ಈ ದಾಳಿ ನಡೆಸಲಾಗಿದೆ. ದಾಳಿ ವೇಳೆ ಅಗತ್ಯ ದಾಖಲೆಗಳನ್ನು ಅಧಿಕಾರಿಗಳ ಮುಂದಿಡಲಾಗಿದೆ. ಸರಕು ಮತ್ತು ಸೇವಾ ತೆರಿಗೆ ತಪ್ಪಿಸುತ್ತಿರುವವರನ್ನು ಪತ್ತೆ ಹಚ್ಚಲು ಜಿಎಸ್ಪಿ ಗುಪ್ತಚರ ಇಲಾಖೆಯನ್ನು ರಚಿಸಲಾಗಿದೆ.












Click it and Unblock the Notifications