ಆರ್ ಕೆ ನಗರ ಅಖಾಡಕ್ಕೆ ಇಳಯರಾಜ ಅವರ ಸೋದರ ಎಂಟ್ರಿ!

Posted By:
Subscribe to Oneindia Kannada

ಚೆನ್ನೈ, ಮಾರ್ಚ್ 17: ಇಲ್ಲಿನ ಆರ್ ಕೆ ನಗರ ಬೈ ಎಲೆಕ್ಷನ್ ಬಿಸಿ ದಿನೇ ದಿನೇ ಹೆಚ್ಚಾಗುತ್ತಿದೆ. ಬಿಜೆಪಿ ಶುಕ್ರವಾರದಂದು ತನ್ನ ಸ್ಪರ್ಧಿಯನ್ನು ಹೆಸರಿಸಿದೆ.

ಸಂಗೀತ ದಿಗ್ಗಜ ಇಳಯರಾಜ ಅವರ ಕಿರಿಯ ಸೋದರ ಸಂಗೀತಗಾರ ಗಂಗೈ ಅಮರನ್ ಅವರು ಕಣಕ್ಕಿಳಿಸಲಾಗಿದೆ. ಶಶಿಕಲಾ ನಟರಾಜನ್ ಕುಟುಂಬದಿಂದ ನೇರವಾಗಿ ತೊಂದರೆಗೊಳಪಟ್ಟವರ ಪೈಕಿ ಗಂಗೈ ಅಮರನ್ ಕೂಡಾ ಒಬ್ಬರು.[ದಿನಕರನ್ AIADMK ಆರ್ ಕೆ ನಗರ್ ಅಭ್ಯರ್ಥಿ!]

Gangai Amaran contests in RK Nagar as a BJP candidate

ಶಶಿಕಲಾ ಅವರು ಜಯಲಲಿತಾ ಅವರ ಅಧಿಕಾರ ಬಲದಿಂದ ಗಂಗೈ ಅಮರನ್ ಅವರಿಗೆ ಸೇರ ಮನೆಯನ್ನು ವಶಪಡಿಸಿಕೊಂಡಿದ್ದರು. ಸಿರುತಾವೂರ್ ನಲ್ಲಿದ್ದ ಬಂಗಲೆ ಖಾಲಿಯಾದ ಬಳಿಕ ಮೋದಿ ಅಲೆಯನ್ನು ಕಂಡು 2014ರಲ್ಲಿ ಬಿಜೆಪಿ ಸೇರಿದ ಅಮರನ್ ಅವರಿಗೆ ಈಗ ಆರ್ ಕೆ ನಗರದಲ್ಲಿ ಸ್ಪರ್ಧಿಸಿ ಸೇಡು ತೀರಿಸಿಕೊಳ್ಳುವ ಅವಕಾಶ ನೀಡಲಾಗಿದೆ. ಟಿಟಿವಿ ದಿನಕರನ್ ಗೆ ನೇರ ಸ್ಪರ್ಧೆ ನೀಡಿ, ಗೆಲುವು ದಾಖಲಿಸುವೆ ಎಂದು ಗಂಗೈ ಅಮರನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಳಯರಾಜ ಅವರ ಕಿರಿಯ ಸೋದರ ಗಣೇಶ್ ಕುಮಾರ್ ಗಂಗೈ ಅಮರನ್ ಅವರು ಗಾಯಕ, ಸಾಹಿತಿ, ಚಿತ್ರಕಥೆಗಾರ, ನಿರ್ದೇಶಕ, ಸಂಗೀತ ನಿರ್ದೇಶಕ, ನಟನಾಗಿ ತಮಿಳುನಾಡು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಗಂಗೈ ಅಮರನ್ ಅವರ ಪುತ್ರ ವೆಂಕಟ್ ಪ್ರಭು ನಿರ್ದೇಶಕರಾಗಿದ್ದರೆ ಮತ್ತೊಬ್ಬ ಮಗ ಪ್ರೇಮ್ಜಿ ಅಮರನ್ ನಟ, ಸಂಗೀತಗಾರರಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Noted Music director Gangai Amaran has been fielded as a BJP candidate for RK Nagar By election by the party today. He is the younger brother of Maestro Ilayaraja. Gangai Amaran was directly affected the Sasikala's family earlier.
Please Wait while comments are loading...