ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1,526 ಕೋಟಿ ಮೌಲ್ಯದ ಡ್ರಗ್ಸ್ ವಶ: ಪಾಕಿಸ್ತಾನದ ನಂಟು?

|
Google Oneindia Kannada News

ಚೆನ್ನೈ, ಮೇ 22: ಲಕ್ಷದ್ವೀಪಗಳ ಕರಾವಳಿಯಲ್ಲಿ ವಶಪಡಿಸಿಕೊಂಡ 1,526 ಕೋಟಿ ಮೌಲ್ಯದ 218 ಕೆ.ಜಿ. ಡ್ರಗ್ ಸಾಗಾಟದಲ್ಲಿ ಪಾಕಿಸ್ತಾನದ ನಂಟಿದೆ ಎಂದು ಕಂದಾಯ ಗುಪ್ತಚರ ಇಲಾಖೆ ಹೇಳಿದೆ.

ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‍‌ಐ) ಮತ್ತು ಭಾರತೀಯ ಕರಾವಳಿ ಪಡೆ (ಐಜಿಸಿ) ಜಂಟಿಯಾಗಿ ನಡೆಸಿದ 'ಆಪರೇಷನ್ ಖೋಜ್‌ಬೀನ್' ಹೆಸರಿನ ಕಾರ್ಯಾಚರಣೆ ವೇಳೆ ಅಪಾರ ಪ್ರಮಾಣದ ಮಾದಕವಸ್ತು ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮತ್ತು ತಮಿಳುನಾಡಿನಲ್ಲಿ ಕಂದಾಯ ಗುಪ್ತಚರ ಇಲಾಖೆ ದಾಳಿ ನಡೆಸಿದೆ.

ಪಿಪಾವಾವ್ ಬಂದರಿನಲ್ಲಿ 450 ಕೋಟಿ ಮೌಲ್ಯದ ಹೆರಾಯಿನ್ ಪತ್ತೆಪಿಪಾವಾವ್ ಬಂದರಿನಲ್ಲಿ 450 ಕೋಟಿ ಮೌಲ್ಯದ ಹೆರಾಯಿನ್ ಪತ್ತೆ

ಈಗ ಸಿಕ್ಕಿಬಿದ್ದಿರುವ ಡ್ರಗ್‌ ಗ್ಯಾಂಗ್‌ಗೆ ಪಾಕಿಸ್ತಾನದ ಸಂಪರ್ಕವಿದೆ ಎಂದು ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ. ಸಿಕ್ಕಿಬಿದ್ದಿರುವ ನಾಲ್ವರು ಆರೋಪಿಗಳು ಪಾಕಿಸ್ತಾನದ ಡ್ರಗ್ಸ್ ಜಾಲದೊಂದಿದೆ ನಂಟು ಹೊಂದಿರುವುದಾಗಿ ಅಧಿಕಾರಿಗಳ ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ವರದಿಯಾಗಿದೆ.

ಅಧಿಕಾರಿಗಳು ವಶಪಡಿಸಿಕೊಂಡಿರುವ ಹೆರಾಯಿನ್ ತುಂಬಿದ್ದ ಚೀಲಗಳಲ್ಲಿ ಪಾಕಿಸ್ತಾನದ ಸಂಬಂಧವನ್ನು ಸೂಚಿಸುವ ಬರಹಗಳು ಕಂಡುಬಂದಿವೆ ಎನ್ನಲಾಗಿದೆ. ತಿರುವನಂತಪುರ ಮೂಲದ ಇಬ್ಬರು ಮೀನುಗಾರರ ಕೈವಾಡದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

'ಆಪರೇಷನ್ ಖೋಜ್‌ಬೀನ್' ಕಾರ್ಯಾಚರಣೆ

'ಆಪರೇಷನ್ ಖೋಜ್‌ಬೀನ್' ಕಾರ್ಯಾಚರಣೆ

ಮೇ 3ನೇ ವಾರದಲ್ಲಿ ತಮಿಳುನಾಡು ಕರಾವಳಿಯಿಂದ ಹೊರಡುವ ಎರಡು ಭಾರತೀಯ ಭಾರತೀಯ ದೋಣಿಗಳು ಅರಬ್ಬೀ ಸಮುದ್ರದ ಯಾವುದೋ ಒಂದು ಭಾಗದಲ್ಲಿ ಭಾರಿ ಪ್ರಮಾಣದ ಮಾದಕ ದ್ರವ್ಯಗಳನ್ನು ಸ್ವೀಕರಿಸುತ್ತವೆ ಎಂದು ಡಿಆರ್‌ಐಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು.

ಖಚಿತ ಮಾಹಿತಿ ಮೇರೆಗೆ 'ಆಪರೇಷನ್ ಖೋಜ್‌ಬೀನ್‌' ಅನ್ನು ಮೇ 7ರಂದು ಪ್ರಾರಂಭಿಸಲಾಗಿತ್ತು. ಡಿಆರ್‌ಐ ಅಧಿಕಾರಿಗಳು ಕರಾವಳಿ ರಕ್ಷಣಾ ಪಡೆದ 'ಸುಜಿತ್' ಹಡಗಿನಲ್ಲಿ, ವಿಶೇಷ ಆರ್ಥಿಕ ವಲಯದಲ್ಲಿ ನಿಗಾ ಇರಿಸಿದ್ದರು. ಮೇ 18ರಂದು 'ಪ್ರಿನ್ಸ್' ಮತ್ತು 'ಲಿಟಲ್ ಜೀಸಸ್' ಹೆಸರಿನ ಎರಡು ದೋಣಿಗಳು ಭಾರತ ಕಡೆ ಚಲಿಸುವಾಗ ಅನುಮಾನದ ಮೇಲೆ ಅವುಗಳನ್ನು ಹಿಂಬಾಲಿಸಿ ವಶಕ್ಕೆ ಪಡೆದಿದ್ದರು.

20 ಆರೋಪಿಗಳಿಗೆ ನ್ಯಾಯಾಂಗ ಬಂಧನ

20 ಆರೋಪಿಗಳಿಗೆ ನ್ಯಾಯಾಂಗ ಬಂಧನ

ಮೀನುಗಾರಿಕಾ ದೋಣಿಯಲ್ಲಿದ್ದ ತಮಿಳುನಾಡಿನ ನಾಲ್ವರು, ಕೇರಳದ ಇಬ್ಬರನ್ನು ವಶಕ್ಕೆ ವಿಚಾರಣೆ ನಡೆಸಲಾಗುತ್ತಿದೆ. ತನಿಖೆಯ ಬಗ್ಗೆ ಮಾಹಿತಿ ಬಹಿರಂಗಪಡಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಈವರೆಗೆ ಪ್ರಕರಣ ಸಂಬಂಧ 20 ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರನ್ನು ಕೇರಳದ ತೊಪ್ಪುಂಪಾಡಿ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಪಾಕಿಸ್ತಾನ, ಎಲ್‌ಟಿಟಿಇ ಮೇಲೆ ಅನುಮಾನ

ಪಾಕಿಸ್ತಾನ, ಎಲ್‌ಟಿಟಿಇ ಮೇಲೆ ಅನುಮಾನ

ಡಿಆರ್‌ಐ ಮೂಲಗಳ ಪ್ರಕಾರ ವಶಪಡಿಸಿಕೊಂಡ ಹೆರಾಯಿನ್‌ ಮೂಲದ ಬಗ್ಗೆ ಪರಿಶೀಲನೆ ನಡೆಸಿದ್ದು, ಡ್ರಗ್‌ ಪಾಕಿಸ್ತಾನದಲ್ಲಿ ತಯಾರಾಗಿದೆ ಎಂದು ವರದಿಗಳು ಸೂಚಿಸುತ್ತವೆ ಎನ್ನಲಾಗಿದೆ. ಕೊಕೇನ್ ಸಾಗಾಟದಲ್ಲಿ ಎಲ್‌ಟಿಟಿಇ ಮಾಜಿ ಕಾರ್ಯಕರ್ತರು ಭಾಗಿಯಾಗಿರುವ ಬಗ್ಗೆ ಕೇಂದ್ರ ಗುಪ್ತಚರ ಸಂಸ್ಥೆ ತನಿಖೆ ನಡೆಸುತ್ತಿದೆ.

ಕೆಲ ತಿಂಗಳ ಹಿಂದೆ ಚೆನ್ನೈನಿಂದ ಮುಂಬೈಗೆ ವಿಮಾನದಲ್ಲಿ ತೆರಳಲು ಪ್ರಯತ್ನಿಸುತ್ತಿದ್ದಾಗ ಮಾಜಿ ಎಲ್‌ಟಿಟಿಇ ಕಾರ್ಯಕರ್ತನೊಬ್ಬನನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಶ್ರೀಲಂಕಾದಲ್ಲಿ ಎಲ್‌ಟಿಟಿಇ ಮರುಸಂಘಟಿಸಲು ಮಾದಕವಸ್ತು ಕಳ್ಳಸಾಗಾಣೆ ಮೂಲಕ ಹಣ ಸಂಗ್ರಹಕ್ಕೆ ಯತ್ನಿಸಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.

ಒಂದು ತಿಂಗಳಲ್ಲಿ ಅಪಾರ ಪ್ರಮಾಣದ ಡ್ರಗ್‌ ವಶ

ಒಂದು ತಿಂಗಳಲ್ಲಿ ಅಪಾರ ಪ್ರಮಾಣದ ಡ್ರಗ್‌ ವಶ

ಏಪ್ರಿಲ್ 20ರಂದು ಕಾಂಡ್ಲಾ ಬಂದರಿನಲ್ಲಿ ಜಿಪ್ಸಂ ಪೌಡರ್‌ನಿಂದ 205 ಕೆ.ಜಿ. ಹೆರಾಯಿನ್, ಏಪ್ರಿಲ್ 29ರಂದು ಪಿಪಾವಾವ್ ಬಂದರಿನಲ್ಲಿ 396 ಕೆಜಿ ಹೆರಾಯಿನ್ ಲೇಪಿತ ದಾರ ಮತ್ತು ಮೇ 10ರಂದು ನವದೆಹಲಿಯ ಏರ್‌ಕಾರ್ಗೋ ಕಾಂಪ್ಲೆಕ್ಸ್‌ನಲ್ಲಿ 62 ಕೆ.ಜಿ. ಹೆರಾಯಿನ್‌ ವಶಪಡಿಸಿಕೊಂಡಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಮಾದಕದ್ರವ್ಯದ ಬೆಲೆ 2,500 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಏಪ್ರಿಲ್ 2021ರಿಂದ ಇಲ್ಲಿಯವರೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 26,000 ಕೋಟಿ ಮೌಲ್ಯದ 3,800 ಕೆ.ಜಿ. ಹೆರಾಯಿನ್ ಅನ್ನು ಡಿಆರ್‌ಐ ವಶಪಡಿಸಿಕೊಂಡಿದೆ. 3,500 ಕೋಟಿ ರೂ. ಮೌಲ್ಯದ 350 ಕೆ.ಜಿ. ಕೊಕೇನ್‌ ಅನ್ನು ಕೂಡ ಡಿಆರ್‌ಐ ವಶಪಡಿಸಿಕೊಂಡಿದೆ.

English summary
In search of drugs worth Rs 1,526 crore in international markets, the team was also in the middle of cross-checking the heroin's origin, with reports indicating that the drug originated in Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X