ಕಾವೇರಿ ಜಲಮಂಡಳಿ ರಚನೆ ಕುರಿತು ಮೋದಿಗೆ ಕಮಲ್ ವಿಡಿಯೋ ಸಂದೇಶ

Posted By:
Subscribe to Oneindia Kannada

ಚೆನ್ನೈ, ಏಪ್ರಿಲ್ 12: ಕಾವೇರಿ ಜಲ ನಿರ್ವಹಣಾ ಮಂಡಳಿ ರಚಿಸಲು ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವ ಕುರಿತು ತಮಿಳುನಾಡಿನಾದ್ಯಂತ ಎದ್ದಿರುವ ಆಕ್ರೋಶದ ಕೂಗಿಗೆ ನಟ, ರಾಜಕಾರಣಿ ಕಮಲ್ ಹಾಸನ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಕಮಲ್ ಹಾಸನ್ ಕಟ್ಟಿದ ಮಕ್ಕಳ್ ನೀತಿ ಮೈಯಮ್(ಎಂಎನ್ ಎಂ) ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯಿಂದ ವಿಡಿಯೋ ಸಂದೇಶ ಕಳಿಸಿರುವ ಅವರು, 'ಪ್ರಧಾನಿ ಮೋದಿಯವರೇ ನಿಮಗೆ ತಮಿಳುನಾಡಿನಲ್ಲಿ ಎದ್ದಿರುವ ಜಲವಿವಾದದ ಬಗ್ಗೆ ಎಲ್ಲವೂ ಗೊತ್ತಿದೆ. ನಿಮ್ಮ ಹಲವು ವರ್ಷಗಳ ರಾಜಕೀಯ ಅನುಭವದಿಂದ ನರ್ಮದಾ ನದಿ ನೀರು ನಿರ್ವಹಣಾ ಮಂಡಳಿಯಂತೆ ಈ ಪ್ರಕರಣದಲ್ಲೂ ನೀವು ಸುಲಭವಾಗಿ ನ್ಯಾಯ ಒದಗಿಸಬಹುದಿತ್ತು' ಎಂದಿದ್ದಾರೆ.

'ಗೋ ಬ್ಯಾಕ್ ಮೋದಿ...' ತಮಿಳು ನಾಡಲ್ಲಿ ಮೋದಿಗೆ ಧಿಕ್ಕಾರದ ಸ್ವಾಗತ!

"ಕರ್ನಾಟಕದಲ್ಲಿ ಮೇ.12 ರಂದು ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಕಾವೇರಿ ಜಲಮಂಡಳಿ ನಿರ್ಮಾಣದಲ್ಲಿ ವಿಳಂಬವಾಗುತ್ತಿದೆ ಎನ್ನಿಸುತ್ತಿದೆ. ಚುನಾವಣೆಗಳಿಗಿಂತ ಜನರು ಮುಖ್ಯ ಎಂಬುದು ಎಲ್ಲರಿಗೂ ಅರ್ಥವಾಗಬೇಕಿದೆ. ಕಾವೇರಿ ಜಲ ನಿರ್ವಹಣ ಮಂಡಳಿಯನ್ನು ತಕ್ಷಣವೇ ನಿರ್ಮಿಸುವ ಮೂಲಕ ನೀವು ತಮಿಳುನಾಡಿನ ಜನರ ಮತ್ತು ರೈತರ ಸಮಸ್ಯೆಗಳನ್ನು ಆಲಿಸುತ್ತೀರಾ ಎಂದು ನಾನು ನಂಬುತ್ತೇನೆ" ಎಂದು ಅವರು ಈ ವಿಡಿಯೋದಲ್ಲಿ ಹೇಳಿದ್ದಾರೆ.

ಕಾವೇರಿ ನದಿ ಹಂಚಿಕೆ ಕುರಿತಂತೆ ಅನಂತ್ ನಾಗ್ ವಿಡಿಯೋ

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಫೆ.16 ರಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನಲ್ಲಿ, ತೀರ್ಪು ಬಂದ ಆರುವಾರಗಳ ಒಳಗೆ ಕಾವೇರಿ ಜಲ ನಿರ್ವಹಣ ಮಂಡಳಿ ರಚಿಸುವಂತೆ ಆದೇಶ ನೀಡಿತ್ತು. ಆದರೆ ಇದುವರೆಗೂ ಕಾವೇರಿ ನಿರ್ವಹಣ ಮಂಡಳಿಯನ್ನು ಕುರಿತಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಯಾವುದೇ ಮಾಹಿತಿ ನೀಡಿಲ್ಲ. ಈ ಮೂಲಕ ಕೇಂದ್ರ ಸರ್ಕಾರ ನ್ಯಾಯಾಂಗ ನಿಂದನೆ ಮಾಡಿದೆ ಎಂದು ತಮಿಳುನಾಡು ದೂರಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Actor-turned-politician Kamal Haasan on Thursday recorded an open message for Prime Minister Narendra Modi, asking for justice to Tamil Nadu over the Cauvery water dispute. Taking to his Twitter handle, the Makkal Needhi Maiam (MNM) Chief said, "Sir, I am sure you are aware of the crisis that is gripping Tamil Nadu over the Cauvery water. I believe, from your past experience, you could easily deliver justice in the case of Narmada River Water Board."

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ