ಅತ್ತೆ ಜಯಾ ಮನೆಯತ್ತ ಕಾಲಿಟ್ಟ ದೀಪಾರನ್ನು ತಡೆದ ಸೆಕ್ಯುರಿಟೀಸ್
ಅತ್ತೆ ಜಯಲಲಿತಾ ಅವರ ಮನೆಯತ್ತ ಕಾಲಿಟ್ಟ ದೀಪಾರನ್ನು ತಡೆದ ಸೆಕ್ಯುರಿಟೀಸ್ ತಡೆ ಹಿಡಿದ್ದಾರೆ.
ಚೆನ್ನಿ, ಜೂನ್ 11 : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಜಯಲಲಿತಾ ಅವರ ನಿವಾಸ ಯಾರಿಗೆ ಸೇರಬೇಕು ಎಂಬ ಚರ್ಚೆ ಮತ್ತೆ ಆರಂಭವಾಗಿದೆ.
ಅತ್ತೆ ಜಯಲಲಿತಾ ಅವರ ಚೆನ್ನೈನ ಬಂಗಲೆ ಪೋಯಸ್ ಗಾರ್ಡನ್ ಬಳಿ ಬಂದ ಸೊಸೆ ದೀಪಾ ಜಯಕುಮಾರ್ ಅವರನ್ನು ಅಲ್ಲಿನ ಸೆಕ್ಯುರಿಟಿ ಸಿಬ್ಬಂದಿ, ಒಳ ಪ್ರವೇಶಿಸದಂತೆ ತಡೆದಿದ್ದಾರೆ.

ಜಯಲಲಿತಾ ಅವರ ಅಧಿಕೃತ ನಿವಾಸ ವೇದ ನಿಲಯಂನಲ್ಲಿ ಸದ್ಯಕ್ಕೆ ಯಾರೂ ವಾಸವಿಲ್ಲ. ಮೂರು ಸುತ್ತಿನ ಸೆಕ್ಯುರಿಟಿ ಸಿಬ್ಬಂದಿ ಪಹರೆ ಹಾಕಲಾಗಿದೆ. ದೀಪಾ ಜಯಕುಮಾರ್ ಸೇರಿದಂತೆ ಜಯಾ ಅವರ ಸಿಬ್ಬಂದಿಕರಿಗೂ ಪ್ರವೇಶ ನಿರಾಕರಿಸಲಾಗಿದೆ. ಬಂಗಲೆ ಎದುರು ದೀಪಾ ಅವರ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದು ನನ್ನ ಅತ್ತೆಯ ಮನೆ, ಇದು ನನಗೆ ಸೇರಬೇಕಿದೆ. ಇಲ್ಲಿ ವಾಸಿಸಲು ನನಗೆ ಎಲ್ಲಾ ರೀತಿ ಹಕ್ಕಿದೆ, ನಾನು ಪುರಚ್ಚಿ ತಲೈವಿ ಜಯಾ ಅವರ ಉತ್ತರಾಧಿಕಾರಿ' ಎಂದು ದೀಪಾ ಅವರು ಆಕ್ರೋಶದಿಂದ ಘೋಷಿಸಿದ್ದಾರೆ.
ಜಯಲಲಿತಾ ಅವರ ಆಪ್ತೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಪರಾಧಿ ಎಂದೆನಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ ಬಳಿಕ ಪೋಯಸ್ ಗಾರ್ಡನ್ ನಲ್ಲಿ ಯಾರೂ ನೆಲೆಸಿಲ್ಲ. ಜಯಾ ಅವರ ಉಯಿಲಿನಲ್ಲಿ ಈ ಬಂಗಲೆ ಬಗ್ಗೆ ಸ್ಪಷ್ಟಣೆ ಸಿಗದ ಕಾರಣ, ವಿವಾದ ಮುಂದುವರೆದಿದೆ.(ಒನ್ಇಂಡಿಯಾ ಸುದ್ದಿ)












Click it and Unblock the Notifications