ದಲಿತ ಯುವತಿಯ ಭೀಕರ ಹತ್ಯೆ, ರೇಪ್ ಶಂಕೆ
ತಿರುಚ್ಚಿ (ತಮಿಳುನಾಡು), ಜೂ. 24 : ದಲಿತ ಕೋಮಿಗೆ ಸೇರಿದ ಹದಿನೇಳರ ಯುವತಿಯನ್ನು ಭೀಕರವಾಗಿ ಹತ್ಯೆ ಮಾಡಿ ತೋಟವೊಂದರಲ್ಲಿ ಬಿಸಾಕಿದ ಘಟನೆ ಸೋಮವಾರ ರಾತ್ರಿ ಕರೂರು ಜಿಲ್ಲೆಯ ತಿಚಂಪಟ್ಟಿ ಗ್ರಾಮದಲ್ಲಿ ನಡೆದಿದೆ.
ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಯುವಕರನ್ನು ಪೊಲೀಸರು ಈಗಾಗಲೆ ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. [ಅತ್ಯಾಚಾರಕ್ಕೆ ಕಾರಣ ಯಾರು?]

ರೈತನ ಮಗಳಾದ ಯುವತಿ ಹನ್ನೆರಡನೇ ತರಗತಿಯನ್ನು ಪಾಸ್ ಮಾಡಿ ಕಾಲೇಜು ವ್ಯಾಸಂಗ ಮುಂದುವರಿಸುವವಳಿದ್ದಳು. ಮಾಯನೂರು ಬಳಿಯಿರುವ ಸೊಳ್ಳೆ ಪರದೆ ತಯಾರಿಸುವ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ತನ್ನ ಊರಿನಿಂದ ಫ್ಯಾಕ್ಟರಿಗೆ ಸೈಕಲ್ ಮೇಲೆ ಹೋಗಿಬಂದು ಮಾಡುತ್ತಿದ್ದಳು.
ಸೋಮವಾರ ಕೆಲಸಕ್ಕೆ ತೆರಳಿದ್ದ ಯುವತಿ ಸಂಜೆ ಎಷ್ಟು ಹೊತ್ತಾದರೂ ಮನೆಗೆ ಮರಳಿ ಬಾರದಿದ್ದರಿಂದ ಆಕೆಯ ಪೋಷಕರು ಮತ್ತು ಬಂಧುಗಳು ಹುಡುಕಾಟ ನಡೆಸಿದ್ದರು. ನಂತರ ತಡರಾತ್ರಿ ಆಕೆಯ ಶವ ಫ್ಯಾಕ್ಟರಿ ಬಳಿಯ ವೀಳ್ಯದೆಲೆ ಬೆಳೆಯುವ ತೋಟದಲ್ಲಿ ಸಿಕ್ಕಿತ್ತು. [ಈ ವಿಡಿಯೋ ನೋಡಿರಿ]












Click it and Unblock the Notifications